ಸುರತ್ಕಲ್: ತಾತ್ಕಾಲಿಕ ನೆಲೆಯಲ್ಲಿ ಆರಂಭಗೊಂಡಿದ್ದ ಸುರತ್ಕಲ್ ಎನ್‌ಐಟಿಕೆ ಬಳಿಯ ಟೋಲ್‌ಗೇಟನ್ನು ರದ್ದು ಮಾಡುವ ಭರವಸೆ ನೀಡಿ ವರ್ಷವಾದರೂ ಯಾವುದೇ ಕ್ರಮ ಕೈಗೊಳ್ಳದಿರುವ ಕಾರಣ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆಯೇ ಟೋಲ್ ಸಂಗ್ರಹಕ್ಕೆ ಟೆಂಡರ್ ನೀಡುವ ಪ್ರಕ್ರಿಯೆ ಎಪ್ರಿಲ್‌ನಲ್ಲಿ ಮತ್ತೆ ಆರಂಭವಾಗಲಿದೆ.
ಜನರ ತೀವ್ರ ವಿರೋಧದ ನಡುವೆ ಈ ಟೋಲ್ ಗೇಟ್ 2014ರಲ್ಲಿ ಆರಂಭವಾಗಿದ್ದು, ಇದುವರೆಗೆ ನಿರಂತರ ಪ್ರತಿಭಟನೆ ಎದುರಿಸಿದೆ. ಕನಿಷ್ಠ 60 ಕಿ.ಮೀ. ಅಂತರದ ನಡುವೆ ಟೋಲ್‌ಗೇಟ್ ಇರಬೇಕೆಂಬ ನಿಯಮ ಈ ಹಿಂದೆ ಇತ್ತು. ಇದೀಗ ಹೆದ್ದಾರಿ ಇಲಾಖೆಯೇ ಕಾಮಗಾರಿ ನಡೆದ ಸ್ಥಳ ಹಾಗೂ ವೆಚ್ಚದ ಅನ್ವಯ ಸುರತ್ಕಲ್‌ನಲ್ಲಿ ಟೋಲ್‌ಗೇಟ್ ನಿರ್ಮಾಣವಾಗಿದೆ ಎಂಬ ಮಾಹಿತಿಯ ಫ್ಲೆಕ್ಸ್ ಅಳವಡಿಸಿದೆ.
ವಸೂಲಿ ಮಾತ್ರ; ಸೌಲಭ್ಯಗಳಿಲ್ಲ !
ಇಲ್ಲಿನ ಟೋಲ್‌ಗೇಟ್ ಜನರಿಂದ ವಸೂಲಿಗೆ ಮಾತ್ರ ಎಂಬಂತಿದೆ. ಕನಿಷ್ಠ ಮೂಲಸೌಕರ್ಯಗಳಾದ ಶೌಚಾಲಯ
ವಾಗಲಿ, ವಾಹನ ಚಾಲಕರ ವಿಶ್ರಾಂತಿ ತಾಣವಾಗಲಿ, ವಾಹನಗಳ ಸಣ್ಣಪುಟ್ಟ ದುರಸ್ತಿಗೆ ಸ್ಥಳಾವಕಾಶವಾಗಲಿ ಇಲ್ಲಿಲ್ಲ. ಈಗಾಗಲೇ ಇಲ್ಲಿ ಟೋಲ್ ದುಬಾರಿಯಾಗಿದೆ. ಇದೀಗ ಕೂಳೂರಿನಲ್ಲಿ 66 ಕೋಟಿ ರೂ. ವೆಚ್ಚದಲ್ಲಿ ಸೇತುವೆ, ಕೆಪಿಟಿ ಬಳಿ 24 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಲಿದ್ದು ಮುಂದಿನ ದಿನಗಳಲ್ಲಿ ಶುಲ್ಕ ಏರಿಸುವ ಮೂಲಕ ವಾಹನ ಸವಾರರ ಮೇಲೆ ಇದರ ಹೊರೆಯನ್ನು ಹೇರುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist