ಮಂಗಳವಾರ, ಅಕ್ಟೋಬರ್ 3, 2023
ರೊಚಿಗೆದ್ದ ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ;ನಿಮ್ಮ ತೆವಲಿಗೋಸ್ಕರ ಫಾಲೋವರ್ಸ್ ಬೇಕು ಅಂತ ನ್ಯೂಸ್ ಹಾಕಬೇಡಿ!-ಹ್ಯುಂಡೈನ ಎಲ್ಲ ಮಾದರಿಯ ಕಾರುಗಳಲ್ಲಿ ಇನ್ನು ಮುಂದೆ ಆರು ಏರ್​ಬ್ಯಾಗ್​ಗಳು ನೀಡುವುದಾಗಿ ಘೋಷಿಸಿದ ಹ್ಯುಂಡ್ಯೆ!-ಉಳ್ಳಾಲ: ಅಬ್ಬಕ್ಕ ಪ್ರತಿಮೆ ಎದುರು ಪುಂಡಾಟ; ಯುವಕರಿಗೆ ನೋಟಿಸ್-ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚಿನ್ನ ಸೀಝ್ ; ಚಿನ್ನವನ್ನು ಎಲ್ಲೆಲ್ಲಿ ಬಚ್ಚಿಟ್ಟು ತಂದಿದ್ದಾರೆ ಗೊತ್ತೆ..!-ನನ್ನ ಮೇಲೆ ಹೈಕಮಾಂಡ್ ಗೆ ಪ್ರೀತಿ ಜಾಸ್ತಿ; ಅದಕ್ಕೆ ನಾನೇನು ಮಾತನಾಡಿದರೆ ನೋಟಿಸ್ ಕೊಡುತ್ತಾರೆ !-ಕೇರಳ : ಚರ್ಚ್ ಪಾದ್ರಿ ಬಿಜೆಪಿ ಸೇರ್ಪಡೆ ; ಕರ್ತವ್ಯದಿಂದ ಅಮಾನತು!-ಮಹಾರಾಷ್ಟ್ರ : ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನ 12 ನವಜಾತ ಶಿಶುಗಳು ಸೇರಿ 24 ಮಂದಿ ಸಾವು!-ಒಂದೇ ಧರ್ಮವಿದೆ; ಅದು ಸನಾತನ ಧರ್ಮ - ಯೋಗಿ ಆದಿತ್ಯನಾಥ್-ಕಾಪು : ಆಲದ ಮರ ಉರುಳಿ ಬಿದ್ದು ಓರ್ವ ಸಾವು ; ಇಬ್ಬರಿಗೆ ಗಾಯ!-Gold Rate : ಇಳಿಕೆ ಕಂಡ ಚಿನ್ನದ ಬೆಲೆ ; 10 ಗ್ರಾಂ ಚಿನ್ನ - ಬೆಳ್ಳಿಯ ದರ ಇವತ್ತೆಷ್ಟಿದೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಗೋ-ಕಾರ್ಟ್ ಗೆ ಕೂದಲು ಸಿಲುಕಿ ಭಾರತ ಮೂಲದ ಬಾಲಕಿಗೆ ಗಂಭೀರ ಗಾಯ

Twitter
Facebook
LinkedIn
WhatsApp
photo 1585099750881 24be4ba1a998

ಜೊಹಾನ್ಸ್‌‌ಬರ್ಗ್, ಜ 05 : ಮನರಂಜನಾ ಕೇಂದ್ರವೊಂದರ ಗೋ-ಕಾರ್ಟ್ ನಲ್ಲಿ ಕೂದಲು ಸಿಕ್ಕಿ ಹಾಕಿಕೊಂಡ ಪರಿಣಾಮ ಭಾರತೀಯ ಮೂಲದ ಬಾಲಕಿ ಗಂಭೀರ ಗಾಯಗೊಂಡ ಘಟನೆ ಜೋಹಾನ್ಸ್ ಬರ್ಗ್ ನಲ್ಲಿ ನಡೆದಿದೆ.

ಕ್ರಿಸ್ಟನ್ ಗೋವೆಂದರ್ (15) ಗಾಯಗೊಂಡ ಬಾಲಕಿ. ಸದ್ಯ ಅವರು ಡರ್ಬನ್ ನ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಬುಧವಾರವೇ ಈ ಘಟನೆ ನಡೆದಿದ್ದು, ಆಕೆಯ ಸೊಂಟದಿಂದ ಯಾವುದೇ ಚಲನೆ ಇಲ್ಲ ಎಂಬುದಾಗಿ ವೈದ್ಯರು ತಿಳಿಸಿರುವುದಾಗಿ ತಂದೆ ವೆರ್ನಾನ್ ಗೋವೆಂದರ್ ಹೇಳಿದ್ದಾರೆ ಎಂದು ವರದಿಯಾಗಿದೆ.

ಹೆಲ್ಮೆಟ್ ಧರಿಸಿ ಮನರಂಜನಾ ಆಟದಲ್ಲಿ ಭಾಗವಹಿಸಬೇಕೆಂಬ ನಿಯಮವನ್ನು ಮಗಳು ಪಾಲಿಸಿದ್ದಾಳೆ. ಪೋನಿಟೇಲ್ ನಲ್ಲಿ ಆಕೆಯ ಕೂದಲನ್ನು ಕಟ್ಟಲಾಗಿತ್ತು. ಹಾಗಿದ್ದಾಗ್ಯೂ ಘಟನೆ ನಡೆದಿದೆ ಎಂದವರು ಅಳಲು ತೋಡಿಕೊಂಡಿದ್ದಾರೆ.

ಗೋ ಕಾರ್ಟ್‌ನಲ್ಲಿನ ಉಪಕರಣಗಳು ದೋಷಯುಕ್ತವಾಗಿವೆ. ಅಲ್ಲದೆ ತಕ್ಷಣಕ್ಕೆ ಬೇಕಾದ ನೆರವು ಅವರಿಂದ ಸಿಕ್ಕಿಲ್ಲ ಎಂದೂ ತಂದೆ ಆರೋಪಿಸಿದ್ದಾರೆ. ಆದರೆ ಈ ಆರೋಪಕ್ಕೆ ಡರ್ಬನ್ ನ ಗೇಟ್ ವೇ ಮಾಲ್ ನ ಮ್ಯಾಮೇಜ್ ಮೆಂಟ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ