ಕೊಳದಲ್ಲಿ ಸ್ನಾನ ಮಾಡ್ತಿದ್ದ ಮಹಿಳೆ ವಿರುದ್ಧ DMK ಸದಸ್ಯನಿಂದ ಜಾತಿ ನಿಂದನೆ
ಚೆನ್ನೈ: ಸಾರ್ವಜನಿಕ ಕೊಳದಲ್ಲಿ (Public Pond) ಸ್ನಾನ ಮಾಡುತ್ತಿದ್ದ ದಲಿತ ಮಹಿಳೆ ವಿರುದ್ಧ ಜಾತಿ (Scheduled Caste) ನಿಂದನೆ ಮಾಡಿ, ಆಕೆಯನ್ನು ಅರೆಬರೆ ಬಟ್ಟೆಯಲ್ಲೇ ಓಡಿಸಿದ ಘಟನೆ ತಮಿಳುನಾಡಿನ (TamilNadu) ಪುದುಕೊಟ್ಟೈ ಜಿಲ್ಲೆಯ ಕುತ್ತಂಕುಡಿ ಗ್ರಾಮದಲ್ಲಿ ನಡೆದಿದೆ.
ಸಂತ್ರಸ್ತ ಮಹಿಳೆಯೊಂದಿಗೆ (Women) ಗ್ರಾಮಸ್ಥರು ಜಾತಿ ನಿಂದನೆ ಮಾಡಿದ ವ್ಯಕ್ತಿ ಅಯ್ಯಪ್ಪನ್ ವಿರುದ್ಧ ದೂರು ನೀಡಿದ್ದಾರೆ.
ನಡೆದಿದ್ದೇನು?: ಇದೇ ಜನವರಿ 1ರಂದು ಮಹಿಳೆ ಕುತ್ತಂಕುಡಿ ಗ್ರಾಮದ ಸಾರ್ವಜನಿಕ ಕೊಳದಲ್ಲಿ ಸ್ನಾನ ಮಾಡಲು ಹೋಗಿದ್ದರು. ಈ ವೇಳೆ ಮಹಿಳೆಯನ್ನು ನೋಡಿದ ಅಯ್ಯಪ್ಪನ್ ಎಂಬ ವ್ಯಕ್ತಿ ಆಕೆಯನ್ನ ತಡೆದು ಗದರಿಸಿದ್ದಾನೆ. ಮಹಿಳೆ ಏಕೆ ಸ್ನಾನ ಮಾಡಬಾರದು ಎಂದು ಪ್ರಶ್ನಿಸಿದಾಗ ಮೀನು ಸಾಕಾಣಿಕೆಗಾಗಿ (Fish Breeding) ಈಗಾಗಲೇ ಕೆರೆಯನ್ನು ಹರಾಜು ಮಾಡಲಾಗಿದೆ ಎಂದು ಅಯ್ಯಪ್ಪನ್ ಹೇಳಿದ್ದಾನೆ.
ನಂತರ ಮಹಿಳೆ ಅರೆಬರೆ ಬಟ್ಟೆ ತೊಟ್ಟಿದ್ದರೂ ಹಾಗೆಯೇ ಓಡಿಸಿದ್ದಾನೆ. ಮಹಿಳೆಯ ಬಟ್ಟೆಯನ್ನು ಮುಳ್ಳಿನ ಪೊದೆ ಮೇಲೆ ಎಸೆದಿದ್ದಾನೆ. ಬಳಿಕ ಗ್ರಾಮಸ್ಥರು ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
ಅಯ್ಯಪ್ಪನ್ ಡಿಎಂಕೆ ಸದಸ್ಯ ಹಾಗೂ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಎಂದು ಮಹಿಳೆ ಶ್ರೀದೇವಿ ಪತಿ ವಡಿವೇಶ್ವರನ್ ಹೇಳಿದ್ದಾರೆ. ಅಲ್ಲದೇ ಮಹಿಳೆ ಸ್ನಾನ ಮಾಡುವಾಗ ಅಯ್ಯಪ್ಪನ್ ಜೊತೆಗೆ ಮುತ್ತುರಾಮನ್ ಎಂಬ ಇನ್ನೊಬ್ಬ ವ್ಯಕ್ತಿಯೂ ಇದ್ದ ಎಂದು ಆರೋಪಿಸಿದ್ದಾರೆ.