- ರಾಜ್ಯ
- 5:27 ಅಪರಾಹ್ನ
- ಮೇ 26, 2023
ಏನ್ ನಡೀತಾ ಇದೆ? ಟ್ಯಾಲೆಂಟ್ಗೆ ಇಲ್ಲಿ ಬೆಲೆಯೇ ಇಲ್ಲ; ಸಹಾಯಕಿ ಮೇಲೆ ರೇಗಾಡಿದ ರಶ್ಮಿಕಾ ಮಂದಣ್ಣ!

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಒಂದು ವಿಡಿಯೋ ವೈರಲ್ ಆಗಿದೆ. ತಮಗೆ ಮೇಕಪ್ ಮಾಡಲು ಬಂದ ಸಹಾಯಕಿಯ ಮೇಲೆ ಅವರು ರೇಗಾಡಿದ್ದಾರೆ. ‘ಏನ್ ನಡೀತಾ ಇದೆ? ಟ್ಯಾಲೆಂಟ್ಗೆ ಇಲ್ಲಿ ಬೆಲೆಯೇ ಇಲ್ಲ. ಟ್ಯಾಲೆಂಟ್ಗೆ ಎಲ್ಲಿ ಬೆಲೆ ಇದೆಯೋ ಅಲ್ಲಿಗೆ ನಾನು ಹೋಗುತ್ತೇನೆ’ ಎಂದು ಅವರು ಸಿಟ್ಟು ಮಾಡಿಕೊಂಡಿದ್ದಾರೆ. ಆ ದೃಶ್ಯವನ್ನು ಮೊಬೈಲ್ನಲ್ಲಿ ಶೂಟ್ ಮಾಡಲಾಗುತ್ತಿತ್ತು. ರೆಕಾರ್ಡಿಂಗ್ ನಿಲ್ಲಿಸುವಂತೆ ರಶ್ಮಿಕಾ ಅವರ ಸಿಬ್ಬಂದಿ ತಾಕೀತು ಮಾಡಿದ್ದಾರೆ. ಈ ವಿಡಿಯೋ (Rashmika Mandanna Viral Video) ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ಅಷ್ಟಕ್ಕೂ ರಶ್ಮಿಕಾ ಮಂದಣ್ಣ ಅವರು ಹೀಗೆಲ್ಲ ಕೂಗಾಡಿದ್ದು ಯಾಕೆ? ಅವರಿಗೆ ಕಿರಿಕಿರಿ ಆಗುವಂತಹ ಘಟನೆ ಏನಾಯಿತು ಎಂದು ಫ್ಯಾನ್ಸ್ ತಲೆ ಕೆಡಿಸಿಕೊಂಡರು. ಆದರೆ ಇದೆಲ್ಲವೂ ಡ್ರಾಮಾ ಎಂಬುದು ಈಗ ಬಯಲಾಗಿದೆ. ರಶ್ಮಿಕಾ ಮಂದಣ್ಣ ಅವರು ಈ ರೀತಿ ಮಾಡಿದ್ದು ಒಂದು ಖಾಸಗಿ ಕಂಪನಿಯ ಜಾಹೀರಾತಿನ ಸಲುವಾಗಿ. ಆ ಜಾಹೀರಾತು (Rashmika Mandanna Advertisement) ಪ್ರಸಾರ ಆಗುವುದಕ್ಕೂ ಮುನ್ನ ನೆಟ್ಟಿಗರಲ್ಲಿ ಕುತೂಹಲ ಮೂಡಿಸುವ ಸಲುವಾಗಿ ಈ ರೀತಿ ವಿಡಿಯೋ ಮಾಡಿ ವೈರಲ್ ಮಾಡಿಸಲಾಗಿದೆ. ಈ ಸತ್ಯ ಗೊತ್ತಾದ ಬಳಿಕ ನೆಟ್ಟಿಗರು ‘ಏನ್ ಡ್ರಾಮಾ ಗುರೂ’ ಅಂತ ಕಮೆಂಟ್ ಮಾಡುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಹಲವು ಕಂಪನಿಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ಅದರಿಂದ ಅವರಿಗೆ ದೊಡ್ಡ ಮೊತ್ತದ ಸಂಭಾವನೆ ಸಿಗುತ್ತದೆ. ಆದರೆ ಕೆಲವು ವಿವಾದಗಳು ಕೂಡ ಅಂಟಿಕೊಳ್ಳುತ್ತವೆ. ಈ ಹಿಂದೆ ಪುರುಷರ ಒಳ ಉಡುಪಿನ ಜಾಹೀರಾತಿನಲ್ಲಿ ಅವರು ಕಾಣಿಸಿಕೊಂಡಿದ್ದ ರೀತಿಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದರು. ಆ ಟ್ರೋಲ್ಗಳಿಗೆಲ್ಲ ರಶ್ಮಿಕಾ ತಲೆ ಕೆಡಿಸಿಕೊಂಡಿಲ್ಲ. ತಮ್ಮ ಕೆಲಸದ ಮೇಲೆ ಅವರು ಸಂಪೂರ್ಣ ಗಮನ ಹರಿಸಿದ್ದಾರೆ.
ಇತ್ತೀಚೆಗೆ ಚಿಕನ್ ಬರ್ಗರ್ ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಆದರೆ ತಾವು ನಾನ್-ವೆಜ್ ತಿನ್ನಲ್ಲ ಎಂದು ಅವರು ಈ ಹಿಂದೆ ಹೇಳಿಕೊಂಡಿದ್ದರು. ಹಾಗಾಗಿ ರಶ್ಮಿಕಾ ಮಂದಣ್ಣ ಅವರ ಈ ದ್ವಂದ್ವನೀತಿಯನ್ನು ನೆಟ್ಟಿಗರು ಪ್ರಶ್ನಿಸಿದ್ದರು. ‘ರಶ್ಮಿಕಾ ಮಂದಣ್ಣ ಅವರು ಹೊಸ ಜಾಹೀರಾತಿನಲ್ಲಿ ನಾನ್-ವೆಜ್ ತಿನ್ನುತ್ತಿದ್ದಾರೆ. ಆದರೆ ತಮ್ಮನ್ನು ತಾವು ಸಸ್ಯಾಹಾರಿ ಎಂದು ಹೇಳಿಕೊಂಡಿದ್ದರು. ಜನರಿಗೆ ಇದು ಇಷ್ಟ ಆಗಿಲ್ಲ. ನಮ್ಮನ್ನು ಮೂರ್ಖರನ್ನಾಗಿಸೋದು ನಿಲ್ಲಿಸಿ ಅಂತ ಜನರು ಕಮೆಂಟ್ ಮಾಡಿದ್ದಾರೆ. ಜನರ ಪ್ರತಿಕ್ರಿಯೆ ನೋಡಿದ ಜಾಹೀರಾತಿನ ಕಮೆಂಟ್ ಆಯ್ಕೆಯನ್ನೇ ನಿಷ್ಕ್ರಿಯಗೊಳಿಸಲಾಗಿದೆ’ ಎಂದು ‘ಬಾಲಿವುಡ್ ಗರಿಮಾ ಕುಮಾರ್’ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿತ್ತು.
ದಿನದಿಂದ ದಿನಕ್ಕೆ ನಟಿ ರಶ್ಮಿಕಾ ಮಂದಣ್ಣ ಅವರ ಖ್ಯಾತಿ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಹಿಂಬಾಲಿಸುವವರ ಸಂಖ್ಯೆ ಕೂಡ ದೊಡ್ಡದಾಗುತ್ತಿದೆ. ಆ ಕಾರಣದಿಂದ ಅವರನ್ನು ಅನೇಕ ಕಂಪನಿಗಳು ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಿಕೊಳ್ಳುತ್ತಿವೆ. ಬಹುಭಾಷೆಯಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಅವರಿಗೆ ಎಲ್ಲ ರಾಜ್ಯದಲ್ಲೂ ಅಭಿಮಾನಿಗಳಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು ಬರೋಬ್ಬರಿ 3.8 ಕೋಟಿ ಜನರು ಫಾಲೋ ಮಾಡುತ್ತಿದ್ದಾರೆ.