ಗುರುವಾರ, ಜುಲೈ 25, 2024
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಂಗಳೂರಿನ ಶ್ರೀಯುತ ಮೋಹನ್ ಶೆಟ್ಟಿ ವಿಧಿವಶ-Anandpur: ಮದುವೆಯಾಗುವಂತೆ ಪೀಡಿಸುತ್ತಿದ್ದಾಳೆಂದು ಪ್ರೇಯಸಿ ಕೊಲೆ ಮಾಡಿದ ಪ್ರಿಯಕರ-ಮುಡಾ ಸೈಟ್ ಕೋಲಾಹಲ: ಬಿಜೆಪಿ ಶಾಸಕರಿಂದ ಸದನದಲ್ಲಿ ಶ್ರೀರಾಮನ ಭಜನೆ-Shiroor: ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಟ್ರಕ್ ಗಂಗಾವಳಿ ನದಿಯಲ್ಲಿ ಪತ್ತೆ-Ladies PG: ಬೆಂಗಳೂರಿನಲ್ಲಿ ಲೇಡಿಸ್ ಪಿಜಿಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ!-ಕಾಂಗ್ರೆಸ್​ ಹಿರಿಯ ನಾಯಕ ಮರಿಗೌಡ ಪಾಟೀಲ್ ಹುಲ್ಕಲ್ ನಿಧನ-Shimoga: ರಸ್ತೆ ಅಪಘಾತ; ಶಿವಮೊಗ್ಗ ಧರ್ಮಪ್ರಾಂತ್ಯದ ಫಾ.ಆಂಟನಿ ಪೀಟರ್ ಇನ್ನಿಲ್ಲ-Mudra loan: ಮುದ್ರಾ ಸಾಲದ ಮಿತಿ 10 ಲಕ್ಷದಿಂದ 20 ಲಕ್ಷ ರೂಗೆ ಏರಿಕೆ; ಉದ್ದಿಮೆದಾರರಿಗೆ ಉತ್ತೇಜನ-Gold Rate: ಬಜೆಟ್‌ ಬೆನ್ನಲ್ಲೇ ಚಿನ್ನ, ಬೆಳ್ಳಿ ದರ ದಿಢೀರ್‌ ಇಳಿಕೆ-Sanket: ಮಹಿಳಾ ನಿರ್ದೇಶಕಿಯ ಅದ್ಭುತ ನಿರ್ದೇಶನ, ಅಂತರಾಷ್ಟ್ರೀಯ ಮಟ್ಟದ ಬಿಜಿಎಂ, ಕಲಾವಿದರ ಅದ್ಭುತ ಅಭಿನಯ ದಿಂದ ಮನಸೂರೆಗೊಂಡಿರುವ ಕನ್ನಡ ಚಲನಚಿತ್ರ ಸಾಂಕೇತ್ ಜುಲೈ 26ಕ್ಕೆ ಬಿಡುಗಡೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಎರಡು ವರ್ಷ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೇಸ್‍ಬುಕ್ ಖಾತೆ ಗೆ ನಿಷೇಧ!!

Twitter
Facebook
LinkedIn
WhatsApp
ಎರಡು ವರ್ಷ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೇಸ್‍ಬುಕ್ ಖಾತೆ ಗೆ ನಿಷೇಧ!!

ವಾಷಿಂಗ್ಟನ್: ಅಮೆರಿಕ ಸಂಸತ್ ಭವನದ ಮೇಲೆ ಜನವರಿ 6ರಂದು ನಡೆದ ದಂಗೆಗೆ ಸಂಬಂಧಿಸಿದಂತೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ್ದ ಫೇಸ್‍ಬುಕ್ ಪೋಸ್ಟ್ ಪ್ರಚೋದನಕಾರಿಯಾಗಿದ್ದವು ಎಂಬ ಕಾರಣಕ್ಕೆ ಫೇಸ್‍ಬುಕ್ ಸಂಸ್ಥೆ ಟ್ರಂಪ್ ಖಾತೆಯನ್ನು ಮುಂದಿನ 2 ವರ್ಷಗಳ ಕಾಲ ಬ್ಯಾನ್ ಮಾಡಿದೆ.

ಸಂಸತ್ ಭವನ ಕ್ಯಾಪಿಟಲ್ ಹಿಲ್‍ನಲ್ಲಿ ನಡೆದ ಹಿಂಸಾಚಾರದ ಬಳಿಕ ಜನವರಿ 7ರಂದು ಟ್ರಂಪ್ ಅವರ ಫೇಸ್‍ಬುಕ್ ಖಾತೆಯನ್ನು ರದ್ದು ಮಾಡಲಾಗಿತ್ತು. ಈ ಸಂದರ್ಭ ಟ್ರಂಪ್ ಇದು ಅಮೆರಿಕದವರಿಗೆ ಫೇಸ್‍ಬುಕ್ ಮಾಡಿದ ಅವಮಾನ ಎಂದಿದ್ದರು.
ಇದೀಗ ಫೇಸ್‍ಬುಕ್ ಸಂಸ್ಥೆ ತಿಳಿಸಿರುವಂತೆ ಡೊನಾಲ್ಡ್ ಟ್ರಂಪ್ ಅವರ ವರ್ತನೆ ಫೇಸ್‍ಬುಕ್ ಸಂಸ್ಥೆಯ ಹೊಸ ನಿಯಮಾವಳಿಗಳನ್ನು ಮುರಿದಿದೆ. ಹಿಂಸಾಚಾರಕ್ಕೆ ಪ್ರಚೋದನಕಾರಿಯಾಗಿ ಮಾಡಿದ ಪೋಸ್ಟ್ ಗೆ ಸಂಬಂಧಿಸಿದಂತೆ ಸಂಸ್ಧೆಯು ತೆಗೆದುಕೊಂಡಿರುವ ನಿರ್ಧಾರದ ಪ್ರಕಾರ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು 2023ರ ಜನವರಿವರೆಗೆ ಬ್ಯಾನ್ ಮಾಡಲಾಗಿದೆ ಎಂದು ಫೇಸ್‍ಬುಕ್‍ನ ಜಾಗತಿಕ ವ್ಯವಹಾರಗಳ ಉಪಾಧ್ಯಕ್ಷ ನಿಕ್ ಕ್ಲೆಗ್ ಬ್ಲಾಗ್ ಪೋಸ್ಟ್‍ನಲ್ಲಿ ಬರೆದುಕೊಂಡಿದ್ದಾರೆ.

ಫೇಸ್‍ಬುಕ್‍ನಲ್ಲಿ ಟ್ರಂಪ್ ಅವರ ಖಾತೆ ಬ್ಯಾನ್ ಆಗಿದ್ದರೂ ಕೂಡ ಅವರ ಇತರರು ಹಿಂದಿನ ಪೋಸ್ಟ್ ಗಳನ್ನು ಓದಬಹುದು ಮತ್ತು ಕಾಮೆಂಟ್ ಮಾಡಬಹುದು. ಆದರೆ ಹೊಸ ವಿಷಯಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಟ್ರಂಪ್ ಖಾತೆಯನ್ನು ಅಮಾನತು ಮಾಡಿರುವ ಫೇಸ್‍ಬುಕ್‍ನ ನಡೆಯನ್ನು ಹಲವರು ಸ್ವಾಗತಿಸಿದ್ದಾರೆ. ಆದರೆ ರಿಪಬ್ಲಿಕನ್ ಶಾಸಕರು, ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆಯಾಗಿದೆ ಎಂದು ಟ್ರಂಪ್ ಖಾತೆ ಮೇಲಿನ ನಿರ್ಬಂಧವನ್ನು ವಿರೋಧಿಸಿದ್ದಾರೆ.

ಫೇಸ್ ಬುಕ್ ಟ್ರಂಪ್ ಖಾತೆಯನ್ನು 2 ವರ್ಷ ಬ್ಯಾನ್ ಮಾಡಿದ್ದರೆ, ಟ್ವಿಟ್ಟರ್ ಮಾತ್ರ ಶಾಶ್ವತವಾಗಿ ಅವರ ಖಾತೆಯನ್ನು ರದ್ದುಮಾಡದೆ. ಈ ಮೊದಲು ಟ್ವಿಟರ್ನಲ್ಲಿ ಅತಿ ಹೆಚ್ಚು ಫಾಲವರ್ಸ್ ಅನ್ನು ಡೊನಾಲ್ಡ್ ಟ್ರಂಪ್ ಹೊಂದಿದ್ದರು. ಅದನ್ನು ಶಾಶ್ವತವಾಗಿ ನಿಷೇಧಿಸಲಾಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ರಾಷ್ಟ್ರೀಯ

union finance minister nirmala sitharaman

Mudra loan: ಮುದ್ರಾ ಸಾಲದ ಮಿತಿ 10 ಲಕ್ಷದಿಂದ 20 ಲಕ್ಷ ರೂಗೆ ಏರಿಕೆ; ಉದ್ದಿಮೆದಾರರಿಗೆ ಉತ್ತೇಜನ

Mudra loan: ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್​ನಲ್ಲಿ ಮುದ್ರಾ ಸಾಲದ ಮಿತಿ 10 ಲಕ್ಷದಿಂದ 20 ಲಕ್ಷ ರೂಗೆ ಹೆಚ್ಚಿಸಲಾಗಿದೆ. ಉದ್ದಿಮೆದಾರರಿಗೆ ಉತ್ತೇಜನ.

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು