ಭಾನುವಾರ, ಮಾರ್ಚ್ 26, 2023
ಇಂದು ಮಹಿಳಾ ಪ್ರೀಮಿಯರ್ ಲೀಗ್ ಫೈನಲ್; ಮುಂಬೈ vs ಡೆಲ್ಲಿ ಫೈನಲ್ ಫೈಟ್-ಬಂಟ್ವಾಳ: ಸರಕಾರಿ ಬಸ್ಸಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ- ಕಂಡಕ್ಟರ್‌ ಅರೆಸ್ಟ್-ರಾಹುಲ್ ಗಾಂಧಿಯನ್ನು "ಹುತಾತ್ಮನ ಮಗ" ಎಂದು ಕರೆದ ಪ್ರಿಯಾಂಕಾ ಗಾಂಧಿ ವಾದ್ರಾ-ಉತ್ತರಾಖಂಡ್:‌ ಸಿಡಿಲು ಬಡಿದು 350 ಕ್ಕೂ ಹೆಚ್ಚು ಕುರಿ, ಮೇಕೆಗಳು ಮೃತ್ಯು!-Redmi Note 12 Turbo: ಮೊಬೈಲ್ ಪ್ರಿಯರ ನಿದ್ದೆ ಕದ್ದಿರುವ "ರೆಡ್ಮಿ ನೋಟ್ 12 ಟರ್ಬೋ" ಮಾರ್ಚ್ 28 ರಂದು ಬಿಡುಗಡೆ-ಇಸ್ರೋ ಮತ್ತೊಂದು ಮೈಲಿಗಲ್ಲು; 36 ಉಪಗ್ರಹಗಳ ಯಶಸ್ವಿ ಉಡಾವಣೆ-ಭವಿಷ್ಯ ಹೇಳುತ್ತಿದ್ದ ಸ್ನೇಹಿತನಿಗೆ ಕಲ್ಲಿನಿಂದ ಹೊಡೆದು ಹತ್ಯೆ-ಟೀಂ ಇಂಡಿಯಾದಲ್ಲಿ ಮತ್ತೆ `ಸೂರ್ಯʼ ಉದಯಿಸುತ್ತೆ – ಮಿಸ್ಟರ್‌ 360ಗೆ ಯುವರಾಜ್‌ ಸಿಂಗ್‌ ಬೆಂಬಲ-ಪಂತ್ ಬಗ್ಗೆ ಪ್ರಶ್ನಿಸಿದಕ್ಕೆ ಗರಂ ಆದ ನಟಿ ಊರ್ವಶಿ; ವಿಡಿಯೋ ವೈರಲ್-ಕನ್ನಡದಲ್ಲೇ ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣ ಸಿಗಲಿದೆ: ಮೋದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಈಕ್ವೆಡಾರ್‌ನಲ್ಲಿ 6.8 ತೀವ್ರತೆಯ ಭಾರೀ ಭೂಕಂಪ – 14 ಜನ ಬಲಿ

Twitter
Facebook
LinkedIn
WhatsApp
Ecuador earthquake 1

ಕ್ವಿಟೋ: ಶನಿವಾರ ಈಕ್ವೆಡಾರ್ (Ecuador) ಹಾಗೂ ಉತ್ತರ ಪೆರುವಿನ (Peru) ಕರಾವಳಿ ಪ್ರದೇಶದಲ್ಲಿ 6.8 ತೀವ್ರತೆಯ ಭಾರೀ ಭೂಕಂಪ (Earthquake) ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ. ನಗರದ ಅನೇಕ ಮನೆಗಳು ಹಾಗೂ ಕಟ್ಟಡಗಳು ಧರೆಗುರುಳಿ ಜನಜೀವನ ಅಸ್ತವ್ಯಸ್ತವಾಗಿದೆ.

ಭೂಕಂಪದ ತೀವ್ರತೆ 6.8ರಷ್ಟು ಇದ್ದು, ಗುವಾಯಾಸ್ ಪ್ರಾಂತ್ಯದ ಬಾಲಾವೋ ನಗರದಿಂದ 10 ಕಿ.ಮೀ ದೂರದಲ್ಲಿ ಹಾಗೂ 66.4 ಕಿ.ಮೀ ಆಳದಲ್ಲಿ ಇದರ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ.

ವರದಿಗಳ ಪ್ರಕಾರ ಭೂಕಂಪದಿಂದಾಗಿ ಇಲ್ಲಿ ವರೆಗೆ 14 ಜನರು ಸಾವನ್ನಪ್ಪಿದ್ದಾರೆ. ಸುಮಾರು 380 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹೆಚ್ಚಿನ ಹಾನಿ ಎಲ್ ಓರೋ ಪ್ರದೇಶದಲ್ಲಿ ಉಂಟಾಗಿದೆ. ಕನಿಷ್ಠ 44 ಮನೆಗಳು ಸಂಪೂರ್ಣ ನಾಶವಾದರೆ, 90ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ.

ಸುಮಾರು 50 ಶೈಕ್ಷಣಿಕ ಕಟ್ಟಡಗಳು ಹಾಗೂ 30 ಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳ ಮೇಲೆ ಈ ಭೂಕಂಪ ಪರಿಣಾಮ ಬೀರಿದೆ. ಭೂಕಂಪದಿಂದಾಗಿ ಹಲವೆಡೆ ರಸ್ತೆಗಳು ಕುಸಿದಿದ್ದು, ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ನಗರದ ಸಾಂಟಾ ರೋಸಾ ವಿಮಾನ ನಿಲ್ದಾಣದಲ್ಲಿಯೂ ಸಣ್ಣ ಮಟ್ಟದ ಹಾನಿ ಉಂಟಾಗಿದೆ. ಆದರೆ ನಿಲ್ದಾಣದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿಲ್ಲ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ