ಶುಕ್ರವಾರ, ಜೂನ್ 9, 2023
ಸೈಕ್ಲೋನ್‌ ಎಫೆಕ್ಟ್‌; ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ-ಬಾಬಾಬುಡನಗಿರಿಯಲ್ಲಿ ಶೌಚಾಲಯ ಸಮಸ್ಯೆ; ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ-ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು-ಕಾರು ಪಲ್ಟಿಯಾಗಿ ಬಿಜೆಪಿ ಮುಖಂಡ ಸಾವು; ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಗಾಯ-ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ-ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ-ಆಸೀಸ್‌ ವೇಗದ ದಾಳಿಗೆ ಕಂಗಾಲಾದ ಭಾರತಕ್ಕೆ ಇನ್ನಿಂಗ್ಸ್ ಹಿನ್ನಡೆ ಭೀತಿ; ಅಜಿಂಕ್ಯ ರಹಾನೆ ಆಸರೆ!-ಭಯಾನಕ ಮರ್ಡರ್; ಸಂಗಾತಿಯ ಶರೀರವನ್ನು ಪೀಸ್ ಪೀಸ್ ಮಾಡಿ ಕುಕ್ಕರ್ ನಲ್ಲಿ ಬೇಯಿಸಿದ ಕ್ರೂರಿ ಪ್ರೇಮಿ..!-ಕಾಂಗ್ರೆಸ್ ಸರ್ಕಾರಕ್ಕೆ 18 ಸಲಹೆಗಳನ್ನ ಕೊಟ್ಟ ಶಿಕ್ಷಣ ತಜ್ಞ ಪ್ರೊ ಎಂಆರ್ ​ದೊರೆಸ್ವಾಮಿ-ಸುಧಾಕರ್​​ನಿಂದಲೇ ನಾನು ಸೋತಿದ್ದು; ಎಂಟಿಬಿ ನಾಗರಾಜ್ ನೇರ ಆರೋಪ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಈ ವ್ಯಕ್ತಿಯನ್ನು ತಿಮಿಂಗಿಲ ನುಂಗಿಬಿಟ್ಟಿತು!! ಆದರೂ ಬಚಾವಾಗಿ ಬಂದಿದ್ದಾರೆ!!

Twitter
Facebook
LinkedIn
WhatsApp
ಈ ವ್ಯಕ್ತಿಯನ್ನು ತಿಮಿಂಗಿಲ ನುಂಗಿಬಿಟ್ಟಿತು!! ಆದರೂ ಬಚಾವಾಗಿ ಬಂದಿದ್ದಾರೆ!!

ಅಮೇರಿಕಾ : ತಿಮಿಂಗಲದ ಬಾಯಿಗೆ ತುತ್ತಾಗಿದ್ದ ವ್ಯಕ್ತಿಯೋರ್ವ ಪವಾಡ ಸದೃಶವಾಗಿ ತಿಮಿಂಗಲದ ಬಾಯಿಯಿಂದ ಹೊರ ಬಂದ ಘಟನೆ ಅಮೇರಿಕಾದ ಮಸ್ಸಾಚುಸೆಟ್ಸ್ ನಲ್ಲಿ ನಡೆದಿದೆ.
56 ವರ್ಷದ ಲ್ಯಾಬಸ್ಟರ್ ಡ್ರೈವರ್ ಆಗಿರುವ ಮೈಕಲ್ ಪ್ಯಾಕಾರ್ಡ್ ಎಂಬವರೇ ತಿಮಿಂಗಲದ ಬಾಯಿಯಿಂದ ಹೊರ ಬಂದವರು.

ಸಮುದ್ರದಲ್ಲಿ ಸುಮಾರು 45 ಅಡಿ ಆಳದಲ್ಲಿ ಈಜುತ್ತಿರುವ ವೇಳೆಯಲ್ಲಿ ತಿಮಿಂಗಲವೊಂದು ಪ್ಯಾಕಾರ್ಡ್ ಮೇಲೆ ದಾಳಿ ನಡೆಸಿ ನುಂಗಿ ಹಾಕಿತ್ತು.
ಅರೆಕ್ಷಣ ಮೈಕಲ್ ಫ್ಯಾಕಾರ್ಡ್ ಭಯಗೊಂಡಿದ್ದರು. ತನ್ನ ಮೇಲೆ ಶಾರ್ಕ್ ದಾಳಿ ನಡೆಸಿರಬಹುದು ಅಂದುಕೊಂಡಿದ್ದರು. ಆದ್ರೆ ಸ್ವಲ್ಪ ಹೊತ್ತಲೇ ಶಾರ್ಕ್ ಅಲ್ಲಾ ತಿಮಿಂಗಿಲ ಅನ್ನೋದು ಅವರ ಅರಿವಿಗೆ ಬಂದಿತ್ತು. ತಿಮಿಂಗಲದ ಹೊಟ್ಟೆಯೊಳಗೆ ಸೇರುತ್ತಿದ್ದಂತೆಯೇ ಇನ್ನೇನು ತಾನು ಬದುಕೋದೇ ಇಲ್ಲಾ ಅಂತಾ ಡಿಸೈಡ್ ಮಾಡಿಕೊಂಡಿದ್ದಾರೆ.
ಆದ್ರೆ ಸ್ವಲ್ಪ ಹೊತ್ತಲೇ ತಿಮಿಂಗಲ ನೀರಿನ ಮೇಲಕ್ಕೆ ಬಂದು ಬಾಯಿ ಕಳೆದು ಉಸಿರಾಡಿದೆ. ಈ ವೇಳೆಯಲ್ಲಿ ಮೈಕಲ್ ಫ್ಯಾಕಾರ್ಡ್ ಗಾಳಿಯಲ್ಲಿ ತೇಲುತ್ತಾ ಸಮುದ್ರದ ಮೇಲ್ಬಾಗದಲ್ಲಿ ಬಿದ್ದಿದ್ದಾರೆ. ಅಲ್ಲದಿದ್ದವರು ಫ್ಯಾಕಾರ್ಡ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಫ್ಯಾಕಾರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಅವರೇ ಹೇಳುವ ಪ್ರಕಾರ ಸುಮಾರು 30 ಸೆಕೆಂಡ್ ಗಳ ಕಾಲಷ್ಟೇ ಅವರು ತಿಮಿಂಗಲದ ಬಾಯಿಯಲ್ಲಿದ್ದರು. ಅಷ್ಟೇ ಅಲ್ಲಾ ತನ್ನ ಕೈಕಾಲು ಮುರಿದು ಹೋಗಿರ ಬಹುದು ಅಂತಾ ಅಂದುಕೊಂಡಿದ್ದರು. ಆದರೆ ಅದೃಷ್ಟವಶಾತ್ ದೇಹದ ಯಾವುದೇ ಭಾಗಕ್ಕೂ ಹಾನಿಯಾಗಿಲ್ಲ. ಇದೊಂದು ಪವಾಡ ದ ಘಟನೆ ಎಂದು ಎಲ್ಲರೂ ವಿಶ್ಲೇಷಿಸಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು