ಗುರುವಾರ, ಜುಲೈ 25, 2024
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಂಗಳೂರಿನ ಶ್ರೀಯುತ ಮೋಹನ್ ಶೆಟ್ಟಿ ವಿಧಿವಶ-Anandpur: ಮದುವೆಯಾಗುವಂತೆ ಪೀಡಿಸುತ್ತಿದ್ದಾಳೆಂದು ಪ್ರೇಯಸಿ ಕೊಲೆ ಮಾಡಿದ ಪ್ರಿಯಕರ-ಮುಡಾ ಸೈಟ್ ಕೋಲಾಹಲ: ಬಿಜೆಪಿ ಶಾಸಕರಿಂದ ಸದನದಲ್ಲಿ ಶ್ರೀರಾಮನ ಭಜನೆ-Shiroor: ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಟ್ರಕ್ ಗಂಗಾವಳಿ ನದಿಯಲ್ಲಿ ಪತ್ತೆ-Ladies PG: ಬೆಂಗಳೂರಿನಲ್ಲಿ ಲೇಡಿಸ್ ಪಿಜಿಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ!-ಕಾಂಗ್ರೆಸ್​ ಹಿರಿಯ ನಾಯಕ ಮರಿಗೌಡ ಪಾಟೀಲ್ ಹುಲ್ಕಲ್ ನಿಧನ-Shimoga: ರಸ್ತೆ ಅಪಘಾತ; ಶಿವಮೊಗ್ಗ ಧರ್ಮಪ್ರಾಂತ್ಯದ ಫಾ.ಆಂಟನಿ ಪೀಟರ್ ಇನ್ನಿಲ್ಲ-Mudra loan: ಮುದ್ರಾ ಸಾಲದ ಮಿತಿ 10 ಲಕ್ಷದಿಂದ 20 ಲಕ್ಷ ರೂಗೆ ಏರಿಕೆ; ಉದ್ದಿಮೆದಾರರಿಗೆ ಉತ್ತೇಜನ-Gold Rate: ಬಜೆಟ್‌ ಬೆನ್ನಲ್ಲೇ ಚಿನ್ನ, ಬೆಳ್ಳಿ ದರ ದಿಢೀರ್‌ ಇಳಿಕೆ-Sanket: ಮಹಿಳಾ ನಿರ್ದೇಶಕಿಯ ಅದ್ಭುತ ನಿರ್ದೇಶನ, ಅಂತರಾಷ್ಟ್ರೀಯ ಮಟ್ಟದ ಬಿಜಿಎಂ, ಕಲಾವಿದರ ಅದ್ಭುತ ಅಭಿನಯ ದಿಂದ ಮನಸೂರೆಗೊಂಡಿರುವ ಕನ್ನಡ ಚಲನಚಿತ್ರ ಸಾಂಕೇತ್ ಜುಲೈ 26ಕ್ಕೆ ಬಿಡುಗಡೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕರ್ನಾಟಕದ ಬೇಲೂರಿನಲ್ಲಿ ಸಿದ್ಧವಾಗಲಿದೆ ಸ್ಪುಟ್ನಿಕ್ ಲಸಿಕೆ

Twitter
Facebook
LinkedIn
WhatsApp
ಕರ್ನಾಟಕದ ಬೇಲೂರಿನಲ್ಲಿ ಸಿದ್ಧವಾಗಲಿದೆ ಸ್ಪುಟ್ನಿಕ್ ಲಸಿಕೆ
ಧಾರವಾಡ: ರಷ್ಯಾದ ಕೋವಿಡ್-19 ಲಸಿಕೆ ಸ್ಪುಟ್ನಿಕ್ ವಿ ತಯಾರಿಸಲು ಡಾ. ರೆಡ್ಡಿಸ್​ ಲ್ಯಾಬೊರೇಟರಿ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಔಷಧ ಸಂಸ್ಥೆ ಶಿಲ್ಪಾ ಮೆಡಿಕೇರ್ ತಿಳಿಸಿದೆ.

ಕಂಪೆನಿಯು ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಶಿಲ್ಪಾ ಬಯೋಲಾಜಿಕಲ್ಸ್ ಪ್ರೈವೇಟ್ ಲಿಮಿಟೆಡ್ (ಎಸ್‌ಬಿಪಿಎಲ್) ಮೂಲಕ ಡಾ. ರೆಡ್ಡಿಸ್​ ಪ್ರಯೋಗಾಲಯಗಳೊಂದಿಗೆ ಈ ಲಸಿಕೆ ಉತ್ಪಾದನೆ ನಡೆಯಲಿದೆ. ಆರ್​ & ಡಿ ಜತೆಗೆ ಕರ್ನಾಟಕದ ಧಾರವಾಡ ಪ್ಲಾಂಟ್​​ನಲ್ಲಿ ತಯಾರಿಕೆ ಇದೆ ಎಂದು ಶಿಲ್ಪಾ ಮೆಡಿಕೇರ್ ನಿಯಂತ್ರಕ ಫೈಲಿಂಗ್​ನಲ್ಲಿ ತಿಳಿಸಿದೆ. ಮೊದಲ 12 ತಿಂಗಳು ಡ್ಯುಯಲ್ ವೆಕ್ಟರ್ ಸ್ಪುಟ್ನಿಕ್ ವಿ, ಉದ್ದೇಶಿತ ಉತ್ಪಾದನೆಯು ವಾಣಿಜ್ಯ ಉತ್ಪಾದನೆಯ ಪ್ರಾರಂಭದ ದಿನಾಂಕದಿಂದ 50 ಮಿಲಿಯನ್ ಡೋಸ್ ಇರಲಿದೆ ಎಂದು ಕಂಪನಿ ಹೇಳಿದೆ.

ಡಾ.ರೆಡ್ಡಿಸ್​​ ಸ್ಪುಟ್ನಿಕ್ ತಂತ್ರಜ್ಞಾನವನ್ನು ಎಸ್‌ಬಿಪಿಎಲ್‌ಗೆ ವರ್ಗಾಯಿಸಲು ಅನುಕೂಲವಾಗಲಿದೆ. ಒಪ್ಪಂದದ ಪ್ರಕಾರ, ಎಸ್‌ಬಿಪಿಎಲ್ ಲಸಿಕೆ ತಯಾರಿಕೆಯ ಜವಾಬ್ದಾರಿಯನ್ನು ಹೊಂದಿದ್ದರೆ, ಡಾ.ರೆಡ್ಡಿಸ್​ ಅದರ ಮಾರುಕಟ್ಟೆ ಪ್ರದೇಶಗಳಲ್ಲಿ ಲಸಿಕೆ ವಿತರಣೆ ಮತ್ತು ಮಾರಾಟದ ಜವಾಬ್ದಾರಿ ವಹಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಲಸಿಕೆಯ ಸಿಂಗಲ್​ ಡೋಸ್ ಆವೃತ್ತಿಯಾದ ಸ್ಪುಟ್ನಿಕ್ ಲೈಟ್ ತಯಾರಿಸುವ ಆಯ್ಕೆಯನ್ನು ಸಹ ಕಂಪನಿಗಳು ಪತ್ತೆ ಹಚ್ಚುತ್ತಿದೆ ಎಂದು ಶಿಲ್ಪಾ ಮೆಡಿಕೇರ್ ಹೇಳಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು