ಮಂಗಳವಾರ, ಮೇ 30, 2023
ಹಾವನ್ನು ಸೆರೆ ಹಿಡಿಯಲು ಹೋದಾಗ ನಾಗರ ಹಾವು ಕಚ್ಚಿ ಸ್ನೇಕ್ ನರೇಶ್ ಸಾವು!-ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ - ಸುನಿಲ್ ಕುಮಾರ್-ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ - ಸುನಿಲ್ ಕುಮಾರ್-ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ; ಪದಕಗಳನ್ನು ಗಂಗಾ ನದಿಗೆ ಎಸೆಯಲು ಕುಸ್ತಿಪಟುಗಳ ನಿರ್ಧಾರ-ಕ್ರೋಮಿಂಗ್ ಟ್ರೆಂಡ್ ಗೆ ಬಲಿಯಾದ 13 ವರ್ಷದ ಬಾಲಕಿ! ಬ್ಲೂವೇಲ್ ರೀತಿಯ ಈ ಗೇಮಿಂಗ್ ಯಾವುದು?-ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಕಾಲ ಬೆರಳಿಗೆ ಹಾವು ಕಡಿದು ವಿದ್ಯಾರ್ಥಿನಿ ಸಾವು-ಮಹಿಳೆಯರಿಗೂ ಕಂಬಳದಲ್ಲಿ ಅವಕಾಶ, ತರಬೇತಿಗೆ ಸಿದ್ಧವಾಗುತ್ತಿದೆ ವೇದಿಕೆ-ದುಬಾರಿ ಕಾರು ಬಿಟ್ಟು ಆಟೋದಲ್ಲಿ ಪ್ರಯಾಣಿಸಿದ ನಟಿ ಇರಾ ಖಾನ್‌-ಉಡುಪಿ : ಗೇರುಬೀಜ ಸಾಗಾಟದ ಲಾರಿ ಪಲ್ಟಿ ಅಪಾಯದಿಂದ ಪಾರಾದ ಚಾಲಕ-ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: ರಾಮಲಿಂಗಾರೆಡ್ಡಿ ಘೋಷಣೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಜಗತ್ತಿನ 4 ನೇ ಅತೀ ದೊಡ್ಡ ಬಲಿಷ್ಠ ಆರ್ಥಿಕತೆಯ ದೇಶ ಜರ್ಮನಿಗೂ ಆರ್ಥಿಕ ಸಂಕಷ್ಟ!

Twitter
Facebook
LinkedIn
WhatsApp
24

ಬರ್ಲಿನ್‌ (ಮೇ.26): ಅಮೆರಿಕ ಸೇರಿದಂತೆ ಬಹುತೇಕ ದೇಶಗಳು ಆರ್ಥಿಕ ಹಿಂಜರಿಕೆಯಿಂದ ನರಳುತ್ತಿರುವಾಗ ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಜರ್ಮನಿಗೂ ಇದೀಗ ಆರ್ಥಿಕ ಹಿಂಜರಿಕೆ ಕಾಲಿಟ್ಟಿದೆ. ಜರ್ಮನಿಯಲ್ಲಿ ಹಣದುಬ್ಬರ ವಿಪರೀತ ಏರಿಕೆಯಾಗಿದ್ದು, ಸತತ ಎರಡು ತ್ರೈಮಾಸಿಕಗಳಲ್ಲಿ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಋುಣಾತ್ಮಕ ಪ್ರಗತಿ ಸಾಧಿಸಿದೆ. ಜಿಡಿಪಿ ಸತತ ಎರಡು ತ್ರೈಮಾಸಿಕಗಳಲ್ಲಿ ಋುಣಾತ್ಮಕ ಪ್ರಗತಿಯನ್ನು ದಾಖಲಿಸಿದರೆ ಅದನ್ನು ಆರ್ಥಿಕ ಹಿಂಜರಿಕೆ ಎನ್ನುತ್ತಾರೆ. 

ಯುರೋಪಿಯನ್‌ ಒಕ್ಕೂಟದಲ್ಲೇ ಅತ್ಯಂತ ಬಲಾಢ್ಯ ದೇಶವೆಂದು ಜರ್ಮನಿಯನ್ನು ಗುರುತಿಸಲಾಗುತ್ತದೆ. ಯುರೋಪ್‌ನ ಆರ್ಥಿಕ ಎಂಜಿನ್‌ ಎಂದು ಪರಿಗಣಿಸಲ್ಪಡುವ ಈ ದೇಶದಲ್ಲೀಗ ಆರ್ಥಿಕ ಹಿಂಜರಿಕೆ ಆರಂಭವಾಗಿರುವುದು ಜಾಗತಿಕ ಆರ್ಥಿಕತೆಯನ್ನು ಇನ್ನಷ್ಟುಆತಂಕಕ್ಕೆ ತಳ್ಳಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜರ್ಮನಿಯ ಜಿಡಿಪಿ ಶೇ.0.3ರಷ್ಟುಕುಸಿತ ಕಂಡಿದೆ. ಕಳೆದ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಜಿಡಿಪಿ ಶೇ.0.5ರಷ್ಟುಕುಸಿತ ಕಂಡಿತ್ತು. ಇದರೊಂದಿಗೆ ಜಾಗತಿಕ ರೇಟಿಂಗ್‌ ಏಜೆನ್ಸಿಗಳು ಜರ್ಮನಿಯ ರೇಟಿಂಗ್‌ ಇಳಿಕೆ ಮಾಡಿವೆ. 

ಈಗ ಜರ್ಮನಿ ಸರ್ಕಾರ ಸಾಲ ಮರುಪಾವತಿ ಹಾಗೂ ವಿವಿಧ ಬಿಲ್‌ಗಳನ್ನು ಪಾವತಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದೆ. ‘ಭಾರಿ ಪ್ರಮಾಣದ ಹಣದುಬ್ಬರದಿಂದಾಗಿ ಜರ್ಮನಿಯ ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಿಂದಾಗಿ ಇಡೀ ದೇಶದ ಆರ್ಥಿಕತೆ ಮಂಡಿಯೂರಿ ಕುಳಿತುಕೊಂಡಿದೆ’ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. 

ಜರ್ಮನಿಯಲ್ಲಿ ತೀವ್ರ ಹಣದುಬ್ಬರದಿಂದಾಗಿ ಬೆಲೆಗಳು ಯದ್ವಾತದ್ವಾ ಏರಿಕೆಯಾಗಿದ್ದು, ಗೃಹಬಳಕೆ ವಸ್ತುಗಳ ಖರೀದಿ ಶೇ.1.2ರಷ್ಟುಇಳಿಕೆಯಾಗಿದೆ. ಸರ್ಕಾರದ ವೆಚ್ಚ ಕೂಡ ಶೇ.4.9ರಷ್ಟು ಕುಸಿದಿದೆ. ತೈಲ ಬೆಲೆ ವಿಪರೀತ ಏರಿಕೆಯಾಗಿದೆ. ‘ಜನರ ಖರೀದಿ ಶಕ್ತಿ ಕುಸಿತ, ಔದ್ಯೋಗಿಕ ಉತ್ಪಾದನೆ ಹಾಗೂ ಬೇಡಿಕೆಯಲ್ಲಿ ಕುಸಿತ, ಬಿಗಿಯಾದ ಹಣಕಾಸು ನೀತಿಗಳು ಹಾಗೂ ಅಮೆರಿಕದಲ್ಲಿನ ಆರ್ಥಿಕ ಹಿಂಜರಿಕೆ ಈ ಎಲ್ಲ ಅಂಶಗಳು ಜರ್ಮನಿಯ ಆರ್ಥಿಕ ಹಿಂಜರಿಕೆಗೆ ಕಾರಣವಾಗಿವೆ’ ಎಂದು ತಜ್ಞರು ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ