ಮಂಗಳವಾರ, ಅಕ್ಟೋಬರ್ 3, 2023
ಹ್ಯುಂಡೈನ ಎಲ್ಲ ಮಾದರಿಯ ಕಾರುಗಳಲ್ಲಿ ಇನ್ನು ಮುಂದೆ ಆರು ಏರ್​ಬ್ಯಾಗ್​ಗಳು ನೀಡುವುದಾಗಿ ಘೋಷಿಸಿದ ಹ್ಯುಂಡ್ಯೆ!-ಉಳ್ಳಾಲ: ಅಬ್ಬಕ್ಕ ಪ್ರತಿಮೆ ಎದುರು ಪುಂಡಾಟ; ಯುವಕರಿಗೆ ನೋಟಿಸ್-ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚಿನ್ನ ಸೀಝ್ ; ಚಿನ್ನವನ್ನು ಎಲ್ಲೆಲ್ಲಿ ಬಚ್ಚಿಟ್ಟು ತಂದಿದ್ದಾರೆ ಗೊತ್ತೆ..!-ನನ್ನ ಮೇಲೆ ಹೈಕಮಾಂಡ್ ಗೆ ಪ್ರೀತಿ ಜಾಸ್ತಿ; ಅದಕ್ಕೆ ನಾನೇನು ಮಾತನಾಡಿದರೆ ನೋಟಿಸ್ ಕೊಡುತ್ತಾರೆ !-ಕೇರಳ : ಚರ್ಚ್ ಪಾದ್ರಿ ಬಿಜೆಪಿ ಸೇರ್ಪಡೆ ; ಕರ್ತವ್ಯದಿಂದ ಅಮಾನತು!-ಮಹಾರಾಷ್ಟ್ರ : ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನ 12 ನವಜಾತ ಶಿಶುಗಳು ಸೇರಿ 24 ಮಂದಿ ಸಾವು!-ಒಂದೇ ಧರ್ಮವಿದೆ; ಅದು ಸನಾತನ ಧರ್ಮ - ಯೋಗಿ ಆದಿತ್ಯನಾಥ್-ಕಾಪು : ಆಲದ ಮರ ಉರುಳಿ ಬಿದ್ದು ಓರ್ವ ಸಾವು ; ಇಬ್ಬರಿಗೆ ಗಾಯ!-Gold Rate : ಇಳಿಕೆ ಕಂಡ ಚಿನ್ನದ ಬೆಲೆ ; 10 ಗ್ರಾಂ ಚಿನ್ನ - ಬೆಳ್ಳಿಯ ದರ ಇವತ್ತೆಷ್ಟಿದೆ!-ರಸ್ತೆ ಬದಿ ಮಲಗಿದ್ದ 10 ಮಂದಿ ಕಾರ್ಮಿಕರ ಮೇಲೆ ಹರಿದ ಟ್ರಕ್ ; 5 ಮಂದಿ ಮೃತ್ಯು - ಐವರು ಗಂಭೀರ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಾರು ಬಿಟ್ಟು ಮೆಟ್ರೋ ಹತ್ತಿ ಕಲ್ಯಾಣ ಮಂಟಪ ತಲುಪಿದ ಮದುಮಗಳು! ವಿಡಿಯೋ ವೈರಲ್

Twitter
Facebook
LinkedIn
WhatsApp
download 8

ಬೆಂಗಳೂರು: ಯಾವ್ಯಾವ ಕಾಲಕ್ಕೆ ಏನೇನು ಆಗ ಬೇಕೋ ಅದು ಆಗಲೇಬೇಕು ಎಂಬ ಮಾತಿದೆ. ಆದರೆ, ನಮ್ಮ ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆಯು “ಆಗಬೇಕಾದ್ದನ್ನು ಸೂಕ್ತ ಕಾಲಕ್ಕೆ ಆಗದಂತೆ ಮಾಡಿದ’ ಎಷ್ಟೋ ಉದಾಹರಣೆಗಳಿವೆ. ತನ್ನ ಮದುವೆಗೆ ಈ ಸಮಸ್ಯೆ ಅಂಟಿಕೊಳ್ಳಬಾರದು ಎಂದು ನಿರ್ಧರಿಸಿದ ಯುವತಿಯೊಬ್ಬಳು, ಸಮಯಕ್ಕೆ ಸರಿಯಾಗಿ ಕಲ್ಯಾಣ ಮಂಟಪ ತಲುಪಲು ಕಾರು ಬಿಟ್ಟು “ಮೆಟ್ರೋ’ ಹತ್ತಿದ್ದಾಳೆ!

ಹೌದು, ಬೆಂಗಳೂರಿನ ವಧು ರೇಷ್ಮೆ ಸೀರೆ, ಚಿನ್ನಾಭರಣ ತೊಟ್ಟು, ಮೇಕಪ್‌ ಮಾಡಿಕೊಂಡು ಮನೆ ಮಂದಿಯೊಂದಿಗೆ ಕಲ್ಯಾಣ ಮಂಟಪಕ್ಕೆ ತೆರಳುತ್ತಿದ್ದಳು. ಆದರೆ, ಆಕೆಯಿದ್ದ ಕಾರು ನಗರದ ಟ್ರಾಫಿಕ್‌ ನಲ್ಲಿ ಸಿಲುಕಿಕೊಂಡಿತು. ಈ ದಟ್ಟಣೆಯಲ್ಲಿ ಕಾದು ಕುಳಿತರೆ, ಮುಹೂರ್ತ ಮೀರಿ ಹೋಗುವುದು ಖಚಿತ ಎಂದು ಯೋಚಿಸಿದ ಆಕೆ, ಕಾರಿನಲ್ಲಿ ಇಳಿದು ನೇರವಾಗಿ ಮೆಟ್ರೋ ಹತ್ತಿಯೇ ಬಿಟ್ಟಳು. ಕುಟುಂಬ ಸದಸ್ಯರೂ ಆಕೆ ಯನ್ನು ಹಿಂಬಾಲಿಸಿದರು.

ಮೆಟ್ರೋ ದಲ್ಲಿ ವಧು ತೆರಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್‌ ಆಗಿದೆ. ಆಕೆಯನ್ನು ಎಲ್ಲರೂ “ಸ್ಮಾರ್ಟ್‌ ಮದುಮಗಳು’ ಎಂದು ಕರೆದಿದ್ದಾರೆ. ಈ ವಿಡಿಯೋ ಅಪ್‌ಲೋಡ್‌ ಆದ ಕೆಲವೇ ಕ್ಷಣಗಳಲ್ಲಿ 3 ಸಾವಿರ ವೀಕ್ಷಣೆ ಗಳಿಸಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ