
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ನವದೆಹಲಿ:ಕೇಂದ್ರ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ರಾಜ್ಯದಿಂದ ಇಬ್ಬರಿಗೆ ಮಂತ್ರಿಗಿರಿ ಸಿಗುವ ಸಾಧ್ಯತೆ ಇದೆ.
ಗುರುವಾರ 10.30ಕ್ಕೆ ಮೋದಿ ಕ್ಯಾಬಿನೆಟ್ ಗೆ ಹೊಸ ಸಚಿವರಿಗೆ ಸ್ಥಾನ ಸಿಗಲಿದೆ. ರಾಜ್ಯದಿಂದ ಲಿಂಗಾಯತ ಹಾಗೂ ದಲಿತ ಕೋಟಾದಟಿ ಮಂತ್ರಿ ಸ್ಥಾನ ಸಿಗುವ ನಿರೀಕ್ಷೆ ಇದೆ. ರಾಜ್ಯದಿಂದ ದಲಿತ ಕೋಟಾದಟಿ ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಹಾಗೂ ಲಿಂಗಾಯತ ಕೋಟಾದಡಿ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಅವರಿಗೆ ಮಂತ್ರಿ ಸ್ಥಾನ ಫಿಕ್ಸ್ ಎನ್ನಲಾಗುತ್ತಿದೆ.ಇಬ್ಬರಿಗೆ ಸಚಿವ ಸ್ಥಾನ ನೀಡುವ ನಿರೀಕ್ಷೆ ಇದೆ. ಆದರೆ ರಾಜ್ಯದಿಂದ ಯಾರಿಗೆ ಅದೃಷ್ಟ ಖುಲಾಸುತ್ತದೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕರ್ನಾಟಕದ ಜನರ ನಿರೀಕ್ಷೆ ಹೆಚ್ಚಾಗಿದೆ. 25 ಎಂಪಿ ಕ್ಷೇತ್ರಗಳನ್ನು ಗೆದ್ದುಕೊಟ್ಟ ಕರ್ನಾಟಕಕ್ಕೆ ಮೋದಿ ಸಂಪುಟದಲ್ಲಿ ಇನ್ನಷ್ಟು ಸ್ಥಾನ ಸಿಗಲಿ ಎಂಬ ಬಯಕೆ ಜಾಸ್ತಿಯಾಗಿದೆ.
ಕಲಬುರಗಿ ಸಂಸದ ಉಮೇಶ್ ಜಾಧವ್, ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ, ಶಿವಕುಮಾರ್ ಉದಾಸಿ, ಪಿಸಿ ಗದ್ದಿಗೌಡರ್ ಸೇರಿದಂತೆ ಇನ್ನೂ ಸಂಸದರೂ ಸಂಭಾವ್ಯ ಪಟ್ಟಿಯಲ್ಲಿದ್ದಾರೆ. ಆದರೆ ಮೋದಿ ಸಂಪುಟ ಯಾರು ಸೇರಿಕೊಳ್ಳಲಿದ್ದಾರೆ ಎನ್ನುವ ಖಚಿತವಾದ ಮಾಹಿತಿ ಇಲ್ಲ. ಕರ್ನಾಟಕದಿಂದ ಇನ್ನೂ ಕೆಲ ಸಂಸದರಿಗೆ ಕರೆ ಮಾಡಲಾಗಿದ್ದು ಚಿತ್ರದುರ್ಗ ಸಂಸದ ಎ ನಾರಾಯಣ ಸ್ವಾಮಿ ಕುಟುಂಬ ಸಮೇತ ದೆಹಲಿಗೆ ತೆರಳಿದ್ದಾರೆ.
ಪ್ರಸ್ತುತ ಕೇಂದ್ರ ಸಚಿವ ಸಂಪುಟವು ಮೋದಿ ಅವರನ್ನು ಹೊರತು ಪಡಿಸಿ 53 ಸಚಿವರನ್ನು ಒಳಗೊಂಡಿದೆ.
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್