ಗುರುವಾರ, ಫೆಬ್ರವರಿ 22, 2024
Venoor: ವೇಣೂರಿನಲ್ಲಿ ಇಂದಿನಿಂದ ಮಾರ್ಚ್ 1 ರ ವರೆಗೆ ನಡೆಯಲಿದೆ ಶ್ರೀ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ..!-ಕರ್ನಾಟಕದಲ್ಲಿಯೂ ಬಾಂಬೆ ಮಿಠಾಯಿ ನಿಷೇಧ ಸಾಧ್ಯತೆ..!-ಕುಡಿಬೇಡ ಎಂದು ಬುದ್ಧಿ ಹೇಳಿದಕ್ಕೆ ಯುವಕ ಆತ್ಮಹತ್ಯೆ..!-Suratkal :ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದಾಗಲೇ ಹೃದಯಾಘಾತ; ಯುವಕ ಸಾವು.!-ದೆಹಲಿ ಚಲೋ ಪ್ರತಿಭಟನೆಯಲ್ಲಿ ಓರ್ವ ಯುವ ರೈತ ಸಾವು ; 2 ದಿನಗಳ ಕಾಲ ಪ್ರತಿಭಟನೆ ಸ್ಥಗಿತ.!-Tanya Singh: ಖ್ಯಾತ ಮಾಡೆಲ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ; ಐಪಿಎಲ್ ಸ್ಟಾರ್ ಆಟಗಾರನಿಗೆ ನೋಟಿಸ್.!-ಡಾಲಿ ಧನಂಜಯ್: ಲೋಕಸಭೆ ಚುನಾವಣಾ ಸ್ಪರ್ಧೆ ಬಗ್ಗೆ ನಟ ಡಾಲಿ ಧನಂಜಯ್ ಪ್ರತಿಕ್ರಿಯೆ ಏನು?-ಪುತ್ತೂರು: ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ ; ಚಿಕಿತ್ಸೆ ಫಲಿಸದೆ ಯುವಕ ಸಾವು!-Gold Rate Today : ಸತತ ಇಳಿಕೆ ಕಂಡಿದ್ದ ಚಿನ್ನದ ದರ ಮತ್ತೆ ಏರಿಕೆಯತ್ತ..!-IPL 2024: ಇಂದು ಐಪಿಎಲ್ 2024 ವೇಳಾಪಟ್ಟಿ ಪ್ರಕಟ; ಫೈನಲ್ ಪಂದ್ಯ ಯಾವಾಗ?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಗಂಡನ ಮನೆ ಬಿಟ್ಟ ಮಹಿಳೆಗೆ ತಂದೆ, ಸಹೋದರರಿಂದ ಮರಕ್ಕೆ ನೇತು ಹಾಕಿ ಚಿತ್ರಹಿಂಸೆ

Twitter
Facebook
LinkedIn
WhatsApp
ಗಂಡನ ಮನೆ ಬಿಟ್ಟ ಮಹಿಳೆಗೆ ತಂದೆ, ಸಹೋದರರಿಂದ ಮರಕ್ಕೆ ನೇತು ಹಾಕಿ ಚಿತ್ರಹಿಂಸೆ

 ಭೋಪಾಲ್: ಮಹಿಳೆಯೊಬ್ಬರ ಮೇಲೆ ಆಕೆಯ ತಂದೆ ಹಾಗೂ ಸಹೋದರರು ಹಲ್ಲೆ ನಡೆಸಿ, ಮರಕ್ಕೆ ನೇತು ಹಾಕಿ ಥಳಿಸಿರುವ ಘಟನೆ ಮಧ್ಯಪ್ರದೇಶದ ಅಲಿರಾಜ್‌ಪುರ ಜಿಲ್ಲೆಯಲ್ಲಿ ನಡೆದಿದೆ.

ಗಂಡನ ಮನೆಯಿಂದ ಮಹಿಳೆ ಓಡಿ ಹೋಗಲು ಯತ್ನಿಸಿದ್ದ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ನೋಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ಸಂತ್ರಸ್ತೆ ಮಹಿಳೆ ಸಮೀಪದ ಹಳ್ಳಿಯ ವ್ಯಕ್ತಿಯನ್ನು ವಿವಾಹವಾಗಿದ್ದು, ಆಕೆಯ ಪತಿ ಗುಜರಾತಿಗೆ ಕೆಲಸಕ್ಕಾಗಿ ಹೋಗುತ್ತಿದ್ದ. ಗಂಡನ ಬಗ್ಗೆ ಅತೃಪ್ತಿ ಹೊಂದಿದ್ದ ಮಹಿಳೆ ಗಂಡನ ಮನೆ ಬಿಟ್ಟು ಅಲಿರಾಜ್‌ಪುರದ ತನ್ನ ಮಾವನ ಮನೆಗೆ ಹೋಗಿದ್ದಳು.
“ಗಂಡನ ಮನೆ ತೊರೆದ ಮಹಿಳೆಯ ಬಗ್ಗೆ ತಂದೆ ಹಾಗೂ ಸಹೋದರರು ಕೋಪಗೊಂಡಿದ್ದು, ಆಕೆಗೆ ಥಳಿಸಿದ್ದಾರೆ. ಸ್ಥಳೀಯ ವ್ಯಕ್ತಿರ್ಯೋರ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ವೈರಲ್‌‌ ಆಗಿತ್ತು. ನಂತರ ಈ ಘಟನೆ ಪೊಲೀಸರ ಗಮನಕ್ಕೆ ಬಂಧಿದೆ. ಈ ಬಗ್ಗೆ ಜುಲೈ ರಂದೇ ಎಫ್‌ಐಆರ್‌ ದಾಖಲಿಸಿಕೊಂಡು, ನಾಲ್ವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ” ಎಂದು ಅಲಿರಾಜ್‌ಪುರ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭಾಗವವಿ ತಿಳಿಸಿದ್ದಾರೆ.

“ಘಟನೆಯ ಬಗ್ಗೆ ಪೊಲೀಸರು ಎಫ್‌ಐಆರ್‌ ದಾಖಲಿಸಿ ನಾಲ್ವರನ್ನು ಬಂಧಿಸಿದ್ದಾರೆ. ಜೂನ್‌‌ 28ರಂದು ಬೇಡೆ ಪೂಲ್ ತಲಾವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ” ಎಂದು ವಿಜಯ್ ಭಾಗವವಿ ಹೇಳಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು