Friday, December 2, 2022
ಖ್ಯಾತ ನಿರ್ಮಾಪಕ ಮುರಳೀಧರನ್ ಹೃದಯಾಘಾತದಿಂದ ನಿಧನ; ಕಂಬನಿ ಮಿಡಿದ ಕಮಲ್ ಹಾಸನ್-ನಟ ವಸಿಷ್ಠ ಸಿಂಹ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ಹರಿಪ್ರಿಯಾ-ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ: ಸುರ್ಜೇವಾಲಾ-6ನೇ ತರಗತಿಯ ಬಾಲಕ ಹೃದಯಾಘಾತದಿಂದ ಸಾವು-ಭಾರತವಿಂದು ಜಗತ್ತಿನ ನಂ.1 ಹಾಲು ಉತ್ಪಾದಕ: ಕೇಂದ್ರ ಸಚಿವ ಪರುಷೋತ್ತಮ ರೂಪಲಾ-ಪ್ರಜಾಪ್ರಭುತ್ವದ ಬಗ್ಗೆ ವಿಶ್ವ ನಮಗೆ ಪಾಠ ಮಾಡಬೇಕಿಲ್ಲ, ವಿಶ್ವಸಂಸ್ಥೆಗೆ ಭಾರತದ ದಿಟ್ಟ ಉತ್ತರ!-ಮಾಜಿ ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು-ಸ್ಮಿತ್ ಬ್ಯಾಟ್‍ನಿಂದ ಹೊಡೆತ ತಿಂದ ಅಂಪೈರ್-ಸೇಡು ತೀರಿಸಿಕೊಳ್ಳಲು ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ 15ರ ಬಾಲಕ-ಹೊಸ ಆಲೋಚನೆಯ ಅಭಿವೃದ್ಧಿ ಚಿಂತನೆಯ 'ಸಮೃದ್ಧ ಕೊಡಗು' ಪರಿಕಲ್ಪನೆಯ ಮೂಲಕ ಕೊಡಗಿನಲ್ಲಿ ಗಮನ ಸೆಳೆಯುತ್ತಿರುವ ಡಾ. ಮಂತರ್ ಗೌಡ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಕರ್ನಾಟಕದಲ್ಲಿ ರಶ್ಮಿಕಾ ಮಂದಣ್ಣ ಬ್ಯಾನ್: ವಾರಿಸು, ಪುಷ್ಪ 2 ಚಿತ್ರಗಳಿಗೆ ಸಂಕಷ್ಟ

Twitter
Facebook
LinkedIn
WhatsApp

ನ್ನಡದ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ(Rashmika Mandanna) ಇದೀಗ ಪ್ಯಾನ್ ಇಂಡಿಯಾ ನಾಯಕಿಯಾಗಿ ಮಿಂಚ್ತಿದ್ದಾರೆ. ಹೀಗಿರುವಾಗ ರಶ್ಮಿಕಾ ಮತ್ತು ರಿಷಬ್ ವಿವಾದದ ನಂತರ ಕರ್ನಾಟಕದಲ್ಲಿ ರಶ್ಮಿಕಾ ಬ್ಯಾನ್(Rashmika Ban) ಎಂಬ ಕುರಿತಾದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ.

ರಶ್ಮಿಕಾ ಮಂದಣ್ಣ ಲಕ್ಕಿ ನಟಿ ನ್ಯಾಷನಲ್ ಲೆವಲ್‌ನಲ್ಲಿ ಪುಷ್ಪ ಕ್ವೀನ್ ಸೌಂಡ್ ಮಾಡ್ತಿದ್ದಾರೆ. ರಿಷಬ್ ಶೆಟ್ಟಿ (Rishab Shetty) ನಿರ್ದೇಶನದ, ರಕ್ಷಿತ್‌ಗೆ ನಾಯಕಿಯಾಗಿ `ಕಿರಿಕ್ ಪಾರ್ಟಿ’ ಯಿಂದ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ಈ ಚಿತ್ರದ ಸಕ್ಸಸ್ ಬಳಿಕ ರಶ್ಮಿಕಾ ಪರಭಾಷೆಗೆ ಹಾರಿದರು. ಬಳಿಕ ಕನ್ನಡ ಕಡೆ ರಶ್ಮಿಕಾ ಮುಖ ಮಾಡಿಲ್ಲ. ಇತ್ತೀಚಿನ ಸಂದರ್ಶನವೊಂದರಲ್ಲಿ ರಶ್ಮಿಕಾ `ಕಿರಿಕ್ ಪಾರ್ಟಿ’ ಸಿನಿಮಾದ ಪ್ರೊಡಕ್ಷನ್ ಹೌಸ್ ಹೆಸರು ಹೇಳದೆ ಆಕ್ಷನ್ ಮಾಡಿ ತೋರಿಸಿದ್ದರು. ಅದಕ್ಕೆ ಪ್ರತಿಯುತ್ತರವಾಗಿ ರಿಷಬ್ ಕೂಡ ಟಾಂಗ್ ಕೊಟ್ಟಿದ್ದರು. ಆ ವೀಡಿಯೋ ಸಖತ್ ಟ್ರೋಲ್ ಕೂಡ ಆಗಿತ್ತು. ತನ್ನನ್ನು ಬೆಳೆಸಿದ ಸಂಸ್ಥೆಯನ್ನೇ ಒದ್ದು ಹೋದವಳು ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ಮುಂದೆ ರಶ್ಮಿಕಾ ಸಿನಿಮಾ ಕನ್ನಡಿಗರು ನೋಡಬಾರದು, ಕರ್ನಾಟಕದಲ್ಲಿ ರಶ್ಮಿಕಾ ಸಿನಿಮಾ ಬ್ಯಾನ್ ಮಾಡಬೇಕು ಎಂಬ ಬಾಯ್ಕಟ್ ರಶ್ಮಿಕಾ ಎನ್ನುವ ಪೋಸ್ಟರ್‌ಗಳು ಹರಿದಾಡುತ್ತಿವೆ.

ಕನ್ನಡ ನೆಲದಲ್ಲಿ ರಶ್ಮಿಕಾ ನಟನೆಯ ಸಿನಿಮಾ ಬ್ಯಾನ್ ಮಾಡಲಾಗುತ್ತೆ ಎನ್ನುವ ಸುದ್ದಿ ವೈರಲ್ ಆಗುತ್ತಿರುವ ಬೆನ್ನಲ್ಲೇ ರಶ್ಮಿಕಾ ನಟಿಸಿರುವ ಚಿತ್ರತಂಡಕ್ಕೆ ಭಯ ಶುರುವಾಗಿದೆ ಎನ್ನಲಾಗಿದೆ. ಅದರಲ್ಲೂ ಬಿಗ್ ಬಜೆಟ್ ಚಿತ್ರ `ಪುಷ್ಪ-2′ ಮತ್ತು ದಳಪತಿ ವಿಜಯ್ ನಟನೆಯ `ವರಿಸು’ ಸಿನಿಮಾತಂಡ ಸಂಕಷ್ಟಕ್ಕೆ ಸಿಲುಕಿವೆ ಎನ್ನುವ ಮಾತು ಟಾಲಿವುಡ್ ಮತ್ತು ಕಾಲಿವುಡ್‌ನಲ್ಲಿ ಸುದ್ದಿಯಾಗಿದೆ.

ರಶ್ಮಿಕಾ ವಿಚಾರಕ್ಕೆ ಸಿನಿಮಾ ಬ್ಯಾನ್ ಆದರೆ ದೊಡ್ಡ ಹೊಡೆತ ಬೀಳಲಿದೆ. ಅದರಲ್ಲೂ ತಮಿಳು ಮತ್ತು ತೆಲುಗು ಸಿನಿಮಾಗಳಿಗೆ ಕರ್ನಾಟಕ ದೊಡ್ಡ ಮಾರುಕಟ್ಟೆಯಾಗಿದೆ. ಹಾಗಾಗಿ ರಶ್ಮಿಕಾ ಕಾರಣಕ್ಕೆ ಸಿನಿಮಾಗೆ ತೊಂದರೆ ಆದರೆ ಭಾರಿ ನಷ್ಟ ಅನುಭವಿಸಬೇಕಾಗುತ್ತದೆ. ಇದರಿಂದ ನಿರ್ಮಾಪಕರಿಗೆ ದೊಡ್ಡ ತಲೆನೋವಾಗಿದೆ ಎನ್ನಲಾಗಿದೆ. ಬ್ಯಾನ್ ಮಾಡುವ ನಿರ್ಧಾರದಿಂದ ರಶ್ಮಿಕಾ ಸಿನಿ ಜೀವನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಇನ್ಮುಂದೆ ನಿರ್ಮಾಪಕರು ರಶ್ಮಿಕಾರನ್ನು ತಮ್ಮ ಸಿನಿಮಾಗೆ ಆಯ್ಕೆ ಮಾಡಲು ಹಿಂದೇಟು ಹಾಕುವ ಸಾಧ್ಯತೆ ಇದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ