ಕೊಂಚ ಇಳಿಕೆ ಕಂಡ ಚಿನ್ನ ಬೆಳ್ಳಿಯ ದರ - ಇಂದಿನ ದರದ ಡೀಟೈಲ್ಸ್ ನೋಡಿ
ಬೆಂಗಳೂರು: ಭಾರತ ಹಾಗೂ ಇತರ ವಿದೇಶೀ ಚಿನಿವಾರ ಪೇಟೆಯಲ್ಲಿ ಗಣನೀಯವಾಗಿ ಹೆಚ್ಚುತ್ತಿದ್ದ ಚಿನ್ನದ ಬೆಲೆ (Gold Rates Hike) ಸ್ವಲ್ಪ ತಂಪಾಗಿದೆ. ಕಳೆದ ವಾರ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 3 ಸಾವಿರ ರುಪಾಯಿಗೂ ಹೆಚ್ಚು ಏರಿಕೆ ಕಂಡಿತ್ತು. ಇದೀಗ ಅದರ ಬೆಲೆ ಭಾರತದಲ್ಲಿ 55,000 ರುಪಾಯಿ ಮಟ್ಟಕ್ಕಿಂತ ಕಡಿಮೆ ಆಗಿದೆ. ಆದರೆ ಮುಂದಿನ ದಿನಗಳು ಚಿನ್ನದ ಬೆಲೆಗಳಲ್ಲಿ ಕ್ಷಿಪ್ರ ವ್ಯತ್ಯಯಗಳಾಗುವ ಸಾಧ್ಯತೆ ಇದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 60,000 ರುಪಾಯಿ ಗಡಿಗಿಂತ ಕಡಿಮೆಯಾಗಿದೆ. ಬೆಳ್ಳಿ ಬೆಲೆ ಸಾಕಷ್ಟು ಏರಿ ಈಗ ವಿರಮಿಸಿದಂತಿದೆ. ಭಾರತದಲ್ಲಿ ಬೆಳ್ಳಿ ಬೆಲೆ 10 ಗ್ರಾಮ್ಗೆ 720 ರುಪಾಯಿ ಆಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 54,800 ರುಪಾಯಿ ಆದರೆ, 100 ಗ್ರಾಮ್ ಬೆಳ್ಳಿ ಬೆಲೆ 7,210 ರುಪಾಯಿಗೆ ಇಳಿಕೆಯಾಗಿದೆ. ಆದರೆ, ಬೆಂಗಳೂರು, ಚೆನ್ನೈ ಮೊದಲಾದ ಕೆಲವೆಡೆ ಬೆಳ್ಳಿ ಬೆಲೆ ತುಸು ಏರಿದೆ.
ವಿದೇಶಗಳ ಚಿನಿವಾರಪೇಟೆಗಳಲ್ಲಿಯೂ (Bullion Market) ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ. ಎಂಸಿಎಕ್ಸ್ನಲ್ಲಿ ದಾಖಲೆಯ ಮಟ್ಟಕ್ಕೆ ಬೆಲೆ ಏರಿಕೆಯಾಗಿದೆ. ಇದರ ಬಿಸಿ ಭಾರತಕ್ಕೂ ತಟ್ಟಲಿದೆ. ಅನಿವಾಸಿ ಭಾರತೀಯರು ಹೆಚ್ಚಾಗಿ ನೆಲಸಿರುವ ಅರಬ್ ದೇಶಗಳು, ಅಮೆರಿಕ, ಸಿಂಗಾಪುರ, ಮಲೇಷ್ಯಾ ದೇಶಗಳಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಅಮೆರಿಕದಲ್ಲಿ ನಾಲ್ಕೈದಿನ ತಟಸ್ಥವಾಗಿದ್ದ ಚಿನ್ನದ ಬೆಲೆ ಮೊನ್ನೆ ತುಸು ಹೆಚ್ಚಿದೆ. ಈಗ ಬಹುತೇಕ ಎಲ್ಲಾ ವಿದೇಶಗಳಲ್ಲೂ ಚಿನ್ನದ ಬೆಲೆ ಭಾರತೀಯ ರುಪಾಯಿ ಲೆಕ್ಕದಲ್ಲಿ 50 ಸಾವಿರ ರೂ ಗಡಿ ದಾಟಿದೆ. ಮಲೇಷ್ಯಾ, ಕತಾರ್ ಮತ್ತು ಓಮನ್ನಲ್ಲಿ ಚಿನ್ನದ ಬೆಲೆ 52 ಸಾವಿರ ರೂಗಿಂತ ಹೆಚ್ಚಿದೆ.
ಅಮೆರಿಕದ ಆರ್ಥಿಕತೆಯ ತುಮುಲ, ನಿರುದ್ಯೋಗ ಅಂಕಿ ಅಂಶದ ಗೊಂದಲ, ಹಣದುಬ್ಬರ ಅನಿಶ್ಚಿತತೆ, ಬಡ್ಡಿ ದರ ಬಗ್ಗೆ ಅಸ್ಪಷ್ಟತೆ, ಡಾಲರ್ ದುರ್ಬಲಗೊಂಡಿರುವುದು ಇವೆಲ್ಲವೂ ಹೂಡಿಕೆದಾರರನ್ನು ಚಿನ್ನದತ್ತ ಗಮನ ಕೊಡುವಂತೆ ಮಾಡಿವೆ. ಹೀಗಾಗಿ, ಚಿನ್ನಕ್ಕೆ ಬೇಡಿಕೆ ಹೆಚ್ಚಿ ಬೆಲೆ ಕೂಡ ಹೆಚ್ಚುತ್ತಿದೆ. ತಜ್ಞರ ಪ್ರಕಾರ ಇನ್ನೂ ಬಹಳಷ್ಟು ದಿನ ಚಿನ್ನದ ಬೆಲೆ ಏರಿಕೆಯ ಟ್ರೆಂಡ್ ಮುಂದುವರಿಯಬಹುದು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಈಗಲೂ ಪ್ರಶಸ್ತ ಸಮಯ ಇದೆ ಎಂಬ ಸಲಹೆಯನ್ನು ಕೊಡಲಾಗಿದೆ.
ಭಾರತದಲ್ಲಿರುವ ಬೆಲೆ (ಮಾರ್ಚ್ 21ಕ್ಕೆ):
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,800 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,780 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 720 ರೂ
ಬೆಂಗಳೂರಿನಲ್ಲಿರುವ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,850 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,830 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 746 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 54,850 ರೂ
- ಚೆನ್ನೈ: 55,800 ರೂ
- ಮುಂಬೈ: 54,800 ರೂ
- ದೆಹಲಿ: 54,950 ರೂ
- ಕೋಲ್ಕತಾ: 54,800 ರೂ
- ಕೇರಳ: 54,800 ರೂ
- ಅಹ್ಮದಾಬಾದ್: 54,850 ರೂ
- ಜೈಪುರ್: 54,950 ರೂ
- ಲಕ್ನೋ: 54,950 ರೂ
- ಭುವನೇಶ್ವರ್: 54,800 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 2,820 ರಿಂಗಿಟ್ (52,099 ರುಪಾಯಿ)
- ದುಬೈ: 2237.50 ಡಿರಾಮ್ (50,296 ರುಪಾಯಿ)
- ಅಮೆರಿಕ: 610 ಡಾಲರ್ (50,349 ರುಪಾಯಿ)
- ಸಿಂಗಾಪುರ: 838 ಸಿಂಗಾಪುರ್ ಡಾಲರ್ (51,657 ರುಪಾಯಿ)
- ಕತಾರ್: 2,310 ಕತಾರಿ ರಿಯಾಲ್ (52,378 ರೂ)
- ಓಮನ್: 241.50 ಒಮಾನಿ ರಿಯಾಲ್ (51,791 ರುಪಾಯಿ)
- ಕುವೇತ್: 191 ಕುವೇತಿ ದಿನಾರ್ (51,441 ರುಪಾಯಿ)