ಮಂಗಳವಾರ, ಅಕ್ಟೋಬರ್ 3, 2023
Galaxy S23 FE: ಸ್ಯಾಮ್ಸಂಗ್ ಗ್ಯಾಲಕ್ಸಿ S23 ಎಫ್​ಇ ಸ್ಮಾರ್ಟ್​ಫೋನ್ ಅ.4 ರಂದು ಬಿಡುಗಡೆ!-ಜಿಂಬಾಬ್ವೆಯಲ್ಲಿ ವಿಮಾನ ಪತನ ; ಭಾರತದ ಕೋಟ್ಯದೀಶ್ವರ ಹಾಗೂ ಗಣಿ ಉದ್ಯಮಿ ಮತ್ತು ಅವರ ಪುತ್ರ ದುರ್ಮರಣ!-ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ; ಸಿಪಿ ಯೋಗೇಶ್ವರ್ ಬಾಂಬ್-ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾರವರ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ!-ನೀವು ಹೆದರಿಸದರೆ ಮಾತ್ರಕ್ಕೆ ನಾನು ಹೆದರಲ್ಲ ದೇವೇಗೌಡರಿಗೆ ಡಿಕೆಶಿ ಟಾಂಗ್!-ಜಿಪಿಎಸ್ ಮ್ಯಾಪ್ ನೋಡಿ ಕಾರನ್ನು ಚಲಿಸುವುತ್ತಿರುವಾಗ ನದಿಗೆ ಬಿದ್ದು ಇಬ್ಬರು ವೈದ್ಯರು ಸಾವು ; ಮೂವರು ಪಾರು!-ಹೃದಯ ವಿದ್ರಾವಕ ಘಟನೆ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೇರಿ 6 ಮಂದಿ ಹತ್ಯೆ-ಬೆಂಗಳೂರಿನ ಕಂಬಳಕ್ಕೆ ಹೇಗಿದೆ ತಯಾರಿ; ದಕ್ಷಿಣ ಕನ್ನಡ ಭಾಗದ 150 ಫುಡ್ ಸ್ಟಾಲ್ ಏರ್ಪಾಡು..!-ಪಿಯುಸಿಯಲ್ಲಿ ಅಂಕ ಕಡಿಮೆ ಬಂತೆಂದು ಮನನೊಂದು ಅಪಾರ್ಟ್‌ಮೆಂಟ್‌ನಿಂದ ಜಿಗಿದ ಬಾಲಕಿ ; ರಕ್ಷಣೆಗೆ ಧಾವಿಸಿದ ಯುವಕ - ಇಲ್ಲಿದೆ ವಿಡಿಯೋ-ಬರ್ತ್‌ಡೇ ಪಾರ್ಟಿಯಲ್ಲಿ ಡೆಕೋರೇಷನ್‌ಗೆ ಹಾಕಿದ್ದ ಹೀಲಿಯಂ ಬಲೂನ್‌ ಬ್ಲಾಸ್ಟ್‌ ; ಐವರು ಗಂಭೀರ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

2023-24ನೇ ಸಾಲಿನ ಕಂಬಳ ಕೂಟದ ವೇಳಾಪಟ್ಟಿ ಪ್ರಕಟ

Twitter
Facebook
LinkedIn
WhatsApp
ಕಂಬಳ

ಕಂಬಳ: ಕಂಬಳ ಪ್ರಿಯರು ಕಾತುರದಿಂದ ಕಾಯುತ್ತಿದ್ದ 2023-24ನೇ ಸಾಲಿನ ಕಂಬಳ ವೇಳಾಪಟ್ಟಿ ಈಗಾಗಲೇ ಪ್ರಕಟಣೆಯಾಗಿದೆ. ನ.11ರಂದು ಗುರುಪುರ ಕಂಬಳದೊಂದಿಗೆ ಜೋಡುಕರೆ ಕಂಬಳ ಋತು ಆರಂಭಗೊಳ್ಳಲಿದೆ. ವಿಶಿಷ್ಟವಾಗಿ ಬೆಂಗಳೂರಿನಲ್ಲೂ ಈ ಬಾರಿ ಕಂಬಳದ ಕಹಳೆ ಆರಂಭಗೊಳ್ಳಲಿದೆ. 25 ಕಡೆಗಳಲ್ಲಿ ಈ ಬಾರಿ ಕಂಬಳ ನಡೆಯಲಿದೆ. 

ಕಂಬಳ ಪ್ರಿಯರು ಕಾತುರದಿಂದ ಕಾಯುತ್ತಿದ್ದ 2023-24ನೇ ಸಾಲಿನ ಕಂಬಳ ವೇಳಾಪಟ್ಟಿ ಈಗಾಗಲೇ ಪ್ರಕಟಣೆಯಾಗಿದೆ. ನ.11ರಂದು ಗುರುಪುರ ಕಂಬಳದೊಂದಿಗೆ ಜೋಡುಕರೆ ಕಂಬಳ ಋತು ಆರಂಭಗೊಳ್ಳಲಿದೆ. ವಿಶಿಷ್ಟವಾಗಿ ಬೆಂಗಳೂರಿನಲ್ಲೂ ಈ ಬಾರಿ ಕಂಬಳದ ಕಹಳೆ ಆರಂಭಗೊಳ್ಳಲಿದೆ. 22 ಕಡೆಗಳಲ್ಲಿ ಈ ಬಾರಿ ಕಂಬಳ ನಡೆಯಲಿದೆ.
2023-24ನೇ ಸಾಲಿನ ಕಂಬಳ ಕೂಟದ ವೇಳಾಪಟ್ಟಿ ಪ್ರಕಟ

ಉಳ್ಳಾಲ: ರವಿಕಟಪಾಡಿ ಮಾದರಿಯಲ್ಲೇ ಯುವಕರ ತಂಡದಿಂದ ಮಗುವಿನ ಚಿಕಿತ್ಸೆಗೆ ನೆರವು

ಉಳ್ಳಾಲ, ಸೆ 18 : ಉಡುಪಿಯ ರವಿ ಕಟಪಾಡಿ ಮಾದರಿಯಲ್ಲಿ ಉಳ್ಳಾಲ ಧರ್ಮನಗರ ಜ್ಯೂನಿಯರ್‌ ಬಾಯ್ಸ್‌ ನ ಯುವಕರ ತಂಡ ಎರಡರ ಮಗುವಿನ ಚಿಕಿತ್ಸೆಗೆ ವಿಭಿನ್ನ ರೀತಿಯ ವೇಷತೊಟ್ಟು ಸಂಗ್ರಹಿಸಿದ ನಗದನ್ನು ಹೆತ್ತವರಿಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಉಳ್ಳಾಲ ತೆಂಗಿನಹಿತ್ಲು ರಾಹುಗುಳಿಗ ಬನದ ಅರ್ಚಕ ಭಾಸ್ಕರ್‌ ತೆಂಗಿನಹಿತ್ಲು ಇವರು ಬಂಟ್ವಾಳ ತಾಲೂಕಿನ ಮಂಕುಡೆಕೋಡಿ ನಿವಾಸಿ ಎರಡರ ಹರೆಯದ ನ್ಯೂರೋಬ್ಲಾಸ್ಟೋಮಾ (ಕ್ಯಾನ್ಸರ್) ಕಾಯಿಲೆಯಿಂದ ಬಳಲುತ್ತಿರುವ ಹೇಮಂತ್‌ ಅನ್ನುವ ಮಗುವಿನ ಹೆತ್ತವರಿಗೆ ಹಸ್ತಾಂತರಿಸಿದ್ದಾರೆ. ಜನಾರ್ಧನ ನಾಯ್ಕ್ ಹಾಗೂ ಲೀಲಾವತಿ ದಂಪತಿ ಮಗುವಿಗೆ ಅಸೌಖ್ಯವಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ನ್ಯೂರೋಬ್ಲಾಸ್ಟೋಮಾ ಇರುವುದು ಬೆಳಕಿಗೆ ಬಂದಿದೆ. ವೈದ್ಯರು ತಿಳಿಸಿದಂತೆ ಚಿಕಿತ್ಸೆಗೆ ರೂ.೮ ಲಕ್ಷ ಮೌಲ್ಯವನ್ನು ಕೂಲಿಕೆಲಸ ನಿರ್ವಹಿಸುವ ಜನಾರ್ದನ ನಿಭಾಯಿಸಲು ಅಸಾಧ್ಯವಾಗಿದೆ.

ಲೀಲಾವತಿ ಅವರು ಮನೆಯಲ್ಲಿ ಇದ್ದುಕೊಂಡು ಮಗುವಿನ ಆರೈಕೆಯಲ್ಲಿ ತೊಡಗಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲದ ಧರ್ಮನಗರ ಜ್ಯೂನಿಯರ್‌ ಬಾಯ್ಸ್‌ ತಂಡ ಧರ್ಮನಗರ ಜೂನಿಯರ್ ಬಾಯ್ಸ್ ಉಳ್ಳಾಲ ಇವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸಾಯಿ ಪರಿವಾರ್ ಟ್ರಸ್ಟ್ ತೊಕ್ಕೊಟ್ಟು ನೇತೃತ್ವದಲ್ಲಿ ಧನಸಂಗ್ರಹದ ಸಂಕಲ್ಪ ಮಾಡಿಕೊಂಡು ತೊಕ್ಕೊಟ್ಟು ಹಾಗೂ ಕುಂಪಲದಲ್ಲಿ ಜರಗಿದ ಮೊಸರುಕುಡಿಕೆ ಉತ್ಸವದಲ್ಲಿ ತಂಡದ ಸದಾಶಿವ ತೆಂಗಿನಹಿತ್ಲು,‌ ರೋಶನ್ ಸುಂದರಿಭಾಗ್, ನಿತಿನ್ ಸುಂದರಿಭಾಗ್, ಜೀವನ್‌ ಧರ್ಮನಗರ ಇವರುಗಳು ವಿಶಿಷ್ಠ ವೇಷ ಧರಿಸಿ ನೆರೆದವರ ಗಮನ ಸೆಳೆದು ರೂ. 1,26,600 ಧನ ಸಂಗ್ರಹಿಸಿದ್ದಾರೆ.

ಸಂಗ್ರಹಿಸಿದಷ್ಟೂ ಹಣವನ್ನು ಹೇಮಂತ್‌ ಪೋಷಕರಿಗೆ ಇದೀಗ ಹಸ್ತಾಂತರಿಸಿದ್ದಾರೆ.

ಈ ಸಂದರ್ಭ ಧರ್ಮನಗರ ಜೂನಿರ್ ಬಾಯ್ಸ್ ಉಳ್ಳಾಲ ಇದರ ಅಧ್ಯಕ್ಷ ವಿಧಿತ್, ಉಪಾಧ್ಯಕ್ಷ ಸೋನಿತ್, ಕಾರ್ಯದರ್ಶಿ ಹರ್ಷದೀಪ್, ಸದಸ್ಯ ಶೇಖರ್‌ ತೆಂಗಿನಹಿತ್ಲು, ರಮೇಶ್ ತೆಂಗಿನಹಿತ್ಲು ಉಪಸ್ಥಿತರಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ