ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ – ಸುನಿಲ್ ಕುಮಾರ್
ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ – ಸುನಿಲ್ ಕುಮಾರ್
ಮುಂಬೈ:ಗಟ್ಟಿಗಿತ್ತಿ ತಾಯಿಯೊಬ್ಬಳು ಚಿರತೆಯೊಂದಿಗೆ ಹೋರಾಡಿ ತನ್ನ ಐದು ವರ್ಷದ ಮಗಳನ್ನು ಕಾಪಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ಕಾಡಿನಲ್ಲಿ 27 ವರ್ಷದ ಅರ್ಚನಾ ಮೆರ್ಶಾಮ್ ಚಿರತೆಯ ದವಡೆಯಿಂದ ತನ್ನ ಐದು ವರ್ಷದ ಮಗಳು ಪ್ರಜಕ್ತಾಳನ್ನು ರಕ್ಷಿಸಿದ್ದಾರೆ. ಜೂನ್ 30 ರಂದು ನಡೆದ ಘಟನೆಯಲ್ಲಿ ಬಾಲಕಿಗೆ ಗಂಭೀರ ಗಾಯಗಳಾಗಿದ್ದು, ನಾಗ್ಪುರದ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನೀಡಲಾಗುತ್ತಿದೆ.
ಜುನೊನಾ ಗ್ರಾಮದ ನಿವಾಸಿ ಅರ್ಚನಾ ಮೆಶ್ರಮ್ ಹಳ್ಳಿಯ ಹೊರವಲಯಕ್ಕೆ ಹೋಗುತ್ತಿದ್ದಾಗ ಚಿರತೆ ಮಗಳ ಮೇಲೆ ದಾಳಿ ಮಾಡಿದೆ. ಈ ವೇಳೆ ತಾಯಿ ಮಗಳೊಂದಿಗೆ ಭಯದಿಂದ ಜೋರಾಗಿ ಓಡಲು ಪ್ರಾರಂಭಿಸಿದ್ದಾರೆ. ಚಿರತೆ ಕೂಡ ವೇಗವಾಗಿ ಅವರನ್ನು ಹಿಂಬಾಲಿಸಿ ಮಗಳ ಮೇಲೆ ದಾಳಿ ಮಾಡಿದೆ. ಈ ವೇಳೆ ಮಹಿಳೆ ಬಿದಿರಿನ ಕೋಲಿನಿಂದ ಚಿರತೆಗೆ ಹೊಡೆದಿದ್ದಾರೆ. ಮಹಿಳೆಯಿಂದ ಮನಸೋ ಇಚ್ಛೆ ಏಟು ಬೀಳುತ್ತಲೇ ಚಿರತೆ ನೋವು ತಾಳಲಾರದೇ ಬಾಲಕಿಯನ್ನು ಬಿಟ್ಟು ಕಾಡಿನತ್ತ ಕಾಲ್ಕಿತ್ತಿದೆ.
ಬಳಿಕ ಗಾಯಗೊಂಡ ಮಗಳ ರಕ್ಷಣೆಗಾಗಿ ತಾಯಿ ಕೂಗಿಕೊಂಡಿದ್ದಾಳೆ. ಈ ವೇಳೆಗಾಗಲೇ ಅಲ್ಲಿಗೆ ಆಗಮಿಸಿದ್ದ ಅರಣ್ಯ ಸಿಬ್ಬಂದಿ ಆಕೆಯನ್ನು ಚಂದ್ರಾಪುರ ಸಿವಿಲ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ – ಸುನಿಲ್ ಕುಮಾರ್
ವಾಟ್ಸ್ಆ್ಯಪ್ನಿಂದ ಹೊಸ ಅಪ್ಡೇಟ್: ಇನ್ಮುಂದೆ ಸ್ಕ್ರೀನ್ ಶೇರ್ ಮಾಡಬಹುದು