ಜಾತ್ರೆಗೆ ಹೋಗುತ್ತೇನೆಂದು ಹೇಳಿ ಹೋಗಿದ್ದ ಯುವಕ; ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!
ಹೊನ್ನಾವರ (ಏ.6) : ತಾಲೂಕಿನ ನಗರೆ ಮಾರಿಮನೆಯ ಗಗನ ರವಿ ನಾಯ್ಕ (21) ಗೋವಾದ ಬೀಚ್ ವೊಂದರ ಸಮೀಪ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ.
ರಾಮನವಮಿ ದಿನ(Ramanavami)ದಂದು ಮನೆಯಿಂದ ಹೊನ್ನಾವರ ಜಾತ್ರೆಗೆ ಹೋಗುತ್ತೇನೆ ಎಂದು ಮೂರು ಜನ ಸ್ನೇಹಿತರೊಂದಿಗೆ ಮನೆಯಲ್ಲಿ ಹೇಳದೇ ಗೋವಾಗೆ ಹೋಗಿದ್ದನು ಎನ್ನಲಾಗಿದೆ. ನೆರೆ ರಾಜ್ಯ ಗೋವಾ ಹೋದ ಬಳಿಕ ಮನೆಗೆ ಬೇರೊಂದು ಸಂಖ್ಯೆಯಿಂದ ಕರೆ ಮಾಡಿ ಸಂಬಂಧಿಕರ ಮನೆಯಲ್ಲಿ ಇರುವುದಾಗಿ ತಿಳಿಸಿದ್ದ. ಜೊತೆಗಿದ್ದ ಸ್ನೇಹಿತರು ವಾಪಾಸ್ ಬಂದ ಬಳಿಕ ಈತನು ಗೋವಾದಲ್ಲೇ ಇರದೇ ಮನೆಗೆ ಬಾರದ ಮಗನನ್ನು ಮನೆಯವರು ಹುಡುಕುತ್ತಾ ಇರುವಾಗ ಮೃತ ಪಟ್ಟಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಹರೆಯದ ಹುಡುಗನ ಸಾವಿಗೆ ಅಸಲಿ ಕಾರಣವೇನು? ಜೊತೆಗಿದ್ದ ಸ್ನೇಹಿತರಿಗೆ ಈತ ಹೇಳಿದ್ದು ಏನು? ಅಸಲಿಗೆ ಅಲ್ಲಿ ನಡೆದಿದ್ದೇನು ಎನ್ನುವ ಹತ್ತು ಹಲವು ಅನುಮಾನಗಳಿಗೆ ಉತ್ತರ ಸೂಕ್ತ ತನಿಖೆಯಿಂದ ದೊರೆಯಬೇಕಿದೆ. ಪುತ್ರನನ್ನು ಕಳೆದುಕೊಂಡ ಆತನ ಕುಟುಂಬದ ದುಃಖ, ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಯುವಕ ಕುಟುಂಬಕ್ಕೆ ಒಬ್ಬನೆ ಮಗನಾಗಿದ್ದ, ತಂದೆ ಸಾಕಷ್ಟುಜಮೀನು ಹೊಂದಿದ್ದು ಕೃಷಿ ಬೇಸಾಯ ಜೊತೆಗೆ ಉಧ್ಯಮದಲ್ಲೂ ತೊಡಗಿಕೊಂಡಿದ್ದರು. .