ಕುಂದಾಪುರ: ಬೈಕ್ ಢಿಕ್ಕಿ-ಪಾದಚಾರಿ ಸಾವು
Twitter
Facebook
LinkedIn
WhatsApp
ಕುಂದಾಪುರ, ಜ 16 : ಬೈಕ್ ಢಿಕ್ಕಿಯಾಗಿ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಕೋಣಿ ಗ್ರಾಮದ ಕಟ್ಕೇರಿಯಲ್ಲಿ ನಡೆದಿದೆ.
ಚಂದ್ರಕುಮಾರ್ (68) ಮೃತಪಟ್ಟವರು. ಪ್ರದೀಪ್ ಎಂಬವರು ಕೋಟೇಶ್ವರ ಕಡೆಯಿಂದ ಹಾಲಾಡಿ ಕಡೆಗೆ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಉಳ್ಳೂರಿನ ಕಾರೆಬೈಲು ನಿವಾಸಿ ಚಂದ್ರಕುಮಾರ್ ಅವರಿಗೆ ಢಿಕ್ಕಿಯಾಗಿದೆ.
ಗಂಭೀರ ಗಾಯಗೊಂಡ ಚಂದ್ರಕುಮಾರ್ ಅವರನ್ನು ಕೂಡಲೇ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ಇನ್ನು ಬೈಕ್ ಸವಾರ ಪ್ರದೀಪ್ ಅವರಿಗೂ ಗಾಯಗಳಾಗಿದ್ದು, ಅವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.