ಮಂಗಳವಾರ, ಮೇ 30, 2023
ಹಾವನ್ನು ಸೆರೆ ಹಿಡಿಯಲು ಹೋದಾಗ ನಾಗರ ಹಾವು ಕಚ್ಚಿ ಸ್ನೇಕ್ ನರೇಶ್ ಸಾವು!-ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ - ಸುನಿಲ್ ಕುಮಾರ್-ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ - ಸುನಿಲ್ ಕುಮಾರ್-ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ; ಪದಕಗಳನ್ನು ಗಂಗಾ ನದಿಗೆ ಎಸೆಯಲು ಕುಸ್ತಿಪಟುಗಳ ನಿರ್ಧಾರ-ಕ್ರೋಮಿಂಗ್ ಟ್ರೆಂಡ್ ಗೆ ಬಲಿಯಾದ 13 ವರ್ಷದ ಬಾಲಕಿ! ಬ್ಲೂವೇಲ್ ರೀತಿಯ ಈ ಗೇಮಿಂಗ್ ಯಾವುದು?-ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಕಾಲ ಬೆರಳಿಗೆ ಹಾವು ಕಡಿದು ವಿದ್ಯಾರ್ಥಿನಿ ಸಾವು-ಮಹಿಳೆಯರಿಗೂ ಕಂಬಳದಲ್ಲಿ ಅವಕಾಶ, ತರಬೇತಿಗೆ ಸಿದ್ಧವಾಗುತ್ತಿದೆ ವೇದಿಕೆ-ದುಬಾರಿ ಕಾರು ಬಿಟ್ಟು ಆಟೋದಲ್ಲಿ ಪ್ರಯಾಣಿಸಿದ ನಟಿ ಇರಾ ಖಾನ್‌-ಉಡುಪಿ : ಗೇರುಬೀಜ ಸಾಗಾಟದ ಲಾರಿ ಪಲ್ಟಿ ಅಪಾಯದಿಂದ ಪಾರಾದ ಚಾಲಕ-ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: ರಾಮಲಿಂಗಾರೆಡ್ಡಿ ಘೋಷಣೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಚೆನ್ನೈ ತಂಡದಲ್ಲಿ ಎಲ್ಲವೂ ಸರಿ ಇಲ್ಲ ; ಜಡೇಜಾರನ್ನು ಸಮಾಧಾನ ಪಡಿಸಿದ ಸಿಇಒ ಕಾಸಿ ವಿಶ್ವನಾಥ್!

Twitter
Facebook
LinkedIn
WhatsApp
WhatsApp Image 2023 05 26 at 7.45.24 AM

ರವೀಂದ್ರ ಜಡೇಜಾ ಅವರು ಎಂಎಸ್​ ಧೋನಿ ಜೊತೆ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಅಭಿಮಾನಿಗಳು ಜಡೇಜಾ ತಂಡವನ್ನು ತೊರೆಯುತ್ತಾರಾ ಎಂಬ ಆತಂಕಕ್ಕೂ ಒಳಗಾಗಿದ್ದಾರೆ.

16ನೇ ಆವೃತ್ತಿಯ ಐಪಿಎಲ್ (IPL 2023)​ ಮುಕ್ತಾಯದ ಸನಿಹಕ್ಕೆ ಬಂದು ನಿಂತಿದೆ. ಎರಡು ತಿಂಗಳಿಂದ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣ ಬಡಿಸಿದ್ದ ಕಲರ್​ ಲೀಗ್​ಗೆ ಮೇ 28ರಂದು ಅದ್ಧೂರಿ ತೆರೆ ಬೀಳಲಿದೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್​ ಫೈನಲ್ (CSK Final)​ ಪ್ರವೇಶಿಸಿದ್ದು, ತನ್ನ ಎದುರಾಳಿ ತಂಡಕ್ಕಾಗಿ ಎದುರು ನೋಡುತ್ತಿದೆ

ಮೇ 26ರಂದು ನಡೆಯುವ ಮುಂಬೈ ಇಂಡಿಯನ್ಸ್​ ಮತ್ತು ಗುಜರಾತ್ ಟೈಟಾನ್ಸ್​​ ತಂಡಗಳ (MI vs GT Match) ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್​ನಲ್ಲಿ ಆಡಲಿದೆ. ಇದರ ನಡುವೆಯೇ ಚೆನ್ನೈ ಸೂಪರ್ ಕಿಂಗ್ಸ್​ (Chennai Super Kings) ಕ್ಯಾಂಪ್​ನಿಂದ ಶಾಕಿಂಗ್​ ಸುದ್ದಿಯೊಂದು ಹೊರ ಬಿದ್ದಿದೆ. ಸಿಎಸ್​ಕೆ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಹೊರಬಿದ್ದಿದೆ.

ಇವುಗಳನ್ನು ಪುಷ್ಠೀಕರಿಸುವ ಕೆಲವು ಸನ್ನಿವೇಶಗಳೂ ನಡೆದಿದ್ದು, ಯಲ್ಲೋ ಆರ್ಮಿ ಫ್ಯಾನ್ಸ್​ ಆತಂಕಕ್ಕೆ ಒಳಗಾಗಿದ್ದಾರೆ. ನಿಜ, ರವೀಂದ್ರ ಜಡೇಜಾ ಅವರು ಎಂಎಸ್​ ಧೋನಿ (Ravindra Jadeja vs MS Dhoni) ಜೊತೆಗೆ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಅಭಿಮಾನಿಗಳು ಜಡೇಜಾ ತಂಡವನ್ನು ತೊರೆಯುತ್ತಾರಾ ಎಂಬ ಆತಂಕಕ್ಕೂ ಒಳಗಾಗಿದ್ದಾರೆ.

ಮೇ 20ರಂದು ನಡೆದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಎದುರಿನ ಪಂದ್ಯದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್​ ನಾಯಕ ಧೋನಿ ಹಾಗೂ ಆಲ್​ರೌಂಡರ್​ ರವೀಂದ್ರ ಜಡೇಜಾ ಮಧ್ಯೆ ಮೈದಾನದಲ್ಲೇ ವಾಕ್ಸಮರ ನಡೆದಿತ್ತು. ಅಂದು ಎಲ್ಲಾ ಪ್ಲೇಯರ್ಸ್​ ಪ್ಲೇ ಆಫ್​ಗೆ ಎಂಟ್ರಿಕೊಟ್ಟ ಸಂಭ್ರಮದಲ್ಲಿ ಇದ್ದರೆ, ಇತ್ತ ಜಡೇಜಾಗೆ ಧೋನಿ ತರಾಟೆ ತೆಗೆದುಕೊಂಡಿದ್ರು.

ಧೋನಿ ಮಾತುಗಳನ್ನು ಕೇಳುತ್ತಿದ್ದ ಜಡೇಜಾ, ಮುಖದಲ್ಲಿ ಮಗು ಮಾಯವಾಗಿತ್ತು. ಅಲ್ಲದೆ ಬೇಸರದಿಂದ ಜಡ್ಡು ಡಗೌಟ್​ಗೆ ತೆರಳಿದ್ದರು. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದವು. ಅಂದು ತಂಡದಲ್ಲಿ ತೊರೆಯಬೇಕೆಂದರೆ ತೊರೆದು ಬಿಡು ಎಂದು ಧೋನಿ ಹೇಳಿರುವ ರೀತಿ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

ಇದರ ಬೆನ್ನಲ್ಲೇ ಮರು ದಿನವೇ ಜಡೇಜಾ ತನ್ನ ಸೋಷಿಯಲ್​ ಮೀಡಿಯಾದಲ್ಲಿ ಕರ್ಮ ಯಾರನ್ನೂ ಬಿಡಲ್ಲ ಎನ್ನುವ ಅರ್ಥದಲ್ಲಿ ಪೋಸ್ಟ್​ ಹಾಕಿದ್ದರು. ಕರ್ಮ ನಿಮಗೂ ಬರುತ್ತದೆ. ತಕ್ಷಣವೇ ಬರಬಹುದು ಅಥವಾ ತಡವೂ ಆಗಬಹುದು. ಆದರೆ ಖಂಡಿತವಾಗಿ ಬರುತ್ತದೆ ಎಂಬ ಪೋಸ್ಟ್​ ಅನ್ನು ಟ್ವಿಟರ್​ನಲ್ಲಿ ಜಡೇಜಾ ಶೇರ್​ ಮಾಡಿದ್ದರು. ಪತ್ನಿ ರಿವಾಬಾ ಈ ಪೋಸ್ಟ್​ಗ್ರ ಪ್ರತಿಕ್ರಿಯಿಸಿ, ನಿಮ್ಮ ಸ್ವಂತ ಹಾದಿಯನ್ನು ಅನುಕರಣೆ ಮಾಡಿ ಎಂದಿದ್ದರು.

ಎಲ್ಲರೂ ಇದು ಇಲ್ಲಿಗೆ ಮುಗಿಯಿತು ಎಂದುಕೊಂಡಿದ್ದರು. ಆದರೆ ಈಗ ಮತ್ತೆ ಶುರುವಾಗಿದೆ. ಮೊದಲ ಕ್ವಾಲಿಫೈಯರ್ ಪಂದ್ಯದ ಬಳಿಕ ಮತ್ತೊಂದು ಘಟನೆ ನಡೆದಿದೆ. ಕ್ವಾಲಿಫೈಯರ್​​ನಲ್ಲಿ ಗುಜರಾತ್​ ವಿರುದ್ಧ ಗೆದ್ದ ಸಂಭ್ರಮದಲ್ಲಿ ಆಟಗಾರರು ಇದ್ದರು. ಆದರೆ ರವೀಂದ್ರ ಜಡೇಜಾ ಒಬ್ಬಂಟಿಯಾಗಿ ತೆರಳಿದ್ದು ಭಾರಿ ಚರ್ಚೆಯಾಗಿತ್ತು.

ಸಿಎಸ್​ಕೆ ಸಿಇಒ ಮಾತುಕತೆ

ಇದೇ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಸಿ ವಿಶ್ವನಾಥನ್ (CSK CEO Kasi Viswanathan) ಅವರು ಆಲ್​ರೌಂಡರ್ ರವೀಂದ್ರ ಜಡೇಜಾ ಅವರನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ. ಕೆಲ ಹೊತ್ತು ಕಾಸಿ ವಿಶ್ವನಾಥನ್ ಅವರು ಜಡೇಜಾ ಜೊತೆ ಮಾತುಕತೆ ನಡೆಸಿದ್ದಾರೆ. ಬಳಿಕವೂ ಜಡೇಜಾ ನಿರಾಸೆಯಿಂದಲೇ ಹೊರಟರು.

ವಿಶ್ವನಾಥನ್ ಅವರು ಜಡೇಜಾರನ್ನು ಸಮಾಧಾನಪಡಿಸುತ್ತಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಹಾಗಾಗಿ ಸಿಎಸ್​ಕೆ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಜೋರಾಗಿವೆ. ಕಳೆದ ವರ್ಷವೂ ಜಡೇಜಾ, ಚೆನ್ನೈ ಫ್ರಾಂಚೈಸಿ ಜೊತೆಗೆ ಮುನಿಸಿಕೊಂಡಿದ್ದರು. ನಾಯಕತ್ವ ನೀಡಿ ಅರ್ಧಕ್ಕೆ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿದ್ದು ಇದಕ್ಕೆ ಕಾರಣ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ