ಉಳ್ಳಾಲ: ದರೋಡೆಗೆ ಹೊಂಚು - ಇಬ್ಬರ ಬಂಧನ
Twitter
Facebook
LinkedIn
WhatsApp
ಉಳ್ಳಾಲ, ಜ 14 : ಕತ್ತಲಲ್ಲಿ ಅಂಗಡಿಗಳ ಬಳಿ ರಾಡಿನ ಜೊತೆಗೆ ಕುಳಿತಿದ್ದ ಇಬ್ಬರನ್ನು ಗಸ್ತು ತಿರುಗುತ್ತಿದ್ದ ಉಳ್ಳಾಲ ಪೊಲೀಸರು ಬಂಧಿಸಿದ್ದು, ಇಬ್ಬರು ಅಂಗಡಿ, ಎಟಿಎಂ,ಮನೆಗಳನ್ನು ದರೋಡೆ ನಡೆಸುವ ಹುನ್ನಾರ ಇಟ್ಟುಕೊಂಡು ಕುಳಿತಿರುವ ಸಂಶಯದಿಂದ ಪ್ರಕರಣ ದಾಖಲಿಸಲಾಗಿದೆ.
ಮುಕ್ಕಚ್ಚೇರಿಯ ರಾಯಿಸ್ ಖಾನ್ (23) ಕುಂಪಲ ಯತೀಂ ಖಾನದ ಮಹಮ್ಮದ್ ಮುಜಾಂಬಿಲ್ (28) ಬಂಧಿತರು.
ಇಬ್ಬರು ರಾ.ಹೆ66ರ ಕೋಟೆಕಾರು ಗ್ರಾಮದ ಬೀರಿ ಜಂಕ್ಷನ್ನಿನ ಬಳಿಯ ಅಂಗಡಿಗಳ ಬಾಗಿಲು ಬಳಿ ಕತ್ತಲಲ್ಲಿ ಕುಳಿತಿದ್ದರು. ಗಸ್ತು ತಿರುಗುತ್ತಿದ್ದ ಉಳ್ಳಾಲ ಪೊಲೀಸರು ಅವರನ್ನು ಹಿಡಿದಾಗ ಸಮರ್ಪಕವಾಗಿ ಉತ್ತರಿಸದೇ ಇದ್ದಾಗ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ವೇಳೆ ರಾಡ್ ಪತ್ತೆಯಾಗಿದ್ದು, ದರೋಡೆ ಅಥವಾ ಕಳವಿಗೆ ಇಬ್ಬರು ಯತ್ನಿಸುತ್ತಿರುವುದರಿಂದ ಬಂಧಿಸಲಾಗಿದೆ.