ಸೋಮವಾರ, ಜುಲೈ 1, 2024
ಮಾಜಿ ಸಿಎಂ ವೀರಪ್ಪ ಮೊಯ್ಲಿ ಪುತ್ರಿ ನಿಧನ.!-ವಿಶ್ವಕಪ್ ಕಿರೀಟ ಗೆದ್ದ ಬೆನ್ನಲ್ಲೇ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ T20 ಕ್ರಿಕೆಟ್ ನಿಂದ ನಿವೃತ್ತಿ ಘೋಷಣೆ!-ಬುಮ್ರ, ಹಾರ್ದಿಕ್ ಮ್ಯಾಜಿಕ್ ಬೌಲಿಂಗ್; ಸೂರ್ಯಕುಮಾರ್ ಸಕತ್ ಕ್ಯಾಚ್ - ಭಾರತಕ್ಕೆ ವಿಶ್ವಕಪ್-ಬಹು ವರ್ಷಗಳ ಕನಸು ನನಸು; ಟಿ-20 ವಿಶ್ವಕಪ್ ಕಿರೀಟ ಗೆದ್ದ ಭಾರತ-ಪ್ರವಾಸಿಗರ ಗಮನಕ್ಕೆ; ಕೊಡಗಿನ ಗಾಜಿನ ಸೇತುವೆ ಬಂದ್.!-ಉಜಿರೆ: ಭೀಕರ ರಸ್ತೆ ಅಪಘಾತ ; ಬೆಳ್ತಂಗಡಿಯ ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕರ ಪುತ್ರ ಪ್ರಜ್ವಲ್ ನಾಯಕ್ ಮೃತ್ಯು..!-11-21% ಟಾರಿಪ್ ಹೆಚ್ಚಿಸಿದ ಏರ್ಟೆಲ್; ಜುಲೈ 3 ರಿಂದ ಯಾವ ಪ್ಲಾನ್ ಗೆ ಹೇಗಿದೆ ದರ.?-ಕಾರ್ಕಳ: ಬಸ್ ಚಲಾವಣೆ ವೇಳೆ ಅಸ್ವಸ್ಥಗೊಂಡ ಚಾಲಕ; ಹಿಮ್ಮುಖವಾಗಿ ಬಸ್ ಚಲಿಸಿ 40ಕ್ಕೂ ಹೆಚ್ಚು ಪ್ರಯಾಣಿಕರು ಪಾರು.!-ಸಂಸತ್ತಲ್ಲಿ ನೀಟ್‌ ಕುರಿತು ರಾಹುಲ್‌ ಗಾಂಧಿ ಮಾತಾಡುವಾಗ ಮೈಕ್‌ ಆಫ್; ಕಾಂಗ್ರೆಸ್ ಗಂಭೀರ ಆರೋಪ-ಭೀಕರ ರಸ್ತೆ ಅಪಘಾತ; ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ,13 ಮಂದಿ ದುರ್ಮರಣ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕೊಲೆ ಪ್ರಕರಣ; ನಟ ದರ್ಶನ್ ಅರೆಸ್ಟ್.!

Twitter
Facebook
LinkedIn
WhatsApp
ಕೊಲೆ ಪ್ರಕರಣ; ನಟ ದರ್ಶನ್ ಅರೆಸ್ಟ್.!

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅರೆಸ್ಟ್ ಆಗಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಕ್ಕೆ ರೇಣುಕಾ ಸ್ವಾಮಿ ಎಂಬುವವರು ಕೊಲೆ ಆಗಿದ್ದರು. ನಟ ದರ್ಶನ್ ಅವರ ಸೂಚನೆ ಮೇರೆಗೆ ಕೊಲೆ ನಡೆದಿದೆ ಎನ್ನಲಾಗಿದೆ. ಈ ಪ್ರಕರಣ ಸದ್ಯ ಸೆನ್ಸೇಷನ್ ಸೃಷ್ಟಿ ಮಾಡಿದೆ. ಮೈಸೂರಿನ ಫಾರ್ಮ್​​ಹೌಸ್​ನಲ್ಲಿ ನಟ ದರ್ಶನ್​ ಅರೆಸ್ಟ್ ಆಗಿದ್ದಾರೆ ಎಂದು ತಿಳಿದು ಬಂದಿದೆ.

ದರ್ಶನ್ ಜೊತೆ ಪವಿತ್ರಾ ಗೌಡ ಆಪ್ತವಾಗಿದ್ದಾರೆ. ದರ್ಶನ್ ಜೊತೆ ಇರೋ ಫೋಟೋಗಳನ್ನು ಪವಿತ್ರಾ ಗೌಡ ಹಂಚಿಕೊಂಡಿದ್ದರು. ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುವವರು ಅಶ್ಲೀಲ ಮೇಸೆಜ್ ಮಾಡಿದ್ದರು. ಕಾಮಾಕ್ಷಿಪಾಳ್ಯದಲ್ಲಿ ರೇಣುಕಾಸ್ವಾಮಿಯ ಕೊಲೆ ಆಗಿತ್ತು. ದರ್ಶನ್ ಸೂಚನೆ ಮೇಲೆ ಕೊಲೆ ಮಾಡಿದ್ದಾಗಿ ನಾಲ್ವರು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಘಟನೆ ವೇಳೆ ಸ್ಥಳದಲ್ಲಿ ದರ್ಶನ್ ಕೂಡ ಇದ್ದರು ಎನ್ನಲಾಗಿದೆ. ಈ ಪ್ರಕರಣದಲ್ಲಿ ದರ್ಶನ್ ಸೇರಿ 10 ಜನರನ್ನು ಬಂಧಿಸಲಾಗಿದೆ.

ಈ ಘಟನೆ ನಡೆದಿದ್ದು ಜೂನ್ 9ರಂದು. ಚಿತ್ರದುರ್ಗದಿಂದ ರೇಣುಕಾ ಸ್ವಾಮಿ ಬೆಂಗಳೂರಿಕೆ ಕರೆದುಕೊಂಡು ಬರಲಾಗಿತ್ತು. ವಿನಯ್​ ಎನ್ನುವವರಿಗೆ ಸೇರಿದ ಶೆಡ್​ನಲ್ಲಿ ಅವರನ್ನು ಇರಿಸಲಾಗಿತ್ತು. ಈ ವೇಳೆ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಲಾಗಿದೆ. 4 ಜನ ಹಲ್ಲೆ ಮಾಡಿದ ತಂಡದಲ್ಲಿ ದರ್ಶನ್​ ಇದ್ದ ಬಗ್ಗೆ ಮಾಹಿತಿ ಇದೆ. ಹತ್ಯೆ ಮಾಡಿ ಮೃತದೇವನ್ನು ಮೋರಿಯಲ್ಲಿ ಎಸೆದು ಹೋಗಲಾಗಿತ್ತು. ವಿಜಯನಗರ ACP ಚಂದನ್​ ತಂಡದಿಂದ ದರ್ಶನ್​ ವಶಕ್ಕೆ ಪಡೆಯಲಾಗಿದೆ.

 

ಪವಿತ್ರಾ ಗೌಡ ಹಾಗೂ ದರ್ಶನ್ ಮಧ್ಯೆ ಆಪ್ತತೆ ಇದೆ. ಇಬ್ಬರೂ ಹಲವು ಕಡೆಗಳಲ್ಲಿ ಸುತ್ತಾಡಿ ಬಂದಿದ್ದರು. ಇವರ ಸಂಬಂಧದ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ