ಸೋಮವಾರ, ಅಕ್ಟೋಬರ್ 2, 2023
Galaxy S23 FE: ಸ್ಯಾಮ್ಸಂಗ್ ಗ್ಯಾಲಕ್ಸಿ S23 ಎಫ್​ಇ ಸ್ಮಾರ್ಟ್​ಫೋನ್ ಅ.4 ರಂದು ಬಿಡುಗಡೆ!-ಜಿಂಬಾಬ್ವೆಯಲ್ಲಿ ವಿಮಾನ ಪತನ ; ಭಾರತದ ಕೋಟ್ಯದೀಶ್ವರ ಹಾಗೂ ಗಣಿ ಉದ್ಯಮಿ ಮತ್ತು ಅವರ ಪುತ್ರ ದುರ್ಮರಣ!-ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ; ಸಿಪಿ ಯೋಗೇಶ್ವರ್ ಬಾಂಬ್-ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾರವರ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ!-ನೀವು ಹೆದರಿಸದರೆ ಮಾತ್ರಕ್ಕೆ ನಾನು ಹೆದರಲ್ಲ ದೇವೇಗೌಡರಿಗೆ ಡಿಕೆಶಿ ಟಾಂಗ್!-ಜಿಪಿಎಸ್ ಮ್ಯಾಪ್ ನೋಡಿ ಕಾರನ್ನು ಚಲಿಸುವುತ್ತಿರುವಾಗ ನದಿಗೆ ಬಿದ್ದು ಇಬ್ಬರು ವೈದ್ಯರು ಸಾವು ; ಮೂವರು ಪಾರು!-ಹೃದಯ ವಿದ್ರಾವಕ ಘಟನೆ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೇರಿ 6 ಮಂದಿ ಹತ್ಯೆ-ಬೆಂಗಳೂರಿನ ಕಂಬಳಕ್ಕೆ ಹೇಗಿದೆ ತಯಾರಿ; ದಕ್ಷಿಣ ಕನ್ನಡ ಭಾಗದ 150 ಫುಡ್ ಸ್ಟಾಲ್ ಏರ್ಪಾಡು..!-ಪಿಯುಸಿಯಲ್ಲಿ ಅಂಕ ಕಡಿಮೆ ಬಂತೆಂದು ಮನನೊಂದು ಅಪಾರ್ಟ್‌ಮೆಂಟ್‌ನಿಂದ ಜಿಗಿದ ಬಾಲಕಿ ; ರಕ್ಷಣೆಗೆ ಧಾವಿಸಿದ ಯುವಕ - ಇಲ್ಲಿದೆ ವಿಡಿಯೋ-ಬರ್ತ್‌ಡೇ ಪಾರ್ಟಿಯಲ್ಲಿ ಡೆಕೋರೇಷನ್‌ಗೆ ಹಾಕಿದ್ದ ಹೀಲಿಯಂ ಬಲೂನ್‌ ಬ್ಲಾಸ್ಟ್‌ ; ಐವರು ಗಂಭೀರ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಏರ್​​ಟೆಲ್​​ನಿಂದ ಎರಡು ಪ್ರಿಪೇಯ್ಡ್ ಪ್ಲಾನ್; ಸಿಗಲಿದೆ ಭರ್ಜರಿ ಡೇಟಾ, ಇಲ್ಲಿದೆ ಮತ್ತಷ್ಟು ವಿವರ

Twitter
Facebook
LinkedIn
WhatsApp
download

ಭಾರ್ತಿ ಏರ್​ಟೆಲ್ (Bharti Airtel) ಎರಡು ಹೊಸ ಪ್ರಿಪೇಯ್ಡ್ ಪ್ಲಾನ್ (prepaid plans) ಘೋಷಿಸಿದ್ದು, ಗ್ರಾಹಕರಿಗೆ ಹೆಚ್ಚಿನ ಡೇಟಾ, ಅನಿಯಮಿತ ಕರೆ ಹಾಗೂ ಇತರ ಹಲವು ಸೌಲಭ್ಯಗಳು ದೊರೆಯಲಿವೆ. ವಿಶೇಷವೆಂದರೆ ಈ ಬಾರಿ ಪ್ರಿಪೇಯ್ಡ್ ಪ್ಲಾನ್ ಮತ್ತು ಪೋಸ್ಟ್ ಪೇಯ್ಡ್ ಪ್ಲಾನ್​ಗಳ ನಡುವಣ ದರ ವ್ಯತ್ಯಾಸವನ್ನು ಕಡಿಮೆ ಮಾಡಲಾಗಿದೆ. ಹೊಸ ಪ್ಲಾನ್​ ಅಡಿಯಲ್ಲಿ ತಿಂಗಳಿಗೆ 60 ಜಿಬಿವರೆಗೆ ಡೇಟಾ ದೊರೆಯಲಿದೆ. ಕೆಲವು ದಿನಗಳ ಹಿಂದಷ್ಟೇ ಕರ್ನಾಟಕ ಸೇರಿದಂತೆ 8 ಕಡೆಗಳಲ್ಲಿ ತಿಂಗಳ ಕನಿಷ್ಠ ರಿಚಾರ್ಜ್ ದರದಲ್ಲಿ ಶೇ 57ರಷ್ಟು ಹೆಚ್ಚಳ ಮಾಡಿದ್ದ ಏರ್​ಟೆಲ್, 155 ರೂ. ನಿಗದಿ ಮಾಡಿತ್ತು. ಇದೀಗ ಹೊಸದಾಗಿ ಘೋಷಿಸಿರುವ ಎರಡು ಪ್ರಿಪೇಯ್ಡ್ ಯೋಜನೆಗಳ ವಿವರ ಇಲ್ಲಿ ನೀಡಲಾಗಿದೆ.

ಏರ್​​ಟೆಲ್ 489 ರೂ. ಪ್ಲಾನ್

489 ರೂ. ಪ್ರಿಪೇಯ್ಡ್ ಪ್ಲಾನ್ ಅನ್ನು ಏರ್​ಟೆಲ್ ಪರಿಚಯಿಸಿದೆ. ಇದರಲ್ಲಿ ಅನಿಯಮಿತ ಸ್ಥಳೀಯ, ಎಸ್​ಟಿಡಿ ಹಾಗೂ ರೋಮಿಂಗ್​ ಕರೆ ಸೌಲಭ್ಯ ನೀಡಲಾಗಿದೆ. ಜತೆಗೆ 30 ದಿನಗಳ ವ್ಯಾಲಿಡಿಟಿಯೊಂದಿಗೆ 300 ಉಚಿತ ಎಸ್​ಎಂಎಸ್​​ ಮಾಡಬಹುದಾಗಿದೆ. 50 ಜಿಬಿ ಡೇಟಾ ದೊರೆಯಲಿದೆ. ಹೆಚ್ಚುವರಿಯಾಗಿ ಉಚಿತ ವಿಂಕ್ ಮ್ಯೂಸಿಕ್ ಸಬ್​ಸ್ಕ್ರಿಪ್ಷನ್, ಉಚಿತ ಹಲೋ ಟ್ಯೂನ್ಸ್, ಅಪೋಲೊ 24 by 7 ಸರ್ಕಲ್ ಮತ್ತು ಫಾಸ್ಟ್​​ಟ್ಯಾಗ್ ರಿಚಾರ್ಜ್​ಗೆ ಕ್ಯಾಶ್​​​ಬ್ಯಾಕ್ ಆಯ್ಕೆಯನ್ನೂ ನೀಡಿದೆ.

ಏರ್​​ಟೆಲ್ 509 ರೂ. ಪ್ಲಾನ್

ಏರ್​ಟೆಲ್ ಪರಿಚಯಿಸಿರುವ ಮತ್ತೊಂದು ಪ್ಲಾನ್ 509 ರೂ.ನದ್ದು. ಇದರಲ್ಲಿ ಅನಿಯಮಿತ ಸ್ಥಳೀಯ, ಎಸ್​ಟಿಡಿ ಹಾಗೂ ರೋಮಿಂಗ್​ ಕರೆ ಸೌಲಭ್ಯ ನೀಡಲಾಗಿದೆ. ಈ ಪ್ಲಾನ್​ಗೆ 30 ದಿನಗಳ ವ್ಯಾಲಿಡಿಟಿ ಇದೆ. 300 ಉಚಿತ ಎಸ್​ಎಂಎಸ್ ಹಾಗೂ 60 ಜಿಬಿ ಡೇಟಾ ದೊರೆಯಲಿದೆ. ಹೆಚ್ಚುವರಿಯಾಗಿ ಉಚಿತ ವಿಂಕ್ ಮ್ಯೂಸಿಕ್ ಸಬ್​ಸ್ಕ್ರಿಪ್ಷನ್, ಉಚಿತ ಹಲೋ ಟ್ಯೂನ್ಸ್, ಅಪೋಲೊ 24 by 7 ಸರ್ಕಲ್ ಮತ್ತು ಫಾಸ್ಟ್​​ಟ್ಯಾಗ್ ರಿಚಾರ್ಜ್​ಗೆ ಕ್ಯಾಶ್​​​ಬ್ಯಾಕ್ ಆಯ್ಕೆ ಈ ಪ್ಲಾನ್​ನಲ್ಲೂ ಲಭ್ಯವಿದೆ.

ಈ ಮಧ್ಯೆ ಕನಿಷ್ಠ ರಿಚಾರ್ಜ್ ದರವನ್ನು ಏರ್​ಟೆಲ್ ಹೆಚ್ಚಿಸಿದ್ದು, 155 ರೂ.ಗೆ ನಿಗದಿಪಡಿಸಿದೆ. ಹರಿಯಾಣ ಮತ್ತು ಒಡಿಶಾಗಳಲ್ಲಿ ನವೆಂಬರ್​​ನಲ್ಲಿ ಪ್ರಾಯೋಗಿಕವಾಗಿ ಈ ಪ್ಲಾನ್ ಜಾರಿಮಾಡಲಾಗಿತ್ತು. ಇದೀಗ ಕರ್ನಾಟಕ ಸೇರಿ 8 ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲಾಗಿದೆ.

155 ರೂ. ಪ್ಲಾನ್ ವಿವರ ಇಲ್ಲಿದೆ

ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ. 1 ಜಿಬಿ ಮೊಬೈಲ್ ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯ ಈ ಪ್ಲಾನ್​ನಲ್ಲಿದೆ. 300 ಎಸ್​ಎಂಎಸ್​ ಕೂಡ ಇರಲಿದೆ.

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ