ಶುಕ್ರವಾರ, ಜೂನ್ 9, 2023
ಅಜ್ಜಿಯನ್ನು ಕೊಲೆ ಮಾಡಿ ಶವ ಸುಟ್ಟ ಪ್ರಕರಣ: ಮೊಮ್ಮಗನ ಬಂಧನ-ಸೈಕ್ಲೋನ್‌ ಎಫೆಕ್ಟ್‌; ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ-ಬಾಬಾಬುಡನಗಿರಿಯಲ್ಲಿ ಶೌಚಾಲಯ ಸಮಸ್ಯೆ; ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ-ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು-ಕಾರು ಪಲ್ಟಿಯಾಗಿ ಬಿಜೆಪಿ ಮುಖಂಡ ಸಾವು; ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಗಾಯ-ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ-ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ-ಆಸೀಸ್‌ ವೇಗದ ದಾಳಿಗೆ ಕಂಗಾಲಾದ ಭಾರತಕ್ಕೆ ಇನ್ನಿಂಗ್ಸ್ ಹಿನ್ನಡೆ ಭೀತಿ; ಅಜಿಂಕ್ಯ ರಹಾನೆ ಆಸರೆ!-ಭಯಾನಕ ಮರ್ಡರ್; ಸಂಗಾತಿಯ ಶರೀರವನ್ನು ಪೀಸ್ ಪೀಸ್ ಮಾಡಿ ಕುಕ್ಕರ್ ನಲ್ಲಿ ಬೇಯಿಸಿದ ಕ್ರೂರಿ ಪ್ರೇಮಿ..!-ಕಾಂಗ್ರೆಸ್ ಸರ್ಕಾರಕ್ಕೆ 18 ಸಲಹೆಗಳನ್ನ ಕೊಟ್ಟ ಶಿಕ್ಷಣ ತಜ್ಞ ಪ್ರೊ ಎಂಆರ್ ​ದೊರೆಸ್ವಾಮಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಓಮಿಕ್ರಾನ್ ಸೋಂಕು ಪತ್ತೆಯಾಗಿದ್ದ ಬೆಂಗಳೂರು ವೈದ್ಯನಿಗೆ ಮತ್ತೆ ಕೋವಿಡ್ ಸೋಂಕು..!

Twitter
Facebook
LinkedIn
WhatsApp
ಓಮಿಕ್ರಾನ್ ಸೋಂಕು ಪತ್ತೆಯಾಗಿದ್ದ ಬೆಂಗಳೂರು ವೈದ್ಯನಿಗೆ ಮತ್ತೆ ಕೋವಿಡ್ ಸೋಂಕು..!

ಬೆಂಗಳೂರು: ಓಮಿಕ್ರಾನ್ ಸೋಂಕು ಪೀಡಿತರಾಗಿದ್ದ ಬೆಂಗಳೂರು ವೈದ್ಯರಲ್ಲಿ ಮೊದಲ ಪರೀಕ್ಷೆಯ 15 ದಿನಗಳು ಕಳೆದರೂ ಕೋವಿಡ್-19 ಸೋಂಕು ಸಕ್ರಿಯವಾಗಿರುವುದು ಕಂಡುಬರುತ್ತಿದೆ. ಅಚ್ಚರಿಯೆಂಬಂತೆ ವೈದ್ಯರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಓರ್ವ ವ್ಯಕ್ತಿ ಹಾಗೂ ದ್ವಿತೀಯ ಸಂಪರ್ಕದ ಇಬ್ಬರಲ್ಲಿ ಸೋಂಕು ಪತ್ತೆ ಪರೀಕ್ಷೆಯಲ್ಲಿ ಕೋವಿಡ್-19 ನೆಗೆಟೀವ್ ತೋರಿಸುತ್ತಿದೆ.

ಒಮಿಕ್ರಾನ್ ಸೋಂಕು ಪತ್ತೆಯಾಗಿ 15 ದಿನಗಳು ಕಳೆದಿದ್ದ ಹಿನ್ನೆಲೆಯಲ್ಲಿ 2 ನೇ ಬಾರಿಯ ಪರೀಕ್ಷೆಯಲ್ಲಿ ನೆಗೆಟೀವ್ ವರದಿಯನ್ನು ಅರಿವಳಿಕೆ ತಜ್ಞರಾಗಿರುವ ವೈದ್ಯರು ನಿರೀಕ್ಷಿಸುತ್ತಿದ್ದರು. ಆದರೆ 2ನೇ ಬಾರಿಯೂ ಕೋವಿಡ್-19 ಸೋಂಕು ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಬೋರಿಂಗ್ ಆಸ್ಪತ್ರೆಯಲ್ಲೇ ಐಸೊಲೇಷನ್ ಹಾಗೂ ಚಿಕಿತ್ಸೆಯನ್ನು ಮುಂದುವರೆಸಬೇಕಾಗಿದೆ.

ವೈದ್ಯರಿಂದ ಸಂಗ್ರಹಿಸಲಾದ ಮಾದರಿಗಳನ್ನು ಮತ್ತೊಮ್ಮೆ ಪರೀಕ್ಷೆಗಾಗಿ 24 ಗಂಟೆಗಳ ನಂತರ ಕಳಿಸಲಾಗುತ್ತದೆ. ಸೋಮವಾರ ನೆಗೆಟೀವ್ ವರದಿ ಪಡೆದಿದ್ದವರನ್ನೂ ಮತ್ತೊಮ್ಮೆ ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಹಿರಿಯ ವೈದ್ಯರೊಬ್ಬರು ಮಾಹಿತಿ ನೀಡಿದ್ದಾರೆ.

ವೈದ್ಯರು ಹಾಗೂ ಅವರ ಸಂಪರ್ಕಿತರು ನೆಗೆಟೀವ್ ವರದಿ ದೃಢಪಡುವವರೆಗೆ ಐಸೊಲೇಷನ್ ಹಾಗೂ ಚಿಕಿತ್ಸೆಯನ್ನು ಮುಂದುವರೆಸಬೇಕಾಗುತ್ತದೆ. ಓಮಿಕ್ರಾನ್ ಪೀಡಿತ ವೈದ್ಯರು ಹಾಗೂ ಅವರ ಸಹೋದ್ಯೋಗಿಗಳಿಗೆ ರಕ್ತದೊತ್ತಡ ಹಾಗೂ ಆಕ್ಸಿಜನ್ ಮಟ್ಟ ಹಾಗೂ ಇತರೆ ಪ್ರಮುಖ ಆರೋಗ್ಯ ಅಂಶಗಳು ಸಹಜವಾಗಿದೆ.

ವೈದ್ಯರಿಗೆ ಮಧುಮೇಹ ಇದ್ದು, ಇನ್ನೂ ಪಾಸಿಟೀವ್ ಬರುತ್ತಿರುವುದಕ್ಕೆ ಇದೂ ಒಂದು ಕಾರಣ ಇರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಡೆಲ್ಟಾ ಹಾಗೂ ಇನ್ನಿತರ ರೂಪಾಂತರಿ ಸೋಂಕು ಪ್ರಕರಣಗಳಲ್ಲಿಯೂ ಈ ರೀತಿ ಆಗಿರುವ ಉದಾಹರಣೆಗಳಿವೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು