
ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ – ಸುನಿಲ್ ಕುಮಾರ್
ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ – ಸುನಿಲ್ ಕುಮಾರ್
ಸೋಮವಾರಪೇಟೆ: ಸಂಬಂಧಿಕರ ಮನೆಯಿಂದಲೇ ಚಿನ್ಮಾಭರಣ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಕುಶಾಲನಗರದ ನಿವಾಸಿ ಗಿರೀಶ್ ಎಂದು ಗುರುತಿಸಲಾಗಿದ್ದು, ಆರೋಪಿಯಿಂದ 1.40 ಲಕ್ಷ ರೂ.ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.
ಸೋಮವಾರಪೇಟೆ ತಾಲೂಕಿನ ಕುಂಬಾರಗಡಿಗೆ ನಿವಾಸಿ ಕೆ. ಆರ್.ಸೋಮಯ್ಯ ಅವರು ತಮ್ಮ ತಾಯಿಯೊಂದಿಗೆ ಮಾ.23ರಂದು ಮಡಿಕೇರಿಯಲ್ಲಿರುವ ತಂಗಿ ರಜಿತಾ ಎಂಬವರ ಮಗಳ ಹುಟ್ಟು ಹಬ್ಬಕ್ಕೆ ತೆರಳಿದ್ದು,ಈ ಸಂದರ್ಭ ತಾಯಿಯವರು 20 ಗ್ರಾಂ ತೂಕದ ಒಂದು ಚಿನ್ನದ ಸರ 12 ಗ್ರಾಂ ತೂಕದ ಒಂದು ಕಡಗ ಮತ್ತು 8 ಗ್ರಾಂ ತೂಕದ ಒಂದು ಜೊತೆ ಓಲೆಯನ್ನು ಹಾಕಿಕೊಂಡು ಹೋಗಿದ್ದರೆನ್ನಲಾಗಿದೆ.
ಮಾ.26ರಂದು ಮನೆಗೆ ವಾಪಸ್ಸು ಬಂದ ತಾಯಿ ತಾನು ಹಾಕಿಕೊಂಡು ಹೋಗಿದ್ದ ಚಿನ್ನಭಾರಣಗಳನ್ನು ಅವರ ರೂಂನಲ್ಲಿರುವ ಪೆಟ್ಟಿಗೆಯಲ್ಲಿದ್ದು, ಜೂ 10ರಂದು ತಾಯಿ ಸಂಬಂಧಿಕರ ಮನೆಗೆ ಹೋಗುವಾಗ ಚಿನ್ನವನ್ನು ಹಾಕಿಕೊಳ್ಳಲು ಪೆಟ್ಟಿಗೆ ತೆರೆದಾಗ ತೆಗೆದು ನೋಡಿದಾಗ ಪೆಟ್ಟಿಗೆಯಲ್ಲಿ ಇಟ್ಟಿದ್ದ ಚಿನ್ನದ ಆಭರಣಗಳು ನಾಪತ್ತೆಯಾಗಿತ್ತು.
_ಈ ಕುರಿತು ಸೋಮಯ್ಯ ಅವರು ನೀಡಿದ ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರು ಸೋಮಯ್ಯ ಅವರ ಸಂಬಂಧಿ ಕುಶಾಲನಗರದ ಗಿರೀಶ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದಾಗ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಇದೀಗ ಪೊಲೀಸರ ಅತಿಥಿಯಾಗಿರುವ ಗಿರೀಶನಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ._ಸಂಬಂಧಿಕರ ಮನೆಯಿಂದಲೇ ಚಿನ್ನಾಭರಣಗಳ ಕಳವು ಮಾಡಿದ ವಿಚಿತ್ರ ಪ್ರಸಂಗ ಇದಾಗಿದೆ.
ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ – ಸುನಿಲ್ ಕುಮಾರ್
ವಾಟ್ಸ್ಆ್ಯಪ್ನಿಂದ ಹೊಸ ಅಪ್ಡೇಟ್: ಇನ್ಮುಂದೆ ಸ್ಕ್ರೀನ್ ಶೇರ್ ಮಾಡಬಹುದು