ಮಂಗಳವಾರ, ಜೂನ್ 18, 2024
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ; ಸಿಎಂ ಸಿದ್ದರಾಮಯ್ಯ ಮತ್ತು ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ಏನು..?-ಕಿಸಾನ್ ಸಮ್ಮಾನ್ 17 ನೇ ಕಂತಿನ ಹಣ ನಾಳೆ ಬಿಡುಗಡೆ; ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ತಿಳಿಯುವುದು ಹೇಗೆ.?-ಶಿವಮೊಗ್ಗ ಬಿಜೆಪಿ ಪ್ರತಿಭಟನೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್ ಕುಸಿದುಬಿದ್ದು ನಿಧನ..!-Rain Alert: ಜೂನ್ 21ರಿಂದ ರಾಜ್ಯದಲ್ಲಿ ಮಳೆ ಮುನ್ಸೂಚನೆ..!-ಕುವೈತ್ ಅಗ್ನಿ ದುರಂತ; 45 ಭಾರತೀಯರ ಪಾರ್ಥಿವ ಶರೀರ ಇಂದು ಬೆಳಗ್ಗೆ ಕೊಚ್ಚಿಗೆ ಆಗಮನ..!-ಜುಲೈ 22 ರಿಂದ ಆಗಸ್ಟ್ 9ರವರೆಗೆ ಮುಂಗಾರು ಸಂಸತ್ ಅಧಿವೇಶನ..!-ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮ ಆರೋಪ; ಕೇಂದ್ರ, ಎನ್‌ಟಿಎಗೆ ಸುಪ್ರೀಂ ನೋಟಿಸ್..!-ಪೋಕ್ಸೊ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ; ಜಾಮೀನು ಸಿಗದಿದ್ದರೆ ಯಡಿಯೂರಪ್ಪ ಬಂಧನ.!-ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!-ಪೋಕ್ಸೊ ಕೇಸ್​; ವಾರಂಟ್ ಜಾರಿಯಾದ್ರೆ ಮಾಜಿ ಸಿಎಂ ಯಡಿಯೂರಪ್ಪ ಬಂಧನ ಫಿಕ್ಸ್..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಏ.1ರಿಂದ ಸಿಗರೇಟ್, ತಂಬಾಕು ಉತ್ಪನ್ನಗಳ ಬೆಲೆ ಹೆಚ್ಚಳ

Twitter
Facebook
LinkedIn
WhatsApp
IMG 20230327 WA0017

ನವದೆಹಲಿ (ಮಾ.28):ಸಿಗರೇಟ್, ಪಾನ್ ಮಸಾಲಾ ಸೇರಿದಂತೆ ತಂಬಾಕು ಉತ್ಪನ್ನಗಳನ್ನು ಸೇವನೆ ಮಾಡೋರಿಗೆ ಏಪ್ರಿಲ್ 1ರಿಂದ ಜೇಬಿನ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಸಿಗರೇಟ್ ಹಾಗೂ ಪಾನ್ ಮಸಾಲಾ ಸೇರಿದಂತೆ ತಂಬಾಕು ಉತ್ಪನ್ನಗಳ ಮೇಲಿನ ಜಿಎಸ್ ಟಿ ಪರಿಹಾರ ಸೆಸ್ ಮಿತಿ ಅಥವಾ ಗರಿಷ್ಠ ದರವನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ. ಈ ದರವು ಏ.1ರಿಂದ ಜಾರಿಗೆ ಬರಲಿದೆ. 2023ರ ಹಣಕಾಸು ವಿಧೇಯಕದ ತಿದ್ದುಪಡಿಯ ಭಾಗವಾಗಿ ಈ  ದರ ನಿಗದಿಪಡಿಸಲಾಗಿದೆ. ಹಣಕಾಸು ಮಸೂದೆ -2023ಕ್ಕೆ ಮಾ.24ರಂದು ಲೋಕಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಜಿ ಎಸ್ ಟಿ ಪರಿಹಾರ ಸೆಸ್ ಅನ್ನು ತಂಬಾಕು ಉತ್ಪನ್ನಗಳು ಹಾಗೂ ಇತರ ಉತ್ಪನ್ನಗಳ ರಿಟೇಲ್ ಮಾರಾಟ ದರದೊಂದಿಗೆ ಸರ್ಕಾರ ಲಿಂಕ್ ಮಾಡಿದೆ. ಹೊಸ ನಿಯಮಗಳ ಅನ್ವಯ ಪಾನ್ ಮಸಾಲಾ ಗರಿಷ್ಠ ಜಿಎಸ್ ಟಿ ಪರಿಹಾರ ಸೆಸ್ ದರವು ಪ್ರತಿ ಉತ್ಪನ್ನದ ಮೇಲಿನ ಚಿಲ್ಲರೆ ಮಾರಾಟ ಬೆಲೆಯ ಶೇ.51 ಆಗಿರಲಿದೆ. ಇದು ಉತ್ಪನ್ನದ ಮೇಲಿನ ಪ್ರಸಕ್ತ ಶೇ.135 ಸುಂಕವನ್ನು ಬದಲಾಯಿಸಲಿದೆ. ತಂಬಾಕು ದರವನ್ನು ಪ್ರತಿ 1000 ಕಡ್ಡಿಗಳಿಗೆ 4170ರೂ. ಇದರ ಜೊತೆಗೆ ಅದರ ಮೌಲ್ಯಕ್ಕೆ ತಕ್ಕಂತೆ ಶೇ.290 ವಿಧಿಸಲಾಗುತ್ತಿತ್ತು ಅಥವಾ ಪ್ರತಿ ಯುನಿಟ್ ರಿಟೇಲ್ ಮಾರಾಟದ ಬೆಲೆ ಮೇಲೆ ಶೇ.100ರಷ್ಟು ವಿಧಿಸಲಾಗುತ್ತದೆ.

ಪಾನ್ ಮಸಾಲಾ, ಸಿಗರೇಟ್ ಹಾಗೂ ಇತರ ತಂಬಾಕು ಉತ್ಪನ್ನಗಳ ಮೇಲಿನ ಸೆಸ್ ಮಿತಿಯನ್ನು ಹಣಕಾಸು ಮಸೂದೆಗೆ ಮಾಡಲಾಗಿರುವ 75 ತಿದ್ದುಪಡಿಗಳಲ್ಲಿ ಒಂದರ ಆಧಾರದಲ್ಲಿ ಮಾಡಲಾಗಿದೆ. ಈ ನಿರ್ಧಾರವು ಭಾರತದ ತಂಬಾಕು ಕೈಗಾರಿಕೆ ಹಾಗೂ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. ಈಗ ಬದಲಾವಣೆ ಮಾಡಲಾಗಿರುವ ಸೆಸ್ ಮಿತಿಯು ಜಿಎಸ್ ಟಿ ಕೌನ್ಸಿಲ್ ಅಧಿಸೂಚನೆ ಹೊರಡಿಸಿದ ಬಳಿಕವಷ್ಟೇ ಅನ್ವಯವಾಗಲಿದೆ.

ಪ್ಲಾಟಿನಂ, ಚಿನ್ನದ ಆಭರಣಗಳು ದುಬಾರಿ
2023ನೇ ಸಾಲಿನ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೆಲವು ವಸ್ತುಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿದ್ದರು. ಇದರಲ್ಲಿ ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನಂ ಕೂಡ ಸೇರಿದೆ. ಹೀಗಾಗಿ ಏ.1ರಿಂದ ಚಿನ್ನ, ಪ್ಲಾಟಿನಂ ಹಾಗೂ ಬೆಳ್ಳಿಯ ಆಭರಣಗಳು ದುಬಾರಿಯಾಗಲಿವೆ. 

ದುಬಾರಿಯಾಗಲಿವೆ ಈ ವಸ್ತುಗಳು
ವಿದೇಶದಿಂದ ಆಮದು ಮಾಡಿಕೊಳ್ಳುವ ಎಲೆಕ್ಟ್ರಿಕ್‌ ಚಿಮ್ನಿಗಳ ಮೇಲಿನ ಮೂಲ ಅಬಕಾರಿ ಸುಂಕವನ್ನು ಈ ಬಾರಿಯ ಬಜೆಟ್ ನಲ್ಲಿ ಶೇ.7.5ರಿಂದ ಶೇ.15ಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ ಏಪ್ರಿಲ್ 1ರಿಂದ ಎಲೆಕ್ಟ್ರಾನಿಕ್ ಚಿಮಣಿ, ಆಮದು ಮಾಡಿಕೊಳ್ಳುವ ಕಾರು ಹಾಗೂ ಇತರ ವಸ್ತುಗಳು, ಚಿನ್ನ, ಪ್ಲಾಟಿನಂ ಹಾಗೂ ಬೆಳ್ಳಿ ಆಭರಣಗಳು ದುಬಾರಿಯಾಗಲಿವೆ. ಆಭರಣಗಳ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಮದುವೆ ಹಾಗೂ ಹಬ್ಬದ ವೆಚ್ಚ ಹೆಚ್ಚಲಿದೆ.

ಯಾವ ವಸ್ತುಗಳ ಬೆಲೆ ತಗ್ಗಲಿದೆ?
ಮಕ್ಕಳ ಆಟಿಕೆಗಳು, ಸೈಕಲ್, ಟಿವಿ, ಮೊಬೈಲ್ , ಎಲೆಕ್ಟ್ರಾನಿಕ್ ವಾಹನಗಳು, ಎಲ್ಇಡಿ ಟಿವಿ ದರಗಳು ಏ.1ರಿಂದ ತಗ್ಗಲಿವೆ. ಸೀಗಡಿ ಆಹಾರ, ಕೃತಕವಾಗಿ ಬೆಳೆಯುವ ವಜ್ರದ ಬೀಜ, ಮೊಬೈಲ್‌ ಕ್ಯಾಮೆರಾ ಲೆನ್ಸ್‌, ಟೀವಿ ಪ್ಯಾನೆಲ್‌, ಈಥೈಲ್‌ ಆಲ್ಕೋಹಾಲ್‌, ಕಚ್ಚಾ ಗ್ಲಿಸರಿನ್‌ ಬೆಲೆ ಕೂಡ ತಗ್ಗಲಿದೆ. ದೇಶೀಯವಾಗಿ ಮೊಬೈಲ್‌ ಮತ್ತು ಟಿವಿ ಸೆಟ್‌ಗಳ ಉತ್ಪಾದನೆ ಹೆಚ್ಚಿಸುವ ಸಲುವಾಗಿ ಈ ಎರಡು ವಸ್ತುಗಳ ತಯಾರಿಕೆಗೆ ಬಳಸುವ ಹಲವು ಕಚ್ಚಾವಸ್ತುಗಳ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರ ಕಡಿತ ಮಾಡಿದೆ. ಮೊಬೈಲ್‌ ಕ್ಯಾಮೆರಾಕ್ಕೆ ಬಳಸುವ ಲೆನ್ಸ್‌, ಟಿವಿ ಪ್ಯಾನೆಲ್‌ಗಳ ಮೇಲಿನ ಸುಂಕವನ್ನು ಕಡಿತ ಮಾಡಲಾಗಿದೆ. ಎಲ್‌ಇಡಿ ಟಿವಿಗಳ ಒಟ್ಟು ಉತ್ಪಾದನಾ ವೆಚ್ಚದಲ್ಲಿ ಶೇ.60-70ರಷ್ಟು ವೆಚ್ಚ ಕೇವಲ ಓಪನ್‌ ಸೆಲ್‌ ಪ್ಯಾನೆಲ್‌ಗಳದ್ದೇ ಆಗಿರುತ್ತದೆ. ಇದೀಗ ಅದರ ಬೆಲೆ ಶೇ.5ರಷ್ಟುಇಳಿಕೆ ಮಾಡಿರುವ ಕಾರಣ ಟಿವಿಗಳ ಬೆಲೆಯಲ್ಲಿ 3000 ರೂ.ವರೆಗೂ ಇಳಿಕೆಯಾಗಲಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ