- ರಾಜ್ಯ
- 3:11 ಅಪರಾಹ್ನ
- ಜನವರಿ 6, 2023
ಏಪ್ರಿಲ್ 2024ರ ವೇಳೆಗೆ ದೇಶದಲ್ಲಿ ಬಿಎಸ್ಎನ್ಎಲ್ 5ಜಿ ಸೇವೆ ಆರಂಭ: ಅಶ್ವಿನಿ ವೈಷ್ಣವ್

ವನೇಶ್ವರ: BSNL ತನ್ನ 5G ಸೇವೆಯನ್ನು ಏಪ್ರಿಲ್ 2024 ರ ವೇಳೆಗೆ ಪ್ರಾರಂಭಿಸಲಿದೆ ಎಂದು ಕೇಂದ್ರ ರೈಲ್ವೆ, ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಗುರುವಾರ ಘೋಷಿಸಿದ್ದಾರೆ.
ಇಲ್ಲಿನ ಎಸ್‌ಒಎ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ 5ಜಿ ರೋಲ್‌ಔಟ್ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯನ್ನು ಪುನರುಜ್ಜೀವನಗೊಳಿಸಲು ಕೇಂದ್ರ ಸುಮಾರು 1.6 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿದೆ. ಇದು ಶೀಘ್ರದಲ್ಲೇ ಟೆಲಿಕಾಂ ಕ್ಷೇತ್ರದ ಪ್ರಬಲ ಘಟಕವಾಗಿ ಹೊರಹೊಮ್ಮಲಿದೆ ಎಂದರು.
ಈ ವರ್ಷದ ಅಂತ್ಯದ ವೇಳೆಗೆ ದೇಶದಾದ್ಯಂತ ಬಿಎಸ್ಎನ್ಎಲ್ 4ಜಿ ಸೇವೆ ಲಭ್ಯವಾಗುವ ನಿರೀಕ್ಷೆ ಇದೆ. BSNL ಲೆಗಸಿ ನೆಟ್‌ವರ್ಕ್ ಹೊಂದಿಲ್ಲದ ಕಾರಣ, 4G ಟವರ್‌ಗಳನ್ನು 5G ಗೆ ಅತ್ಯಂತ ವೇಗವಾಗಿ ಅಪ್‌ಗ್ರೇಡ್ ಮಾಡಬಹುದು. ಅತ್ಯಂತ ವೇಗವಾಗಿ 5ಜಿ ಸೇವೆ ನೀಡಲು ಯಾವುದೇ ಸಮಸ್ಯೆಗಳಿಲ್ಲ ಎಂದರು.
ಭುವನೇಶ್ವರ್ ಮತ್ತು ಕಟಕ್ ಅವಳಿ ನಗರಗಳಲ್ಲಿ ಬಹು ನಿರೀಕ್ಷಿತ 5G ಸೇವೆಗೆ ವೈಷ್ಣವ್ ಮತ್ತು ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಚಾಲನೆ ನೀಡಿದರು.