ಬುಧವಾರ, ಫೆಬ್ರವರಿ 28, 2024
ಲೋಕಸಭೆ ಚುನಾವಣೆ ಹೊತ್ತಿನಲ್ಲಿಯೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್ ಗೆ ಸಿಬಿಐ ಸಮನ್ಸ್.!-ರಾಜೀನಾಮೆ ಸುಳ್ಳು ಸುದ್ದಿ ; ನಾನಿನ್ನೂ ರಾಜೀನಾಮೆ ನೀಡಿಲ್ಲ,5 ವರ್ಷ ನಮ್ಮದೇ ಸರ್ಕಾರ: ಹಿಮಾಚಲ ಸಿಎಂ-ಹಿರಿಯ ನಟಿ ಮತ್ತು ರಾಜಕಾರಣಿ ಜಯಪ್ರದಾರನ್ನು ಬಂಧಿಸುವಂತೆ ಕೋರ್ಟ್ ಆದೇಶ.!-ರಾಜ್ಯದಲ್ಲಿ ವಿದ್ಯುತ್ ದರ ಇಳಿಕೆಗೆ ಸರ್ಕಾರ ಆದೇಶ; ಹೇಗಿದೆ ಪರಿಷ್ಕೃತ ದರ?-ಮಂಗಳೂರು : ಖಾಸಗಿ ಬಸ್ ಸಾರಿಗೆ ಉದ್ಯಮಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು.!-RCB ತಂಡದ ಸ್ಟಾರ್ ಆಟಗಾರ್ತಿ ಹಾಗೂ ಕನ್ನಡತಿ ಶ್ರೇಯಾಂಕಾ ಪಾಟೀಲ್ ಗೆ ಅಭಿಮಾನಿಯಿಂದ ಮದುವೆ ಪ್ರಸ್ತಾಪ..!-Accident: ಟ್ರಕ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸಾವು!-ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಸಂತನ್ ಸಾವು..!-ಮಂಗಳೂರು: ಪಾಕಿಸ್ತಾನ ಪರ ಘೋಷಣೆ ; ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ..!-ಬಿಸಿ ರೋಡು ಸೇರಿ ದಕ್ಷಿಣ ಕನ್ನಡದ ಹಲವು ನೋಂದಾವಣಾ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ. ವಾರಗಟ್ಟಲೆ ಹೈರಾಣದ ನಾಗರಿಕರು
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಜುಲೈ 1ರಿಂದ ಚಂದನ ಟಿವಿ ಯಲ್ಲಿ ಪ್ರಸಾರ ಆರಂಭಗೊಳ್ಳಲಿದೆ ಮಕ್ಕಳ ಪಾಠ!!

Twitter
Facebook
LinkedIn
WhatsApp
ಜುಲೈ 1ರಿಂದ ಚಂದನ ಟಿವಿ ಯಲ್ಲಿ ಪ್ರಸಾರ ಆರಂಭಗೊಳ್ಳಲಿದೆ ಮಕ್ಕಳ ಪಾಠ!!

ಬೆಂಗಳೂರು: ಹೊಸ ಶಿಕ್ಷಣ ನೀತಿ ಜಾರಿಗೊಳಿಸುತ್ತಿರುವ ಸಂದರ್ಭದಲ್ಲಿ ಸಂಶೋಧನಾ ಹಾಗೂ ತರಬೇತಿ ಸಂಸ್ಥೆಗಳು ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಹೆಚ್ಚಿನ ಗಮನಹರಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಈ ವರ್ಷದ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುವ ಇದೇ ಜು. 1ರಿಂದ ದೂರದರ್ಶನದ ಚಂದನಾ ವಾಹಿನಿ ಮೂಲಕ ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿದಿನ ವಿಡಿಯೋ ಪಾಠಗಳನ್ನು ಪ್ರಸಾರ ಮಾಡಲಾಗುತ್ತದೆ. ಈ ತರಗತಿಗಳು ಬೆಳಗಿನ 8 ಗಂಟೆಯಿಂದ ಸಂಜೆ 4ರವರೆಗೆ ನಡೆಯಲಿದ್ದು, ತರಗತಿವಾರು ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಮರಾಠಿ ಮಾಧ್ಯಮದ ಪಾಠಗಳನ್ನು ಯೂ-ಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಚಂದನದಲ್ಲಿ ಪ್ರತಿದಿನ ವಿಡಿಯೋ ಪಾಠಗಳ ಪ್ರಸಾರ: ಈ ವರ್ಷದ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುವ ಇದೇ ಜುಲೈ1ರಿಂದ ದೂರದರ್ಶನದ ಚಂದನ ವಾಹಿನಿ ಮೂಲಕ ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿದಿನ ವಿಡಿಯೋ ಪಾಠಗಳನ್ನು ಪ್ರಸಾರ ಮಾಡಲಾಗುವುದು. ಕನ್ನಡ, ಇಂಗ್ಲಿಷ್ ಮತ್ತು ಉರ್ದು ಮಾಧ್ಯಮದ ಪಾಠಗಳು ಪ್ರಸಾರವಾಗಲಿವೆ. ಈ ತರಗತಿಗಳು ಬೆಳಗಿನ 8 ಗಂಟೆಯಿಂದ ಸಂಜೆ 4ರವರೆಗೆ ನಡೆಯಲಿದ್ದು, ತರಗತಿವಾರು ವೇಳಾಪಟ್ಟಿ ನಿಗದಿಪಡಿಸಲಾಗಿದೆ.

ಜು.1ರಿಂದ ಆರಂಭವಾಗಲಿರುವ ಸೇತುಬಂಧ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮೊದಲಿಗೆ ಪೂರ್ವ ಪರೀಕ್ಷೆ ನಡೆಸಲಾಗುತ್ತದೆ. ಫ‌ಲಿತಾಂಶ ಆಧರಿಸಿ ಎ, ಬಿ, ಸಿ ಗ್ರೇಡ್‌ ವಿದ್ಯಾರ್ಥಿಗಳೆಂದು ವಿಂಗಡಿಸಲಾಗುತ್ತದೆ. ಮೂರು ವಾರಗಳ ಕಾಲ ಈ ಬೋಧ‌ನೆ ನಡೆಯಲಿದೆ. ಪೂರ್ವ ಪರೀಕ್ಷೆ, ಪರಿಹಾರ ಬೋಧನೆಯ ಬಳಿಕ ಕೊನೆಯದಾಗಿ ಸಾಫ‌ಲ್ಯ ಪರೀಕ್ಷೆ ನಡೆಯಲಿದೆ. ಇದರಲ್ಲಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಶಿಕ್ಷಕರು ನಿರ್ಧರಿಸಲಿದ್ದಾರೆ.

ದೂರದರ್ಶನ ಪಾಠಕ್ರಮ ವಿವರ: ದೂರದರ್ಶನ ಪಾಠ ಕ್ರಮ ಈ ರೀತಿ ಇರಲಿದೆ. 1,2, 3ನೇ ತರಗತಿ ಮಕ್ಕಳಿಗೆ ರವಿವಾರ 1.30ರಿಂದ 12, 1.30ರಿಂದ 2 ರ ತನಕ ನಲಿಕಲಿ ತರಗತಿ ನಡೆಯಲಿದೆ. 4ನೇ ತರಗತಿ ಮಕ್ಕಳಿಗೆ ಶನಿವಾರ 10ರಿಂದ 10.30 ಹಾಗೂ 10.30ರಿಂದ 11ರ ತನಕ, ರವಿವಾರ 10ರಿಂದ 10.30, 10.30ರಿಂದ 11ರ ತನಕ ಕನ್ನಡ, ಪರಿಸರ ಅಧ್ಯಯನ, ಗಣಿತ ತರಗತಿಗಳು ನಡೆಯಲಿವೆ. 5ನೇ ತರಗತಿ ಮಕ್ಕಳಿಗೆ ಶನಿವಾರ 9ರಿಂದ 9.30, 9.30ರಿಂದ 10, ರವಿವಾರ 9ರಿಂದ 9.30, 9.30ರಿಂದ 10ರ ತನಕ ಕನ್ನಡ, ಗಣಿತ, ಪರಿಸರ ಅಧ್ಯಯನ ತರಗತಿಗಳು ನಡೆಯಲಿವೆ. 6ನೇ ತರಗತಿ ಮಕ್ಕಳಿಗೆ ಗುರುವಾರ 10.30ರಿಂದ 11, 11.30ರಿಂದ 12, 1.30ರಿಂದ 2ರ ತನಕ ಕನ್ನಡ, ಇಂಗ್ಲಿಷ್‌, ಗಣಿತ, ಹಿಂದಿ, ವಿಜ್ಞಾನ, ಸಮಾಜ ವಿಷಯಗಳ ಕುರಿತು ತರಗತಿ ನಡೆಯಲಿವೆ. 7ನೇ ತರಗತಿಗೆ ಗುರುವಾರ 9ರಿಂದ 9.30, 9.30ರಿಂದ 10.00, 10ರಿಂದ 10.30 ರ ತನಕ ಹಾಗೂ ಶುಕ್ರವಾರ 9ರಿಂದ 9.30, 9.30ರಿಂದ 10,  10ರಿಂದ 10.30ರ ತನಕ ಇಂಗ್ಲಿಷ್‌, ಗಣಿತ, ಕನ್ನಡ, ವಿಜ್ಞಾನ, ಸಮಾಜ, ಹಿಂದಿ ವಿಷಯಗಳ ತರಗತಿಗಳು ನಡೆಯಲಿವೆ.

ಸರಕಾರದಿಂದ ಸುತ್ತೋಲೆ ಬಂದ ತತ್‌ಕ್ಷಣದಿಂದಲೇ ತಯಾರಿ ಆರಂಭಿಸಿದ್ದೇವೆ. ಈ ಬಗ್ಗೆ ಎಲ್ಲ ಶಾಲೆಗಳಿಗೂ ಸೂಚನೆ ನೀಡಿ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಲು ಶಿಕ್ಷಕರಿಗೆ ಸೂಚಿಸಲಾಗಿದೆ. ಪ್ರಾಥಮಿಕ, ಪ್ರೌಢಶಾಲೆಯ ಶಿಕ್ಷಕರು ಈ ನಿಟ್ಟಿನಲ್ಲಿ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಅವರಿಗೆ ಅಗತ್ಯವಿರುವ ಸಲಹೆ-ಸೂಚನೆಗಳನ್ನು ನೀಡಲಾಗುತ್ತದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಕಳೆದ ಒಂದು ವಾರದಿಂದ ಬಂಟ್ವಾಳ ಸಬ್ ರಿಜಿಸ್ಟರ್ ಕೇಂದ್ರದಲ್ಲಿ ಹಲವಾರು ದಾಖಲ ಪತ್ರಗಳ ರಿಜಿಸ್ಟ್ರೇಷನ್ ಆಗದೆ ನಾಗರಿಕರು ಪರದಾಡುತ್ತಿದ್ದಾರೆ ಎಂಬ ಮಾಹಿತಿ ಮಾಧ್ಯಮಕ್ಕೆ ಲಭ್ಯವಾಗಿದೆ.

ಬಿಸಿ ರೋಡು ಸೇರಿ ದಕ್ಷಿಣ ಕನ್ನಡದ ಹಲವು ನೋಂದಾವಣಾ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ. ವಾರಗಟ್ಟಲೆ ಹೈರಾಣದ ನಾಗರಿಕರು

ಬಿಸಿ ರೋಡು ಸೇರಿ ದಕ್ಷಿಣ ಕನ್ನಡದ ಹಲವು ನೋಂದಾವಣಾ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ. ವಾರಗಟ್ಟಲೆ ಹೈರಾಣದ ನಾಗರಿಕರು Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡದ ಹಲವಾರು ಸಬ್ ರಿಜಿಸ್ಟರ್ ಗಳಲ್ಲಿ ಕಳೆದ

ಅಂಕಣ

Vicky and team's reels

Video: ವಿರುಷ್ಕಾ ದಂಪತಿಯ ಮಗುವಿನ ಅಕಾಯ್​ ಹೆಸರಿನ ಬಗ್ಗೆ ವಿಕ್ಕಿ ಆ್ಯಂಡ್​ ಟೀಮ್​ನ Reels Viral!

Video: ವಿರುಷ್ಕಾ ದಂಪತಿಯ ಮಗುವಿನ ಅಕಾಯ್​ ಹೆಸರಿನ ಬಗ್ಗೆ ವಿಕ್ಕಿ ಆ್ಯಂಡ್​ ಟೀಮ್​ನ ರೀಲ್ಸ್ ವೈರಲ್! Twitter Facebook LinkedIn WhatsApp ನಾನು ನಂದಿನಿ ಖ್ಯಾತಿಯ ವಿಕ್ಕಿ ಆ್ಯಂಡ್​ ಟೀಮ್​! ಇದಾಗಲೇ ಹಲವಾರು ರೀಲ್ಸ್​ಗಳನ್ನು

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು