ಕೆ.ಎಲ್ ರಾಹುಲ್- ಅಥಿಯಾ ಶೆಟ್ಟಿ ಮನೆಯಲ್ಲಿ ಮದುವೆ ಸಂಭ್ರಮ
ಬಾಲಿವುಡ್ (Bollywood) ನಟಿ ಅಥಿಯಾ ಶೆಟ್ಟಿ (Athiya Shetty) ಹಾಗೂ ಕ್ರಿಕೆಟಿಗ ಕೆ.ಎಲ್ ರಾಹುಲ್ (K.l Rahul) ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆಯ ಈಗಾಗಲೇ ತಯಾರಿ ಶುರುವಾಗಿದ್ದು, ರಾಹುಲ್ ಅವರ ಮುಂಬೈನ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ.
ಸುನೀಲ್ ಶೆಟ್ಟಿ (Suniel Shetty) ಅವರ ಖಂಡಾಲ ಬಂಗಲೆಯಲ್ಲಿ ಅಥಿಯಾ ಮತ್ತು ರಾಹುಲ್ ಮದುವೆ (Wedding) ಅದ್ದೂರಿಯಾಗಿ ನಡೆಯಲಿದೆ. ಜ.21ರಿಂದ ಮದುವೆ ಕಾರ್ಯಕ್ರಮ ಜರುಗಲಿದೆ. ಜ.23ರಂದು ಈ ಜೋಡಿ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಮದುವೆ ಸಿದ್ಧತೆಯಲ್ಲಿ ಕೆ.ಎಲ್ ರಾಹುಲ್ ಕೂಡ ಬ್ಯುಸಿಯಿದ್ದಾರೆ. ರಾಹುಲ್ ಅವರ ಮುಂಬೈ ಮನೆಯಲ್ಲಿ ಮದುವೆ ಜೋರಾಗಿ ಸಿದ್ಧತೆ ನಡೆಯುತ್ತಿದೆ.
ಇನ್ನೂ ಅಥಿಯಾ ಜೋಡಿ ಮದುವೆಯಲ್ಲಿ ಹೈ-ಪ್ರೋಫೈಲ್ ಸಲ್ಮಾನ್ ಖಾನ್, ಶಾರುಖ್ ಖಾನ್, ದೀಪಿಕಾ ಪಡುಕೋಣೆ, ರಣ್ವೀರ್ ಕಪೂರ್ ಜಾಕಿ ಶ್ರಾಫ್, ಅಕ್ಷಯ್ ಕುಮಾರ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ದಂಪತಿ ಸೇರಿದಂತೆ ಹಲವರು ಮದುವೆ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ. ಸುನೀಲ್ ಶೆಟ್ಟಿ ಅವರ ಭವ್ಯ ಬಂಗಲೆಯಲ್ಲಿ ಮದುವೆ ನಡೆಯಲಿದೆ.
ಸಾಕಷ್ಟು ವರ್ಷಗಳು ಡೇಟಿಂಗ್ ನಂತರ ಗುರುಹಿರಿಯರ ಸಮ್ಮುಖದಲ್ಲಿ ರಾಹುಲ್ ಮತ್ತು ಅಥಿಯಾ ಹಸೆಮಣೆ ಏರುತ್ತಿದ್ದಾರೆ. ಜ.23ರಂದು ಹೊಸ ಬಾಳಿಗೆ ಈ ಜೋಡಿ ಕಾಲಿಡಲಿದ್ದಾರೆ.