ಭಾನುವಾರ, ಮೇ 26, 2024
ಎಸ್ಆರ್ ಹೆಚ್ ತಂಡದ ಮಾಲಕಿ ನ್ಯಾಷನಲ್ ಕ್ರಶ್ ಕಾವ್ಯ ಮಾರನ್ ಹಿನ್ನೆಲೆ ಏನು..!-ಉಡುಪಿ: ನಡು ರಸ್ತೆಯಲ್ಲೇ ಎರಡು ತಂಡದ ಯುವಕರ ನಡುವೆ ಗ್ಯಾಂಗ್ ವಾರ್; ಇಲ್ಲಿದೆ ವಿಡಿಯೋ-ಬಸ್ಸನ್ನು ಚಲಾಯಿಸುವಾಗಲೇ ಛತ್ರಿ ಹಿಡಿದು ವಿಡಿಯೋ ಮಾಡಿದ ಡ್ರೈವರ್; ನಿರ್ವಾಹಕಿ ಮತ್ತು ಚಾಲಕ ಸಸ್ಸೆಂಡ್..!-ಬಸ್ಸನ್ನು ಚಲಾಯಿಸುವಾಗಲೇ ಛತ್ರಿ ಹಿಡಿದು ವಿಡಿಯೋ ಮಾಡಿದ ಡ್ರೈವರ್; ನಿರ್ವಾಹಕಿ ಮತ್ತು ಚಾಲಕ ಸಸ್ಸೆಂಡ್..!-ಪೋರ್ಷೆ ಕಾರು ಅಪಘಾತ ಪ್ರಕರಣ: ಅಪ್ರಾಪ್ತನ ತಂದೆಗೆ ನ್ಯಾಯಾಂಗ ಬಂಧನ ; ಇಬ್ಬರು ಪೊಲೀಸರು ಅಮಾನತು..!-miyazaki mango: ಜಗತ್ತಿನಲ್ಲಿ ದುಬಾರಿ ಮಾವಿನ ಹಣ್ಣಿನ ಪಟ್ಟಿಯಲ್ಲಿ ಮಿಯಾಜಕಿ ಹಣ್ಣಿನ ವಿಶೇಷತೆ ಏನು..?-ಮಧ್ಯಪ್ರಿಯರಿಗೆ ಜೂನ್ ಮೊದಲ ವಾರದಲ್ಲಿ ಎಣ್ಣೆ ಸಿಗೋದು ಡೌಟ್..!-ಹಾರ್ದಿಕ್ ಪಾಂಡ್ಯಾ ಮತ್ತು ನತಾಶಾ ದಾಂಪತ್ಯ ಜೀವನದಲ್ಲಿ ಬಿರುಕು? ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾದ ಸುದ್ದಿ..!-ಧರ್ಮಸ್ಥಳದಿಂದ ವಾಪಸ್ಸಾಗುತ್ತಿದ್ದ ವೇಳೆ ಭೀಕರ ಅಪಘಾತಕ್ಕೆ ಒಂದೇ ಕುಟುಂಬದ ನಾಲ್ವರು ಬಲಿ..!-ಅಚ್ಚರಿ ಘಟನೆ; ಅಂತ್ಯಸಂಸ್ಕಾರದ ವೇಳೆ ಕೆಮ್ಮಿದ ಕಂದಮ್ಮ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕುರ್ಕುರೆ ತರಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತ್ನಿ..!

Twitter
Facebook
LinkedIn
WhatsApp
ಕುರ್ಕುರೆ ತರಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತ್ನಿ..!

ಮದುವೆ ಅನ್ನೋದು ಏಳೇಳು ಜನ್ಮದ ಬಂಧ ಎನ್ನಲಾಗುತ್ತೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಮದುವೆ, ವಿಚ್ಛೇದನ ಹೆಚ್ಚಾಗುತ್ತಿದೆ. ಸಣ್ಣ ಪುಟ್ಟ ವಿಚಾರಕ್ಕೂ ಈಗ ವಿಚ್ಛೇದನ ಪಡೆಯವುದು ನಡೆಯುತ್ತಲೇ ಇದೆ. ಅದರಲ್ಲೂ ಗಂಡ ಹೆಂಡತಿ ಈಗ ಚಿಕ್ಕದಾಗಿ ಗಲಾಟೆ ನಡೆದರೂ ವಿಚ್ಛೇದನಕ್ಕೆ ಅರ್ಜಿ ಹಾಕುವ ಪ್ರಸಂಗಗಳು ನಡೆಯುತ್ತಿವೆ.

ಅದರೆ ಇತ್ತೀಚಿನ ದಿನಗಳಲ್ಲಿ ನೀವು ಕೇಳಿರಬಹುದು. ಪತ್ನಿ ಹೆಚ್ಚು ಮೊಬೈಲ್ ಬಳಸುತ್ತಾಳೆ ಎಂದು ವಿಚ್ಚೇದನ ಪಡೆಯುವುದು, ಗಂಡ ತಡವಾಗಿ ಮನೆಗೆ ಬರುತ್ತಾನೆ ಎಂದು ವಿಚ್ಛೇದನ ಪಡೆಯುವುದು, ಪತ್ನಿ ಕೋಳಿ ಸಾರು ಮಾಡಲಿಲ್ಲ ಎಂದು ವಿಚ್ಛೇದನ ಪಡೆದ ಚಿತ್ರ ವಿಚಿತ್ರ ಪ್ರಸಂಗಗಳ ಕೇಳಿದ್ದೇವೆ.

ಆದ್ರೆ ಇಲ್ಲೊಂದು ಪ್ರಕರಣದಲ್ಲೂ ವಿಚಿತ್ರ ಕಾರಣಕ್ಕೆ ಪತ್ನಿ ಗಂಡನಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಾಳೆ. ಆಕೆ ಪತಿ ಕುರ್‌ಕುರೆ ತೆರಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಆಘಾತಕಾರಿ ಮತ್ತು ವಿಚಿತ್ರ ಘಟನೆಯೊಂದು ವರದಿಯಾಗಿದೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಈ ವಿಚಿತ್ರ ಬೆಳವಣಿಗೆ ನಡೆದಿದೆ.

ಕಳೆದ ವರ್ಷ ವಿವಾಹವಾಗಿದ್ದ ಜೋಡಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿ ವಿಚ್ಚೇದನಕ್ಕೂ ಅರ್ಜಿ ಸಲ್ಲಿಸಿದೆ. ಆಕೆ ನಿತ್ಯವೂ ಕುರ್ಕುರೆ ತಿಂಡಿ ಸವಿಯುವ ಅಭ್ಯಾಸ ಇಟ್ಟುಕೊಂಡಿದ್ದಳಂತೆ. ಪತಿ ಸಹ ನಿತ್ಯ 5 ರೂಪಾಯಿ ನೀಡಿ ಕುರ್ಕರೆ ತಂದು ಕೊಡುತ್ತಿದ್ದನಂತೆ. ಆದ್ರೆ ಒಂದೊಂದು ದಿನ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ವರದಿಯಾಗಿದೆ.

ಯಾವ ದಿನ ಪತಿ ಕುರ್ಕುರೆ ತರಲು ಮರೆಯುತ್ತಾನೋ ಅಂದು ಮನೆಯಲ್ಲಿ ಗಲಾಟೆ ಉಂಟಾಗುತ್ತಿತ್ತಂತೆ. ಪತ್ನಿ ತಿಂಡಿ ಬೇಕು ಬೇಕು ಹಠ ಹಿಡಿದು ಮನೆಯಲ್ಲಿ ರಂಪಾಟ ನಡೆಸುತ್ತಿದ್ದಳಂತೆ. ಇದೇ ರೀತಿ ಒಂದು ದಿನ ಗಲಾಟೆ ದೊಡ್ಡದಾಗಿ ಆಕೆ ತವರು ಮನೆ ಸೇರಿದ್ದಳು.

ಇಲ್ಲಿಗೆ ಗಲಾಟೆ ತಣ್ಣಗಾದೆ ಆಕೆ ವಿಚ್ಚೇದನಕ್ಕೆ ಅರ್ಜಿ ಸಹ ಹಾಕಿದ್ದಾಳೆ. ಕಳೆದ ವರ್ಷ ವಿವಾಹವಾದ ದಂಪತಿಯನ್ನು ಆಗ್ರಾದ ಶಹಗಂಜ್ ಪೊಲೀಸರು ಕುಟುಂಬ ಸಮಾಲೋಚನೆಗಾಗಿ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಪತಿ, ತನ್ನ ಹೇಳಿಕೆಯಲ್ಲಿ, ಕುರ್ಕುರೆಗಾಗಿ ತನ್ನ ಹೆಂಡತಿಯ ಅಸಾಮಾನ್ಯ ಬಯಕೆ ಕುರಿತು ಆತ ಕಳವಳ ವ್ಯಕ್ತಪಡಿಸಿದ್ದನು.

ಮತ್ತೊಂದೆಡೆ, ಪತಿ ತನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಾನೆ ಹೀಗಾಗಿ ನಾನು ತವರು ಮನೆ ಸೇರಿದೆ ಎಂದು ಆಕೆ ಪೊಲೀಸರ ಬಳಿ ಹಾಗೂ ವಕೀಲರ ಬಳಿ ವಿವರಿಸಿದ್ದಾಳೆ. ಆದರೆ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜನರು ಅಕ್ಷರಶಃ ಶಾಕ್ ಆಗಿದ್ದಾರೆ.

ಈ ರೀತಿ ಕುರ್ಕುರೆಗಾಗಿ ವಿಚ್ಚೇದನ ಪಡೆಯಲು ಮುಂದಾದರೆ ಮುಂದೊಂದು ದಿನ ಸಮಾಜದಲ್ಲಿ ವಿವಾಹಿತರಿಗಿಂತಲೂ ವಿಚ್ಛೇದನ ಪಡೆದ ಜನರೇ ಹೆಚ್ಚಾಗಿರುತ್ತಾರೆ ಎಂಬುದು ನೆಟ್ಟಿಗರ ಅಭಿಪ್ರಾಯವಾಗಿದೆ. ಜೊತೆಗೆ ಈ ರೀತಿ ಸಣ್ಣಪುಟ್ಟ ವಿಚಾರಕ್ಕೆ ವಿಚ್ಚೇದನ ಪಡೆಯುವ ಬದಲು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುವುದು 100 ಪಟ್ಟು ಮೇಲು ಎಂದು ಮತ್ತೆ ಕೆಲವರು ಅಭಿಪ್ರಾಯ ಹೊರಹಾಕಿದ್ದಾರೆ.

ಇದಕ್ಕೂ ಮೊದಲು ವಾರದ ಹಿಂದಷ್ಟೇ ಇದಕ್ಕಿಂತ ವಿಚಿತ್ರವಾದ ಕಾರಣಕ್ಕೆ ಪತಿಯೊಬ್ಬ ಪತ್ನಿಯಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದ. ಹೈದರಾಬಾದ್‌ನ ನಿಖಂದರಾಬಾದ್‌ ನಲ್ಲಿ ಪತಿಯೊಬ್ಬ ಪತ್ನಿ ವಿರುದ್ಧ ಅಸಮಾಧಾನಗೊಂಡು ವಿಚ್ಛೇದನ ಪಡೆಯಲು ಮುಂದಾಗಿದ್ದ. ಆಕೆ ರಾಜಕೀಯದಲ್ಲಿ ತನ್ನನ್ನು ಗುರುತಿಸಿಕೊಳ್ಳಲು ಈ ಚುನಾವಣೆಯ ಸಮಯದಲ್ಲಿ ಹೆಚ್ಚು ಸಮಯ ರಾಜಕೀಯ ಪಕ್ಷ ಹಾಗೂ ನಾಯಕರ ಜೊತೆ ಓಡಾಡುತ್ತಾಳೆ ಎಂಬ ಕಾರಣಕ್ಕೆ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಪ್ರಸಂಗ ಸಹ ನಡೆದಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ