ಮಂಗಳವಾರ, ಮೇ 30, 2023
ಹಾವನ್ನು ಸೆರೆ ಹಿಡಿಯಲು ಹೋದಾಗ ನಾಗರ ಹಾವು ಕಚ್ಚಿ ಸ್ನೇಕ್ ನರೇಶ್ ಸಾವು!-ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ - ಸುನಿಲ್ ಕುಮಾರ್-ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ - ಸುನಿಲ್ ಕುಮಾರ್-ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ; ಪದಕಗಳನ್ನು ಗಂಗಾ ನದಿಗೆ ಎಸೆಯಲು ಕುಸ್ತಿಪಟುಗಳ ನಿರ್ಧಾರ-ಕ್ರೋಮಿಂಗ್ ಟ್ರೆಂಡ್ ಗೆ ಬಲಿಯಾದ 13 ವರ್ಷದ ಬಾಲಕಿ! ಬ್ಲೂವೇಲ್ ರೀತಿಯ ಈ ಗೇಮಿಂಗ್ ಯಾವುದು?-ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಕಾಲ ಬೆರಳಿಗೆ ಹಾವು ಕಡಿದು ವಿದ್ಯಾರ್ಥಿನಿ ಸಾವು-ಮಹಿಳೆಯರಿಗೂ ಕಂಬಳದಲ್ಲಿ ಅವಕಾಶ, ತರಬೇತಿಗೆ ಸಿದ್ಧವಾಗುತ್ತಿದೆ ವೇದಿಕೆ-ದುಬಾರಿ ಕಾರು ಬಿಟ್ಟು ಆಟೋದಲ್ಲಿ ಪ್ರಯಾಣಿಸಿದ ನಟಿ ಇರಾ ಖಾನ್‌-ಉಡುಪಿ : ಗೇರುಬೀಜ ಸಾಗಾಟದ ಲಾರಿ ಪಲ್ಟಿ ಅಪಾಯದಿಂದ ಪಾರಾದ ಚಾಲಕ-ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: ರಾಮಲಿಂಗಾರೆಡ್ಡಿ ಘೋಷಣೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಖ್ಯಾತ ದೇಹದಾರ್ಢ್ಯ ಪಟು ಪ್ರೇಮ್ ರಾಜ್ ಅರೋರ ಹೃದಯಾಘಾತದಿಂದ ಮೃತ್ಯು!

Twitter
Facebook
LinkedIn
WhatsApp
WhatsApp Image 2023 05 26 at 5.23.18 PM

ರಾಜಸ್ಥಾನ: ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಅದಕ್ಕೊಂದು ಸೇರ್ಪಡೆ ಎಂಬಂತೆ ಖ್ಯಾತ ದೇಹದಾರ್ಢ್ಯ ಪಟು, ಮಾಜಿ ಮಿಸ್ಟರ್‌ ಇಂಡಿಯಾ ಪ್ರೇಮ್‌ ರಾಜ್‌ ಅರೋರಾ(42ವರ್ಷ) ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

ಖ್ಯಾತ ಬಾಡಿ ಬಿಲ್ಡರ್‌, ಮಾಜಿ ಮಿಸ್ಟರ್‌ ಇಂಡಿಯಾ ಪ್ರೇಮ್‌ ರಾಜ್‌ ಎಂದಿನಂತೆ ವ್ಯಾಯಾಮ ಮುಗಿಸಿ ವಾಶ್‌ ರೂಂಗೆ ತೆರಳಿದ್ದರು. ಆದರೆ ಸುಮಾರು ಒಂದು ಗಂಟೆ ಕಳೆದರೂ ಹೊರಗೆ ಬಾರದಿರುವುದನ್ನು ಗಮನಿಸಿ, ಕುಟುಂಬ ಸದಸ್ಯರು ವಾಶ್‌ ರೂಂ ಬಾಗಿಲು ತಟ್ಟಿದ್ದರು. ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲವಾಗಿತ್ತು.

ನಂತರ ಬಾಗಿಲು ಒಡೆದು ನೋಡಿದಾಗ ಪ್ರೇಮ್‌ ರಾಜ್‌ ನೆಲದ ಮೇಲೆ ಕುಸಿದು ಬಿದ್ದಿರುವುದನ್ನು ಗಮನಿಸಿ ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.ಪರೀಕ್ಷೆ ನಡೆಸಿದ ವೈದ್ಯರು ಪ್ರೇಮ್‌ ರಾಜ್‌ ಕೊನೆಯುಸಿರೆಳೆದಿರುವುದಾಗಿ ತಿಳಿಸಿದ್ದರು. ಪ್ರೇಮ್‌ ರಾಜ್‌ ದಿಢೀರ್‌ ನಿಧನ ಕುಟುಂಬ ಸದಸ್ಯರಿಗೆ ಆಘಾತವನ್ನು ತಂದಿದ್ದು, ಅರೋರಾ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ ಎಂದು ವರದಿ ತಿಳಿಸಿದೆ.ಪ್ರೇಮ್‌ ರಾಜ್‌ ಅರೋರಾ 2012-13ರಲ್ಲಿ ಪವರ್‌ ಲಿಫ್ಟಿಂಗ್ ಸೇರಿದಂತೆ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದರು. 2014ರಲ್ಲಿ ಮಿಸ್ಟರ್‌ ಇಂಡಿಯಾ ಪ್ರಶಸ್ತಿಗೆ ಭಾಜನರಾಗಿದ್ದರು. ನಾಗ್ಪುರ್‌ ಚಾಂಪಿಯನ್‌ ಶಿಪ್‌ ನಲ್ಲಿ ಚಿನ್ನದ ಪದಕ ಗಳಿಸಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ