- ಬೆಂಗಳೂರು
- 9:56 ಫೂರ್ವಾಹ್ನ
- ಜನವರಿ 28, 2023
ಕಿಲ್ಲರ್ BMTCಗೆ ಮತ್ತೊಂದು ಬಲಿ – ಮೂವರ ಸ್ಥಿತಿ ಗಂಭೀರ

ಬೆಂಗಳೂರು: ನಗರದಲ್ಲಿ ಬಿಎಂಟಿಸಿ (BMTC) ಬಸ್‍ಗೆ (Bus) ಮತ್ತೊಂದು ಬಲಿಯಾಗಿದೆ. ನಾಗವಾರ-ಯಲಹಂಕ ಮಾರ್ಗದಲ್ಲಿ ಸರಣಿ ಅಪಘಾತ ಸಂಭವಿಸಿದೆ. 2 ಕಾರ್ (Car), ದ್ವಿಚಕ್ರ ವಾಹನಗಳಿಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ.
ನಾಗವಾರ (Nagavara) ಮತ್ತು ಯಲಹಂಕ (Yelahanka) ಮಾರ್ಗವಾಗಿ ಸಂಚರಿಸುತ್ತಿದ್ದ 290 ಇಡಿ ಬಸ್, ಬೆಳ್ಳಲ್ಲಿ ಕಡೆಯಿಂದ ಹೆಗಡೆನಗರ ಮಾರ್ಗವಾಗಿ ಸಂಚಾರ ಮಾಡುವಾಗ ಭಾರತೀಯ ಸಿಟಿ ಜಂಕ್ಷನ್‍ನಲ್ಲಿ ನಿಂತಿದ್ದ ಸ್ಕೂಟರ್ ಹಾಗೂ ಬೈಕ್‍ಗಳಿಗೆ ಏಕಾಏಕಿ ಡಿಕ್ಕಿ ಹೊಡೆದಿದೆ. ಬಸ್ ವೇಗದಲ್ಲಿದ್ದ ಕಾರಣ ಕಂಟ್ರೋಲ್ ಸಿಗದೇ ಡಿಕ್ಕಿ ಹೊಡೆದು ಬೈಕ್‍ಗಳನ್ನು ಎಳೆದುಕೊಂಡು ಹೋಗಿದೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು (Injured). ಗಾಯಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ (Hospital) ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಯೂಬ್ ಖಾನ್ (33) ಮೃತಪಟ್ಟಿದ್ದಾರೆ.
ಗಾಯಗೊಂಡ ರಫೀವುಲ್ಲಾ ಖಾನ್, ಮುಸಾದ್ದೀಕ್, ಮುನ್ನಾವರ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಚಿಕ್ಕಜಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕ ಹಾಗೂ ಬಸ್‍ನ್ನು ವಶಕ್ಕೆ ಪಡೆದಿದ್ದಾರೆ. ಬ್ರೇಕ್ ಫೇಲ್‌ನಿಂದ ಘಟನೆ ಸಂಭವಿಸಿರುವುದಾಗಿ ಚಾಲಕ ಗೊವೀಂದ್ ರಾಜು ಹೇಳಿಕೆ ನೀಡಿದ್ದಾರೆ. ಬಿಎಂಟಿಸಿ ಬಸ್ ಚಾಲಕನ ಅತಿ ವೇಗದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.