Tuesday, November 29, 2022
ಖಡ್ಗ ಹಿಡಿದು ಶ್ರದ್ಧಾ ಹಂತಕ ಅಫ್ತಾಬ್ ಮೇಲೆ ದಾಳಿಗೆ ಯತ್ನ; ಪೊಲೀಸ್‌ ವಾಹನದ ಮೇಲೆ ಮುಗಿಬಿದ್ದ ಗುಂಪು!-ಮುಸ್ಲಿಂ ವಿದ್ಯಾರ್ಥಿಯನ್ನು ಟೆರರಿಸ್ಟ್​​ಗೆ ಹೋಲಿಸಿದ್ದ ಪ್ರೊಫೆಸರ್​​ ಅಮಾನತು..-ಪಾನಿಪುರಿ ತಿನ್ನುತ್ತಿದ್ದ ಅಕ್ಕತಂಗಿಯರ ಮೇಲೆ ಹರಿದ ಕಾರು: ತಂಗಿ ಸಾವು-ಒಂದೇ ಓವರ್​ನಲ್ಲಿ 7 ಸಿಕ್ಸರ್..! 16 ಸಿಕ್ಸರ್, 10 ಬೌಂಡರಿ ಸಹಿತ ಸ್ಫೋಟಕ ದ್ವಿಶತಕ ಸಿಡಿಸಿದ ರುತುರಾಜ್..!-ನೆನಪಿರಲಿ ಪ್ರೇಮ್ ಪುತ್ರಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ: ಹೀರೋ ಯಾರು?-ನಶೆಯಲ್ಲಿ ಮಲಗಿದ್ದವನ ಜೇಬಿಂದ ₹70 ಸಾವಿರ ಎಗರಿಸಿದ ಚೋರರು!-ಹಾರ್ನ್ ಮಾಡಿ ದಾರಿ ಕೇಳಿದ್ದಕ್ಕೇ ಚಾಲಕನಿಗೆ ಚಾಕು ಇರಿದ ಪುಂಡರು!-ದೊಡ್ಮನೆಯಲ್ಲಿ ಬ್ರೇಕಪ್ ಮಾಡಿಕೊಂಡ ರಾಕೇಶ್ – ಅಮೂಲ್ಯ-50 ಕೋಟಿ ವಾಟ್ಸಪ್ ಬಳಕೆದಾರರ ಮಾಹಿತಿ ಸೋರಿಕೆ – ಭಾರೀ ಮೊತ್ತಕ್ಕೆ ಸೇಲ್!-ವಿದ್ಯುತ್ ಟವರ್‌ನಲ್ಲಿ ಸಿಕ್ಕಿಹಾಕಿಕೊಂಡ ಮಿನಿ ವಿಮಾನ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಕಾರ್ಕಳ: ಖ್ಯಾತ ಕೊಂಕಣಿ ಸಾಹಿತಿ ಕೆವಿನ್ ಡಿ'ಮೆಲ್ಲೋ ಕಾರ್ಕಳ ನಿಧನ

Twitter
Facebook
LinkedIn
WhatsApp

ಕಾರ್ಕಳ, ನ 24 : ಖ್ಯಾತ ಕೊಂಕಣಿ ಲೇಖಕ ಕೆವಿನ್ ಡಿ’ಮೆಲ್ಲೋ ಕಾರ್ಕಳ(53) ಅವರು ನವೆಂಬರ್ 24 ಗುರುವಾರ ಮಧ್ಯಾಹ್ನ ನಿಧನರಾದರು. ಕಾರ್ಕಳದ ರಾಮಸಮುದ್ರ ಬಳಿಯ ತಮ್ಮ ಮನೆಯ ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕೆವಿನ್ ಆಲ್ಕೋಹಾಲಿಕ್ ಅನೆಮಿಕ್ ಮಿಷನ್‌ನಲ್ಲಿ ಸಕ್ರಿಯರಾಗಿದ್ದರು. ಅನೇಕರನ್ನು ಮದ್ಯ ವ್ಯಸನ ಮುಕ್ತರಾಗಿಸುವಲ್ಲಿ ಯಶಸ್ವಿಯಾಗಿದ್ದರು,. ಇದಲ್ಲದೆ, ಉತ್ತಮ ಸಮಾಜ ಸೇವಕರಾಗಿ ಕಾರ್ಕಳ ಸುತ್ತಮುತ್ತ ಗುರಿತಿಸಿಕೊಂಡಿದ್ದರು. 

ಕೊಂಕಣಿಯಲ್ಲಿ ಸಣ್ಣಕಥೆಗೆ ಹೆಸರುವಾಸಿಯಾಗಿದ್ದ ಇವರು 1983ರಿಂದ ಸಾಹಿತ್ಯ ಕ್ಷೇತ್ರಕ್ಕೆ ಪಾದರ್ಪಣೆಗೈದಿದ್ದರು. ಇನ್ನೂರಕ್ಕೂ ಹೆಚ್ಚು ಸಣ್ಣಕಥೆಗಳನ್ನು ಬರೆದಿರುವ ಇವರು, ನಾಲ್ಕು ಸಣ್ಣ ಕಾದಂಬರಿಗಳನ್ನು ಬರೆದಿದ್ದಾರೆ. ಚಂಡ ಆನಿ ಗರ್ಭ ಇವರ ಕಥಾ ಸಂಗ್ರಹವಾಗಿದೆ. ಮೃತರು ಗಾಂಧಿ ಮೈದಾನ ಕ್ರೈಸ್ಟ್ ಕಿಂಗ್ ಚರ್ಚ್ ಶಾಲಾ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ