ಕ್ರಿಕೆಟರ್ ಎಬಿಡಿ ಜೊತೆ ನಮ್ಮನೆ ಯುವರಾಣಿ ನಟಿ ಅಂಕಿತಾ ಅಮರ್
ಮೊದಲ ಬಾರಿಗೆ ಬಾಲನಟಿಯಾಗಿ ಪುಟ್ಟ ಗೌರಿಯ ಮದುವೆ ಸೀರಿಯಲ್ ನಲ್ಲಿ ಅಭಿನಯಿಸಿದ ಅಂಕಿತಾ ಅಮರ್ (Ankita Amar), ನಮ್ಮನೆ ಯುವರಾಣಿ ಸೀರಿಯಲ್ ನಲ್ಲಿ ಲೀಡ್ ರೋಲ್ ಮಾಡುವ ಮೂಲಕ ಕರ್ನಾಟಕದಾದ್ಯಂತ ಜನಮನ ಗೆದ್ದಿದ್ದರು. ಆದರೆ ಸೀರಿಯಲ್ ಜನಪ್ರಿಯತೆ ಹೆಚ್ಚಿರುವಾಗಲೇ ಸೀರಿಯಲ್ ಬಿಟ್ಟಿದ್ದರು.
ತೆಲುಗು ಸೀರಿಯಲ್ (telugu serial) ನಲ್ಲೂ ನಟಿಸಿ, ಸೈ ಎನಿಸಿಕೊಂಡಿದ್ದ ಅಂಕಿತಾ ಅಭುನಯ ಯಾರನ್ನೂ ಕೂಡ ಮೋಡಿ ಮಾಡುತ್ತಿತ್ತು. ಅವರ ಅಭಿನಯದ ಮೂಲಕವೇ ನಟಿ ನೇರವಾಗಿ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಇದೀಗ ಮೂರು ಮೂರು ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ.
ಮೊದಲಿಗೆ ಅಂಕಿತಾಗೆ ಅಬ ಜಬ ದಬ (Aba Jaba Daba) ಸಿನಿಮಾದಲ್ಲಿ ನಟಿಸುವ ಆಫರ್ ದೊರೆಯಿತು. ಈ ಚಿತ್ರವನ್ನು ಮಯೂರ ರಾಘವೇಂದ್ರ ಅವರು ನಿರ್ದೇಶನ ಮಾಡ್ತಿದ್ದಾರೆ. ಈ ಸಿನಿಮಾದಲ್ಲಿ ಗಾಯಕಿಯಾಗಿ ಆಗಿ ಕಾಣಿಸುತ್ತಿದ್ದಾರೆ. ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ ನಾಯಕನಾಗಿ ನಟಿಸುತ್ತಿದ್ದಾರೆ.
ಮೊದಲ ಚಿತ್ರದಲ್ಲಿ ಸೈನ್ ಆಗಿದಾಗಲೇ ಇವರಿಗೆ ಎರಡನೇ ಚಿತ್ರದಲ್ಲಿ ನಟಿಸುವ ಅವಕಾಶವೂ ಬಂತು. ನಟಿ ರಕ್ಷಿತ್ ಶೆಟ್ಟಿ ನಿರ್ಮಾಣದ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರಕ್ಕೆ ಸೈನ್ ಮಾಡಿದ್ದರು, ಅದರ ಪ್ರೋಮೋ ಕೂಡ ತುಂಬಾನೆ ಚೆನ್ನಾಗಿ ಬಂಡಿತ್ತು, ಈ ಚಿತ್ರದಲ್ಲಿ ಇವರಿಗೆ ವಿಹಾನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ಅಂಕಿತಾ ಅಮರ್ ಅಭಿನಯಿಸಿದ ಮೊದಲ ಚಿತ್ರವೇ ಬಿಡುಗಡೆಯಾಗಲಿಲ್ಲ, ಇದೀಗ ನಟಿ ಮೂರನೇ ಸಿನಿಮಾದ ಆಫರ್ ಬಂದಿದ್ದು, ಸದ್ಯ ಇದೇ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಅವಿನಾಶ್ ವಿಜಯ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ದತ್ತಣ್ಣ, ಪ್ರಕಾಶ್ ಬೆಳವಾಡಿ ನಟಿಸುತ್ತಿದ್ದಾ
ಸದ್ಯ ಶೂಟಿಂಗ್ ನಿಂದ ಬ್ರೇಕ್ ಪಡೆದು ಬೆಂಗಳೂರಿನಲ್ಲಿರುವ ಅಂಕಿತಾ ಅಮರ್ ಇದೀಗ ಹೊಸ ಫೋಟೋವೊಂದನ್ನು ಶೇರ್ ಮಾಡಿದ್ದು, ಸಖತ್ ವೈರಲ್ ಆಗುತ್ತಿದೆ. ಪಕ್ಕಾ ಆರ್ ಸಿಬಿ ಫ್ಯಾನ್ ಆಗಿರುವ ಅಂಕಿತಾ ಆರ್ ಸಿಬಿ ಆಟಗಾರ ಎಬಿಡಿ ವಿಲಿಯರ್ಸ್ (ABD Villiers) ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ.
ತಮ್ಮ ನೆಚ್ಚಿನ ಆಟಗಾರನ ಜೊತೆ ಅಂಕಿತಾಕನ್ನಡದ ಮನಸ್ಸುಗಳ ಆಪತ್ಭಾಂದವ. ಕರ್ನಾಟಕದ ದತ್ತು ಪುತ್ರ ಎಂದು ಬರೆದುಕೊಂಡು ಖುಷಿ ಹಂಚಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಾಯಕಿಯನ್ನು ನೆಚ್ಚಿನ ಆಟಗಾರನ ಜೊತೆ ನೋಡಿದ ಅಭಿಮಾನಿಗಳು ಸಹ ಅಂಕಿತಾ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಅವರ ಫೋಟೋವನ್ನು ಶೇರ್ ಮಾಡಿಕೊಂಡು ಅಭಿಮಾನಿಗಳು ಸಂತಸ ಹಂಚಿಕೊಂಡಿದ್ದಾರೆ.
ಅಭಿಮಾನಿಗಳ ಪ್ರೀತಿ ಕಂಡು ಖುಷಿಯಾಗಿರೋ ಅಂಕಿತಾ, ಎಷ್ಟು ಬಾರಿ ನನ್ನ ಶಕ್ತಿ ಆಗ್ತೀರಾ? ಏನೇ ಇದ್ರೂ ಇಷ್ಟು ಸಂತೋಷ ಪಡ್ತೀರಾ? ಏನಾಗಲಿ, ಆಗದೇ ಇರಲಿ, ಇದೇ ಪ್ರೀತಿ ಇರಲಿ, ಎಂದಿಗೂ ನಾನು ಕಣ್ಮಣಿಗಳಿಗೆ ಚಿರಋಣಿ. ನೀವು ಹೆಮ್ಮೆ ಪಡುವಂತಹ ಕೆಲಸ ಮಾಡ್ತೀನಿ ಎಂದು ಬರೆದುಕೊಂಡಿದ್ದಾರೆ.