ಉಡುಪಿ: ಮೊಬೈಲ್ ಲಿಂಕ್ ಕಳುಹಿಸಿ ಸಾವಿರಾರು ರೂ. ವಂಚನೆ
Twitter
Facebook
LinkedIn
WhatsApp

ಉಡುಪಿ, ಫೆ 13 : ವ್ಯಕ್ತಿಯೋರ್ವರಿಗೆ ಆನ್‌ಲೈನ್ ಮೂಲಕ 99,999 ರೂ. ವಂಚಿಸಿದ ಘಟನೆ ನಡೆದಿದೆ.
ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವ ಹರೀಶ್ ಎಸ್. ಅವರು ಉಡುಪಿಯ ಎಸ್.ಬಿ.ಐ. ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರು
ಅವರ ಇಲಾಖೆಯ ಕೆ.ಜಿ.ಐ.ಡಿ. ಹಣ ಬ್ಯಾಂಕ್‌ಗೆ ಜಮೆಗೊಂಡಿರುವುದನ್ನು ಗಮನಿಸಿದ ಅಪರಿಚಿತ ವ್ಯಕ್ತಿಗಳು ಫೆ. 11ರಂದು ಅವರ ಮೊಬೈಲ್‌ಗೆ ಲಿಂಕ್ ಕಳುಹಿಸಿ ಬ್ಯಾಂಕ್ ವಿವರ ಪಡೆದು ಖಾತೆಯಿಂದ 1,499 ರೂ., 98,500 ರೂ.ಸಹಿತ ಒಟ್ಟು 99,999 ರೂ.ಗಳನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ.
ಈ ಮೂಲಕ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.