ಬುಧವಾರ, ಫೆಬ್ರವರಿ 8, 2023
ಯುವತಿಗೆ ಮೆಸೇಜ್ ಮಾಡಿದಕ್ಕೆ ಸಹೋದರನಿಂದ ಯುವಕನ ಮೇಲೆ ಹಲ್ಲೆ-ಟರ್ಕಿ ಸಿರಿಯಾ ಭೂಕಂಪ: ಸಾವಿನ ಸಂಖ್ಯೆ 8 ಸಾವಿರ; ಗಾಯಾಳುಗಳ ಸಂಖ್ಯೆ 35 ಸಾವಿರ, ರಕ್ಷಣಾ ಕಾರ್ಯಕ್ಕೆ ಅಡಚಣೆ-ಮನೆ ಮುಂದೆ ಮಲಗಿದವರ ಮೇಲೆ ಹುಚ್ಚು ನಾಯಿ ದಾಳಿ – 25ಕ್ಕೂ ಅಧಿಕ ಜನ ಆಸ್ಪತ್ರೆ ದಾಖಲು-ಕಾರ್ಕಳ : ಮಹಿಳೆ ನೇಣು ಬಿಗಿದು ಆತ್ಮಹತ್ಯೆ-ಕಟ್ಟಡದ ಅವಶೇಷಗಳಡಿಯೇ ಮಗುವಿಗೆ ಜನ್ಮ ನೀಡಿ ಮಹಿಳೆ ಸಾವು-ಬೈಕ್‌ನಲ್ಲಿ ರಾಂಚಿ ಸ್ಟೇಡಿಯಂನಿಂದ ಬಿಂದಾಸ್‌ ಆಗಿ ಹೊರಟ ಎಂ ಎಸ್ ಧೋನಿ..! ವಿಡಿಯೋ ವೈರಲ್-ಹೊಸ ಮುಖದ ಬಗ್ಗೆ ರಾಹುಲ್ ಗಾಂಧಿ ಒಲವು. ಕೊಡಗಿನಲ್ಲಿ ಪೊನ್ನನ್ನ,ಡಾ. ಮಂತರ್ ಗೌಡ, ಬೆಳ್ತಂಗಡಿಯಲ್ಲಿ ರಕ್ಷಿತ್ ಶಿವರಾಂ ಬಹುತೇಕ ಫಿಕ್ಸ್.-ಡಿಕ್ಕಿಹೊಡೆದ ಗಡಿಬಿಡಿಗೆ ಬ್ರೇಕ್ ಬದಲು ಎಕ್ಸಲೇಟರ್ ತುಳಿದ ಮಹಿಳೆ; ಬೈಕ್ ಸವಾರ ಸ್ಥಳದಲ್ಲಿಯೇ ಸಾವು-ಸೀರೆಯುಟ್ಟು ಜಿಮ್​ ವರ್ಕೌಟ್ ಮಾಡುತ್ತಿರುವ ಮಹಿಳೆಯ ವಿಡಿಯೋ ವೈರಲ್; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ-ಮಂಗಳೂರು: ವಿಷಾಹಾರ ಸೇವಿಸಿದ ನರ್ಸಿಂಗ್ ವಿದ್ಯಾರ್ಥಿಗಳ ಪೈಕಿ ಹಲವರು ಚೇತರಿಕೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಖಡ್ಗ ಹಿಡಿದು ಶ್ರದ್ಧಾ ಹಂತಕ ಅಫ್ತಾಬ್ ಮೇಲೆ ದಾಳಿಗೆ ಯತ್ನ; ಪೊಲೀಸ್‌ ವಾಹನದ ಮೇಲೆ ಮುಗಿಬಿದ್ದ ಗುಂಪು!

Twitter
Facebook
LinkedIn
WhatsApp
ಖಡ್ಗ ಹಿಡಿದು ಶ್ರದ್ಧಾ ಹಂತಕ ಅಫ್ತಾಬ್ ಮೇಲೆ ದಾಳಿಗೆ ಯತ್ನ; ಪೊಲೀಸ್‌ ವಾಹನದ ಮೇಲೆ ಮುಗಿಬಿದ್ದ ಗುಂಪು!

ಹೊಸದಿಲ್ಲಿ: ಶ್ರದ್ಧಾ ವಾಕರ್ ಹತ್ಯೆ ಆರೋಪಿ ಅಫ್ತಾಬ್ ಪೂನಾವಾಲಾನನ್ನು ಕರೆದೊಯ್ಯುತ್ತಿದ್ದ ಪೊಲೀಸ್‌ ವಾಹನದ ಮೇಲೆ ಗುಂಪೊಂದು ದಾಳಿ ನಡೆಸಿದೆ. ಸೋಮವಾರ ಸಂಜೆ ಕತ್ತಿಗಳನ್ನು ಹಿಡಿದ ಜನರ ಗುಂಪೊಂದು ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಜೈಲಿಗೆ ವಾಪಸ್‌ ಕರೆದೊಯ್ಯುತ್ತಿರುವಾಗ ಪೊಲೀಸ್‌ ವಾಹನದ ಮೇಲೆ ದಾಳಿ ನಡೆಸಿದ್ದು, ಅಫ್ತಾಬ್‌ನ ರಕ್ಷಣೆಗಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

ಶ್ರದ್ಧಾ ವಾಕರ್‌ ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ಅಫ್ತಾಬ್‌ ಪೂನಾವಾಲಾಗೆ ಎರಡನೇ ಬಾರಿ ಪಾಲಿಗ್ರಾಫ್‌ ಪರೀಕ್ಷೆಯನ್ನು ಸೋಮವಾರ ನಡೆಸಲಾಯಿತು. ಅದಕ್ಕಾಗಿ ಆರೋಪಿ ಅಫ್ತಾಬ್‌ ಅನ್ನು ಪಶ್ಚಿಮ ದಿಲ್ಲಿಯಲ್ಲಿರುವ ರೋಹಿಣಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕರೆದುಕೊಂಡು ಬರಲಾಗಿತ್ತು. ಪರೀಕ್ಷೆಯ ಬಳಿಕ ಅಫ್ತಾಬ್‌ ಅನ್ನು ಜೈಲಿಗೆ ಕರೆದೊಯ್ಯುವ ವೇಳೆ ಎಫ್‌ಎಸ್‌ಎಲ್‌ ಕಟ್ಟಡದ ಹೊರಗಡೆ ಪೊಲೀಸರ ವಾಹನ ಬರುತ್ತಿದ್ದಂತೆ ಕತ್ತಿಯಿಡಿದ ಜನರ ಗುಂಪು ದಾಳಿ ನಡೆಸಿದೆ.

ಕತ್ತಿ ಹಿಡಿದಿದ್ದ ಹದಿನೈದು ಮಂದಿಯ ಗುಂಪು ಪೊಲೀಸ್‌ ವಾಹನದ ಮೇಲೆ ಹತ್ತಿತ್ತು. ಆ ವ್ಯಕ್ತಿಗಳು ಅಫ್ತಾಬ್‌ನನ್ನು ಹುಡುಕುತ್ತಿದ್ದರು, ಅವರೆಲ್ಲಾ ಬಲಪಂಥೀಯ ಗುಂಪಿನ ಭಾಗವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಅಫ್ತಾಬ್ ಪೂನಾವಾಲಾ ಸುರಕ್ಷಿತವಾಗಿದ್ದಾರೆ. ಘಟನೆಯಲ್ಲಿ ಕೆಲವು ದಾಳಿಕೋರರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಎಎನ್‌ಐ ಸುದ್ದಿಸಂಸ್ಥೆ ವಿಡಿಯೋ ಒಂದನ್ನು ಟ್ವೀಟ್‌ ಮಾಡಿದ್ದು, ಅದರಲ್ಲಿ ಪೊಲೀಸ್ ಸಿಬ್ಬಂದಿ ಒಬ್ಬರು ದಾಳಿಕೋರರನ್ನು ಓಡಿಸಲು ವಾಹನದಿಂದ ಹೊರಬಂದಿರುವುದನ್ನು ಕಾಣಬಹುದು. ಆದರೆ, ದಾಳಿಕೋರರು ವಾಹನದ ಮೇಲೆ ದಾಳಿ ಮುಂದುವರಿಸಿದಾಗ ಪೊಲೀಸ್‌ ತಮ್ಮ ಪಿಸ್ತೂಲ್‌ ಅನ್ನು ಹೊರಗೆ ತೆಗೆದು ವಾಹನ ಮುಂದೆ ಸಾಗುವಂತೆ ಮಾಡಿದ್ದಾರೆ. ಈ ವೇಳೆ ಪೊಲೀಸ್‌ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಪೊಲೀಸರು ಖಚಿತಪಡಿಸಿಲ್ಲ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ