ಕೊಯಮತ್ತೂರಿನಲ್ಲಿ ಅಣ್ಣಾಮಲೈ ಸೋಲು? ಚುನಾವಣೋತ್ತರ ಸಮೀಕ್ಷೆ ಏನು ಹೇಳುತ್ತೆ.!

ಚೆನ್ನೈ: ಲೋಕಸಭಾ ಚುನಾವಣೆ 2024 ರ ಚುಣಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿದ್ದು, ಈ ವರದಿಗಳ ಪ್ರಕಾರ ದೇಶದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಬಹುಮತ ಸಿಗುವ ಸಾಧ್ಯತೆಗಳು ದಟ್ಟವಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಹಲವು ಕ್ಷೇತ್ರಗಳು ದೇಶಾದ್ಯಂತ ಸುದ್ದಿಯಾಗಿ, ಹೆಚ್ಚಿನ ಗಮನ ಸೆಳೆದಿದ್ದವು. ಈ ಪೈಕಿ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸ್ಪರ್ಧಿಸಿದ್ದ ಕೊಯಂಬತ್ತೂರು ಲೋಕಸಭಾ ಕ್ಷೇತ್ರ ಪ್ರಮುಖವಾದದ್ದಾಗಿದೆ.
ಅಣ್ಣಾಮಲೈ ಎದುರಾಳಿಗಳಾಗಿ ಡಿಎಂಕೆಯಿಂದ ನಗರದ ಮಾಜಿ ಮೇಯರ್ ಪಿ ಗಣಪತಿ ರಾಜ್ಕುಮಾರ್ ಸ್ಪರ್ಧಿಸಿದ್ದರೆ, ಎಐಎಡಿಎಂಕೆಯಿಂದ ಸಿಂಗೈ ಜಿ ರಾಮಚಂದ್ರನ್ ಸ್ಪರ್ಧಿಸಿದ್ದಾರೆ. Axis My India ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಕೊಯಂಬತ್ತೂರಿನಲ್ಲಿ INDI ಮೈತ್ರಿಕೂಟದ ಅಭ್ಯರ್ಥಿ (ಡಿಎಂಕೆ ಅಭ್ಯರ್ಥಿ) ಗೆಲುವು ಸಾಧಿಸಲಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದು, ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯವನ್ನು ತಿರಸ್ಕರಿಸಿದ್ದು, ಜೂ.04 ರಂದು ನಾವು ನಿಮಗೆ ಅಚ್ಚರಿಯ ಫಲಿತಾಂಶ ನೀಡಲು ಬಯಸುತ್ತೇವೆ ಎಂದು ಹೇಳಿದ್ದಾರೆ. ಈ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೆಗಾ ರೋಡ್ ಶೋ ನಡೆಸಿ ಅಬ್ಬರದ ಪ್ರಚಾರ ನಡೆಸಿದ್ದರು.
2019 ಕೊಯಂಬತ್ತೂರಿನಿಂದ ಸಿಪಿಎಂ ನಕ ಪಿಆರ್ ನಟರಾಜನ್ ಡಿಎಂಕೆ ಹಾಗೂ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ನಾಟರಾಜನ್ ಪರ ಶೇ.45.85 ರಷ್ಟು ಮತಗಳು ಚಲಾವಣೆಯಾಗಿದ್ದರೆ, ಬಿಜೆಪಿಯ ಸಿಪಿ ರಾಧಾಕೃಷ್ಣನ್ ಪರ ಶೇ.31.47 ರಷ್ಟು ಮತಗಳು ಚಲಾವಣೆಯಾಗಿತ್ತು.