ಕಾಂಗ್ರೆಸ್ ಅಭ್ಯರ್ಥಿ, ನಾಯಕರುಗಳ ಬೂತ್ ಲೀಡ್ ಹುಡುಕುತ್ತಿರುವ ಕಾರ್ಯಕರ್ತರು. ದಕ್ಷಿಣ ಕನ್ನಡ ಕಾಂಗ್ರೆಸ್ ನಲ್ಲಿ ಕುತೂಹಲಕರ ಬೆಳವಣಿಗೆ!
Twitter
Facebook
LinkedIn
WhatsApp
ಮಂಗಳೂರು: ಮಂಗಳೂರು ಲೋಕಸಭೆಯ ಚುನಾವಣಾ ಫಲಿತಾಂಶ ಬಹಿರಂಗವಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಕಾಂಗ್ರೆಸ್ ಜಿಲ್ಲಾಮಟ್ಟದ ನಾಯಕರುಗಳ, ರಾಜ್ಯಮಟ್ಟದ ನಾಯಕರುಗಳ ಬೂತುಗಳ ಲೀಡ್ ಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈಗ ಚರ್ಚೆ ಆರಂಭವಾಗಿದೆ.
ಸಾಮಾನ್ಯ ಕಾರ್ಯಕರ್ತರುಗಳು ಬೂತುಗಳಲ್ಲಿ ತಮ್ಮ ನಾಯಕರುಗಳ ಲೀಡ್ ಹೇಗಿದೆ ಎಂಬುದನ್ನು ಪರಿಶೀಲಿಸಲು ಮುಗಿಬಿದ್ದಿದ್ದಾರೆ ಎಂಬ ಕುತೂಹಲಕರ ಅಂಶ ಈಗ ಹೊರ ಬಿದ್ದಿದೆ.
ಹಲವಾರು ನಾಯಕರುಗಳ ಲೀಡ್ ಗಳನ್ನು, ಮೈನಸ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕರ್ತರುಗಳು ಹಂಚಿಕೊಂಡಿದ್ದಾರೆ ಎಂಬ ಮಾಹಿತಿ ಈಗ ಹೊರ ಬಿದ್ದಿದ್ದೆ. ಈ ಸಾಮಾಜಿಕ ಜಾಲತಾಣದ ವಾರ್ ಎಲ್ಲಿಯವರೆಗೆ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.