ಗುರುವಾರ, ಜುಲೈ 25, 2024
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಂಗಳೂರಿನ ಶ್ರೀಯುತ ಮೋಹನ್ ಶೆಟ್ಟಿ ವಿಧಿವಶ-Anandpur: ಮದುವೆಯಾಗುವಂತೆ ಪೀಡಿಸುತ್ತಿದ್ದಾಳೆಂದು ಪ್ರೇಯಸಿ ಕೊಲೆ ಮಾಡಿದ ಪ್ರಿಯಕರ-ಮುಡಾ ಸೈಟ್ ಕೋಲಾಹಲ: ಬಿಜೆಪಿ ಶಾಸಕರಿಂದ ಸದನದಲ್ಲಿ ಶ್ರೀರಾಮನ ಭಜನೆ-Shiroor: ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಟ್ರಕ್ ಗಂಗಾವಳಿ ನದಿಯಲ್ಲಿ ಪತ್ತೆ-Ladies PG: ಬೆಂಗಳೂರಿನಲ್ಲಿ ಲೇಡಿಸ್ ಪಿಜಿಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ!-ಕಾಂಗ್ರೆಸ್​ ಹಿರಿಯ ನಾಯಕ ಮರಿಗೌಡ ಪಾಟೀಲ್ ಹುಲ್ಕಲ್ ನಿಧನ-Shimoga: ರಸ್ತೆ ಅಪಘಾತ; ಶಿವಮೊಗ್ಗ ಧರ್ಮಪ್ರಾಂತ್ಯದ ಫಾ.ಆಂಟನಿ ಪೀಟರ್ ಇನ್ನಿಲ್ಲ-Mudra loan: ಮುದ್ರಾ ಸಾಲದ ಮಿತಿ 10 ಲಕ್ಷದಿಂದ 20 ಲಕ್ಷ ರೂಗೆ ಏರಿಕೆ; ಉದ್ದಿಮೆದಾರರಿಗೆ ಉತ್ತೇಜನ-Gold Rate: ಬಜೆಟ್‌ ಬೆನ್ನಲ್ಲೇ ಚಿನ್ನ, ಬೆಳ್ಳಿ ದರ ದಿಢೀರ್‌ ಇಳಿಕೆ-Sanket: ಮಹಿಳಾ ನಿರ್ದೇಶಕಿಯ ಅದ್ಭುತ ನಿರ್ದೇಶನ, ಅಂತರಾಷ್ಟ್ರೀಯ ಮಟ್ಟದ ಬಿಜಿಎಂ, ಕಲಾವಿದರ ಅದ್ಭುತ ಅಭಿನಯ ದಿಂದ ಮನಸೂರೆಗೊಂಡಿರುವ ಕನ್ನಡ ಚಲನಚಿತ್ರ ಸಾಂಕೇತ್ ಜುಲೈ 26ಕ್ಕೆ ಬಿಡುಗಡೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಚೆಂದುಳ್ಳಿ ಚೆಲುವೆ, ಸಂಸದೆ ನುಸ್ರತ್ ಜಹಾನ್ ಸಂಸಾರದಲ್ಲಿ ಬಿರುಗಾಳಿ!!

Twitter
Facebook
LinkedIn
WhatsApp
ಚೆಂದುಳ್ಳಿ ಚೆಲುವೆ, ಸಂಸದೆ ನುಸ್ರತ್ ಜಹಾನ್ ಸಂಸಾರದಲ್ಲಿ ಬಿರುಗಾಳಿ!!

ಕೊಲ್ಕತ್ತಾ:ಕಳೆದ ಲೋಕಸಭಾ ಚುನಾವಣೆ ವೇಳೆ ಲೋಕಸಭೆ ಪ್ರವೇಶಿಸಿದ್ದವರ ಪೈಕಿ ಅತ್ಯಂತ ಹೆಚ್ಚು ಗಮನ ಸೆಳೆದ ಟಿಎಂಸಿ ಸಂಸದೆ ನುಸ್ರತ್ ಜಹಾನ್.

ಈಗ ಸಂಸದೆ ನುಸ್ರತ್ ಜಹಾನ್ ಮದುವೆ ಪ್ರಹಸನ ಬೀದಿಗೆ ಬಿದ್ದಿದೆ. ನಟಿ ಹಾಗೂ ಸಂಸದೆ ನುಸ್ರತ್ ಜಹಾನ್ 2019 ರಲ್ಲಿ ಟಿಎಂಸಿ ಪಕ್ಷದಿಂದ ಲೋಕಸಭಾ ಚುನಾವಣೆ ಸ್ಪರ್ಧಿಸಿ ಗೆದ್ದಿದ್ದರು. ಚುನಾವಣೆ ಗೆದ್ದ ಬೆನ್ನಲ್ಲೇ ಸಂಸದೆ ನುಸ್ರತ್ ಜಹಾನ್ ಉದ್ಯಮಿ ನಿಖಿಲ್ ಜೈನ್ ರನ್ನು ಟರ್ಕಿಯಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು.

ಚೆಂದುಳ್ಳಿ ಚೆಲುವೆ, ಸಂಸದೆ ನುಸ್ರತ್ ಜಹಾನ್ ಸಂಸಾರದಲ್ಲಿ ಬಿರುಗಾಳಿ!!

ಅಂತರ ಧರ್ಮೀಯ ಮದುವೆ ಹಲವು ವಿವಾದಕ್ಕೆ ಕಾರಣವಾಗಿತ್ತು. ಆದರೆ ಇದೀಗ ನುಸ್ರತ್ ಜಹಾನ್ ಹಾಗೂ ನಿಖಿಲ್ ಜೈನ್ ಮದುವೆ ಬೀದಿಗೆ ಬಿದ್ದಿದ್ದು, ಪತಿಯೊಂದಿಗಿನ ಪೋಟೋ ಹಾಗೂ ಮದುವೆ ಪೋಟೋಗಳನ್ನು ನುಸ್ರುತ್ ಜಹಾನ್ ಸೋಷಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದ್ದಾರೆ.

ಅಷ್ಟೇ ಅಲ್ಲ ನಿಖಿಲ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. 2019 ರಲ್ಲಿ ನಿಖಿಲ್ ಜೊತೆ ಮದುವೆ ಆಗಿರುವುದಾಗಿ ಘೋಷಿಸಿದ್ದ ನುಸ್ರತ್ ಈ ಮದುವೆಯನ್ನು ಭಾರತದಲ್ಲಿ ನೋಂದಣಿ ಮಾಡಿಸಿರಲಿಲ್ಲ.

ಕೆಲ ತಿಂಗಳಿನಿಂದ ವೈಮನಸ್ಯದಿಂದ ದೂರವಾಗಿದ್ದ  ದಂಪತಿ ಈಗ ಅಧಿಕೃತವಾಗಿ ಸಂಬಂಧ ಮುರಿದುಕೊಂಡಿದ್ದಾರೆ ಎನ್ನಲಾಗಿದೆ. ಈ ವರಸೆ ಬದಲಾಯಿಸಿರುವ ಸಂಸದೆ ನುಸ್ರತ್ ಜಹಾನ್, ಇದು ಮದುವೆಯಲ್ಲ ನಾವು ಲಿವಿಂಗ್ ಟುಗೆದರ್  ಸಂಬಂಧದಲ್ಲಿದ್ದೇವು ಎಂದಿದ್ದಾರೆ.

ತಮ್ಮದು ಕಾನೂನು ಸಮ್ಮತ ವಿವಾಹವಲ್ಲ ಎಂದಿರುವ ನುಸ್ರತ್ ವಿರುದ್ಧ ನಿಖಿಲ್ ಜೈನ್ ಕೂಡ ಹಲವಾರು ಆರೋಪ ಮಾಡಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು