ಉತ್ತರ ಕನ್ನಡ : ಪ್ರಭಾವ ಬೀರದ ಅನಂತ್ ಕುಮಾರ್ ಹೆಗಡೆ ಅನುಪಸ್ಥಿತಿ; ಕಾಗೇರಿಗೆ 2 ಲಕ್ಷ ಅಧಿಕ ಮತಗಳಿಂದ ಗೆಲುವು
ಲೋಕಸಭೆ ಚುನಾವಣೆ ಫಲಿತಾಂಶ 2024 : 290 ಸ್ಥಾನಗಳಲ್ಲಿ ಎನ್ಡಿಎ, 232 ರಲ್ಲಿ ಇಂಡಿಯಾ ಒಕ್ಕೂಟ ಮುನ್ನಡೆ
ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಅನಂತ್ ಕುಮಾರ್ ಹೆಗಡೆ ಅವರನ್ನು ಕೈಬಿಟ್ಟು ಕಾಗೇರಿಗೆ ಟಿಕೆಟಿ ನೀಡಿ ಅಚ್ಚರಿ ಮೂಡಿಸಿದ್ದ ಕರ್ನಾಟಕ ಬಿಜೆಪಿಗೆ ನಿರಾಸೆ ತರದೇ ಉತ್ತರ ಕನ್ನಡ ಜನತೆ ಭರ್ಜರಿ ಮತದಾನದ ಮೂಲಕ ಬೆಂಬಲ ಸೂಚಿಸಿ ಎರಡು ಲಕ್ಷಕ್ಕೂ ಅಧಿಕ ಅಂತರದಿಂದ ಗೆಲುವು ಒದಗಿಸಿಕೊಟ್ಟು ಕರಾವಳಿ ಭಾಗದಲ್ಲಿ ಬಿಜೆಪಿಯನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಸಂದೇಶವನ್ನು ರವಣಿಸಿದ್ದಾರೆ.
ಇತ್ತೀಚಿಗೆ ಅನಂತ್ ಕುಮಾರ್ ಹೆಗಡೆ ಮುನಿಸಿಕೊಂಡು ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದು ಕಾಂಗ್ರೆಸ್ಸಿಗೆ ವರದಾನ ಆಗಬಹುದೆಂಬ ಲೆಕ್ಕಾಚಾರದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿಯು ವಿಪುಲ ಚುನಾವಣಾ ತಂತ್ರಜ್ಞಾನದಿಂದ ಹೀನಾಯ ಸೋಲನ್ನು ಕಂಡುಕೊಂಡಿದ್ದಾರೆ
ಅಂತೆಯೇ ಕರಾವಳಿ ಯ ಉಡುಪಿ ಲೋಕಸಭಾ ಕ್ಷೇತ್ರ ಹಾಗೂ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯು ಭರ್ಜರಿ ಮುನ್ನಡೆಯನ್ನು ಕಾಯ್ದುಕೊಂಡಿದೆ ದಕ್ಷಿಣ ಕನ್ನಡ ಲೋಪ ಲೋಕಸಭಾ ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರು ಗೆಲುವಿನ ಸನಿಹದಲ್ಲಿದ್ದಾರೆ