ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ – ಸುನಿಲ್ ಕುಮಾರ್
ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ – ಸುನಿಲ್ ಕುಮಾರ್
ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ 42 ವರ್ಷಗಳ ಹಿಂದೆ ಅಂದರೆ 29-04-1979 ರಂದು ಸಮುದಾಯದ ಆರ್ಥಿಕ,ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ನಮ್ಮ ಯುವ ಜನತೆ ಮುಂದೆ ಬಂದು ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಂಘಟಿತರಾಗಿ ದುಡಿಯುವ ಉದ್ದೇಶದಿಂದ “ಸೇವಾ,ತ್ಯಾಗ,ಐಕ್ಯತೆ” ಎಂಬ ಧ್ಯೇಯದೊಂದಿಗೆ “ಕಥೊಲಿಕ್ ಸಭಾ” ಸಂಘಟನೆ ಜನ್ಮ ತಾಳಿತು.
ಇಂದು ಕಥೊಲಿಕ್ ಸಭಾ ನೊಂದಾಯಿತ ಸಂಸ್ಥೆಯಾಗಿ ಮಂಗಳೂರು,ಉಡುಪಿ ಜಿಲ್ಲೆಗಳಲ್ಲಿ ಬಲಿಷ್ಠವಾಗಿ ಬೆಳೆದು ಇಡೀ ಸಮಾಜಕ್ಕೆ ಉತ್ತಮ ಸೇವಾ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ .ಕಥೋಲಿಕ್ ಸಭೆಯ ಸ್ಥಾಪಕ ಅಧ್ಯಕ್ಷರಾಗಿ ನಿರಂತರ ಮೂರು ವರ್ಷಗಳ ಅವಧಿಗೆ ಸನ್ಮಾನ್ಯ ಆಸ್ಕರ್ ಫೆರ್ನಾಂಡಿಸ್ ರವರು ನೀಡಿದ ಸೇವೆಯು ಅವಿಸ್ಮರಣೀಯವಾಗಿದೆ.
ಪ್ರಸ್ತುತ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ನಮ್ಮ ಸ್ಥಾಪಕಾಧ್ಯಕ್ಷರಾದ ಸನ್ಮಾನ್ಯ ಆಸ್ಕರ್ ಫೆರ್ನಾಂಡಿಸ್ ರವರು ಶೀಘ್ರ ಗುಣಮುಖರಾಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿ ಶುಭಹಾರೈಸಿದರು. ಗೌರವಾನ್ವಿತರು ಚಿಕಿತ್ಸೆ ಪಡೆಯುತ್ತಿರುವ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕಥೊಲಿಕ್ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷರಾದ ಶ್ರೀ ಸ್ಟ್ಯಾನಿ ಲೋಬೋ ಹಾಗೂ ಉಪಾಧ್ಯಕ್ಷರಾದ ಶ್ರೀ ಸ್ಟೀವನ್ ಡಿಸೋಜರವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು . ಈ ಸಂದರ್ಭದಲ್ಲಿ ಅವರ ಪತ್ನಿ ಶ್ರೀಮತಿ ಬ್ಲಾಸಂ ಫರ್ನಾಂಡಿಸ್ ಹಾಗೂ ಕುಟುಂಬ ಸದಸ್ಯರನ್ನು ಭೇಟಿಯಾಗಿ ಧೈರ್ಯ ತುಂಬಿದರು.
ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ – ಸುನಿಲ್ ಕುಮಾರ್
ವಾಟ್ಸ್ಆ್ಯಪ್ನಿಂದ ಹೊಸ ಅಪ್ಡೇಟ್: ಇನ್ಮುಂದೆ ಸ್ಕ್ರೀನ್ ಶೇರ್ ಮಾಡಬಹುದು