ಮಂಗಳವಾರ, ಅಕ್ಟೋಬರ್ 3, 2023
Galaxy S23 FE: ಸ್ಯಾಮ್ಸಂಗ್ ಗ್ಯಾಲಕ್ಸಿ S23 ಎಫ್​ಇ ಸ್ಮಾರ್ಟ್​ಫೋನ್ ಅ.4 ರಂದು ಬಿಡುಗಡೆ!-ಜಿಂಬಾಬ್ವೆಯಲ್ಲಿ ವಿಮಾನ ಪತನ ; ಭಾರತದ ಕೋಟ್ಯದೀಶ್ವರ ಹಾಗೂ ಗಣಿ ಉದ್ಯಮಿ ಮತ್ತು ಅವರ ಪುತ್ರ ದುರ್ಮರಣ!-ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ; ಸಿಪಿ ಯೋಗೇಶ್ವರ್ ಬಾಂಬ್-ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾರವರ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ!-ನೀವು ಹೆದರಿಸದರೆ ಮಾತ್ರಕ್ಕೆ ನಾನು ಹೆದರಲ್ಲ ದೇವೇಗೌಡರಿಗೆ ಡಿಕೆಶಿ ಟಾಂಗ್!-ಜಿಪಿಎಸ್ ಮ್ಯಾಪ್ ನೋಡಿ ಕಾರನ್ನು ಚಲಿಸುವುತ್ತಿರುವಾಗ ನದಿಗೆ ಬಿದ್ದು ಇಬ್ಬರು ವೈದ್ಯರು ಸಾವು ; ಮೂವರು ಪಾರು!-ಹೃದಯ ವಿದ್ರಾವಕ ಘಟನೆ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೇರಿ 6 ಮಂದಿ ಹತ್ಯೆ-ಬೆಂಗಳೂರಿನ ಕಂಬಳಕ್ಕೆ ಹೇಗಿದೆ ತಯಾರಿ; ದಕ್ಷಿಣ ಕನ್ನಡ ಭಾಗದ 150 ಫುಡ್ ಸ್ಟಾಲ್ ಏರ್ಪಾಡು..!-ಪಿಯುಸಿಯಲ್ಲಿ ಅಂಕ ಕಡಿಮೆ ಬಂತೆಂದು ಮನನೊಂದು ಅಪಾರ್ಟ್‌ಮೆಂಟ್‌ನಿಂದ ಜಿಗಿದ ಬಾಲಕಿ ; ರಕ್ಷಣೆಗೆ ಧಾವಿಸಿದ ಯುವಕ - ಇಲ್ಲಿದೆ ವಿಡಿಯೋ-ಬರ್ತ್‌ಡೇ ಪಾರ್ಟಿಯಲ್ಲಿ ಡೆಕೋರೇಷನ್‌ಗೆ ಹಾಕಿದ್ದ ಹೀಲಿಯಂ ಬಲೂನ್‌ ಬ್ಲಾಸ್ಟ್‌ ; ಐವರು ಗಂಭೀರ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕೋಳಿ ಆಹಾರ ಬೆಲೆ ಹೆಚ್ಚಿಳ ಎಫೆಕ್ಟ್: ಮೊಟ್ಟೆ ದರ ದಿಢೀರ್‌ ಏರಿಕೆ..!

Twitter
Facebook
LinkedIn
WhatsApp
ಕೋಳಿ ಆಹಾರ ಬೆಲೆ ಹೆಚ್ಚಿಳ ಎಫೆಕ್ಟ್: ಮೊಟ್ಟೆ ದರ ದಿಢೀರ್‌ ಏರಿಕೆ..!

ಬೆಂಗಳೂರು(ಜ.28):  ಚಳಿ ಇನ್ನೂ ಹೋಗಿಲ್ಲವೆಂದು ರಸ್ತೆ ಪಕ್ಕ ಬಾಯ್ಲ್ಡ್‌ ಎಗ್‌, ಆಮ್ಲೆಟ್‌, ಹಾಫ್‌ಬಾಯ್ಲ್‌ ತಿನ್ನಲು ಹೋಗುತ್ತೀರಾ? ನಿಮ್ಮ ಮೈ ಬೆಚ್ಚಗಾಗುವ ಜೊತೆಗೆ ಕಿಸೆಯ ಬಿಸಿಯೂ ಏರುವುದು ಖಚಿತ. ಹೌದು! ಕೋಳಿಗಳಿಗೆ ನೀಡುವ ಆಹಾರದ ಬೆಲೆ ದುಬಾರಿ ಹಾಗೂ ಚಳಿಯ ಹಿನ್ನೆಲೆಯಲ್ಲಿ ಮೊಟ್ಟೆಯ ದರ ಕಳೆದೊಂದು ವಾರದಿಂದ ಏರಿಳಿತ ಕಾಣುತ್ತಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಮೊಟ್ಟೆ ಬೆಲೆ ಹೆಚ್ಚಿರುತ್ತದೆ.

ಪ್ರಸ್ತುತ ಚಿಲ್ಲರೆ ಮಾರುಕಟ್ಟೆಯಲ್ಲಿ ಮೊಟ್ಟೆಯೊಂದಕ್ಕೆ .6.50 ಬೆಲೆಯಿದೆ. ಉತ್ಪಾದನಾ ವೆಚ್ಚವೇ (ಒಂದು ಮೊಟ್ಟೆ) .5.30ಕ್ಕೆ ಏರಿಕೆಯಾಗಿರುವುದು ಹಾಗೂ ಚಳಿಯಿಂದಾಗಿ ಉತ್ಪಾದನೆ ಶೇ.90ರಿಂದ ಶೇ.70ಕ್ಕೆ ಇಳಿದ ಕಾರಣ ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ ಹೆಚ್ಚಾಗಿದೆ. ಒಂದು ತಿಂಗಳು ರೈತರಿಗೆ ಹೆಚ್ಚಿನ ಲಾಭ ದೊರಕಿತ್ತು. ಆದರೆ, ಮತ್ತೀಗ ಬೆಲೆ ಇಳಿಕೆಯತ್ತ ಮುಖ ಮಾಡಿದೆ ಎಂದು ಕುಕ್ಕುಟೋದ್ಯಮಿಗಳು ತಿಳಿಸಿದರು.

ಈ ಬಗ್ಗೆ ಮಾತನಾಡಿದ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿಯ ಅಧ್ಯಕ್ಷ ಡಿ.ಕೆ.ಕಾಂತರಾಜು, ಕೋಳಿಗಳಿಗೆ ಶೇ.75ರಷ್ಟು ಮೆಕ್ಕೆ ಜೋಳವನ್ನೇ ನೀಡಲಾಗುತ್ತದೆ. ಕೇಜಿಗೆ .21-22 ಇದ್ದ ಕೋಳಿ ಆಹಾರ ಇದೀಗ .26 ಆಗಿದೆ. ಜತೆಗೆ ಸೋಯಾ ಫುಡ್‌ ಸೋಯಾ .60ರಿಂದ .90-110 ರವರೆಗೆ ಏರಿಕೆಯಾಗಿದೆ. ಹೀಗಾಗಿ ಕಳೆದೊಂದು ತಿಂಗಳಲ್ಲಿ ಮೊಟ್ಟೆ ಬೆಲೆ ಹೆಚ್ಚಾಗಿತ್ತು. ಆದರೆ, ಇದೀಗ ಚಳಿಗಾಲ ಅಂತ್ಯವಾಗುತ್ತಿದ್ದಂತೆ ಇಳಿಕೆಯತ್ತ ಮುಖ ಮಾಡಿದೆ ಎಂದು ತಿಳಿಸಿದರು.
ಹತ್ತು ದಿನಗಳ ಹಿಂದೆ ಫಾರ್ಮ್‌ ಮೊಟ್ಟೆ ಹೋಲ್‌ಸೆಲ್‌ ದರ .5.75 ಇತ್ತು. ಈಗ ಫಾರ್ಮ್‌ ಮೊಟ್ಟೆ ಹೋಲ್‌ಸೆಲ್‌ ದರ .5 ಹಾಗೂ ನಾಟಿ .5.20 ಪೈಸೆ ಇದೆ. ಆದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ದರ ಇಳಿಕೆಯಾಗಿಲ್ಲ. 2022ರ ಜನವರಿಯಲ್ಲಿ 100 ಮೊಟ್ಟೆಯ ಒಂದು ಬ್ಯಾಚ್‌ಗೆ .437.58 ಇತ್ತು. ಈಗ .575 ರಿಂದ .600 ವರೆಗಿದೆ.

ಬಾಯ್ಲ್ಡ್‌ ಎಗ್‌ .10​-15
ಸಿಂಗಲ್‌ ಆಮ್ಲೆಟ್‌ .20
ಡಬಲ್‌ ಆಮ್ಲೆಟ್‌ .40
ಎಗ್‌ ರೈಡ್‌ .50- 60
ಹಾಫ್‌ಬಾಯ್ಲ್‌ .40

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ