ಸೋಮವಾರ, ಅಕ್ಟೋಬರ್ 2, 2023
Galaxy S23 FE: ಸ್ಯಾಮ್ಸಂಗ್ ಗ್ಯಾಲಕ್ಸಿ S23 ಎಫ್​ಇ ಸ್ಮಾರ್ಟ್​ಫೋನ್ ಅ.4 ರಂದು ಬಿಡುಗಡೆ!-ಜಿಂಬಾಬ್ವೆಯಲ್ಲಿ ವಿಮಾನ ಪತನ ; ಭಾರತದ ಕೋಟ್ಯದೀಶ್ವರ ಹಾಗೂ ಗಣಿ ಉದ್ಯಮಿ ಮತ್ತು ಅವರ ಪುತ್ರ ದುರ್ಮರಣ!-ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ; ಸಿಪಿ ಯೋಗೇಶ್ವರ್ ಬಾಂಬ್-ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾರವರ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ!-ನೀವು ಹೆದರಿಸದರೆ ಮಾತ್ರಕ್ಕೆ ನಾನು ಹೆದರಲ್ಲ ದೇವೇಗೌಡರಿಗೆ ಡಿಕೆಶಿ ಟಾಂಗ್!-ಜಿಪಿಎಸ್ ಮ್ಯಾಪ್ ನೋಡಿ ಕಾರನ್ನು ಚಲಿಸುವುತ್ತಿರುವಾಗ ನದಿಗೆ ಬಿದ್ದು ಇಬ್ಬರು ವೈದ್ಯರು ಸಾವು ; ಮೂವರು ಪಾರು!-ಹೃದಯ ವಿದ್ರಾವಕ ಘಟನೆ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೇರಿ 6 ಮಂದಿ ಹತ್ಯೆ-ಬೆಂಗಳೂರಿನ ಕಂಬಳಕ್ಕೆ ಹೇಗಿದೆ ತಯಾರಿ; ದಕ್ಷಿಣ ಕನ್ನಡ ಭಾಗದ 150 ಫುಡ್ ಸ್ಟಾಲ್ ಏರ್ಪಾಡು..!-ಪಿಯುಸಿಯಲ್ಲಿ ಅಂಕ ಕಡಿಮೆ ಬಂತೆಂದು ಮನನೊಂದು ಅಪಾರ್ಟ್‌ಮೆಂಟ್‌ನಿಂದ ಜಿಗಿದ ಬಾಲಕಿ ; ರಕ್ಷಣೆಗೆ ಧಾವಿಸಿದ ಯುವಕ - ಇಲ್ಲಿದೆ ವಿಡಿಯೋ-ಬರ್ತ್‌ಡೇ ಪಾರ್ಟಿಯಲ್ಲಿ ಡೆಕೋರೇಷನ್‌ಗೆ ಹಾಕಿದ್ದ ಹೀಲಿಯಂ ಬಲೂನ್‌ ಬ್ಲಾಸ್ಟ್‌ ; ಐವರು ಗಂಭೀರ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಆದಿಲ್ ಜತೆಗಿನ ಮದುವೆ ಫೋಟೋ ವೈರಲ್; ಮತ್ತೊಂದು ವಿವಾಹ ಆದ ರಾಖಿ ಸಾವಂತ್!

Twitter
Facebook
LinkedIn
WhatsApp
2

ರಾಖಿ ಸಾವಂತ್ (Rakhi Sawant) ಹಾಗೂ ಅವರ ಬಾಯ್​ಫ್ರೆಂಡ್ ಆದಿಲ್​ ಖಾನ್ ಮದುವೆ ಆಗಿರುವ ವಿಚಾರ ಈಗ ರಿವೀಲ್ ಆಗಿದೆ. ರಾಖಿ ಅವರು ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಖಚಿತ ಪಡಿಸಿದ್ದಾರೆ. 2022ರ ಜುಲೈ 2ರಂದೇ ಈ ಮದುವೆ ನಡೆದಿದ್ದು, ಈ ವಿಚಾರವನ್ನು ಅವರು ಗುಟ್ಟಾಗಿ ಇಟ್ಟಿದ್ದರು. ಇತ್ತೀಚೆಗೆ ಆದಿಲ್ ಅವರು ಮಾಧ್ಯಮದ ಜತೆ ಮಾತನಾಡುತ್ತಾ ರಾಖಿ ಜತೆಗಿನ ಮದುವೆ ವಿಚಾರವನ್ನು ಅಲ್ಲಗಳೆದಿದ್ದರು. ಈ ಕಾರಣದಿಂದ ರಾಖಿ ಅವರು ಆದಿಲ್ ಜತೆ ಮದುವೆ ವಿಚಾರವನ್ನು ಸಾಕ್ಷಿ ಸಮೇತ ತೆರೆದಿಟ್ಟಿದ್ದಾರೆ.

ರಾಖಿ ಹಾಗೂ ಆದಿಲ್ ಹಲವು ಕಡೆಗಳಲ್ಲಿ ಒಟ್ಟಾಗಿ ಸುತ್ತಾಟ ನಡೆಸಿದ್ದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ, ಶೀಘ್ರವೇ ಮದುವೆ ಆಗಲಿದ್ದಾರೆ ಎನ್ನಲಾಗಿತ್ತು.ಇದನ್ನು ಆದಿಲ್ ಅಲ್ಲಗಳೆದಿದ್ದರು. ಮಾಧ್ಯಮದವರಿಗೆ ಸ್ಪಷ್ಟನೆ ನೀಡುವಾಗ ರಾಖಿ ಜತೆ ಮದುವೆ ಆಗಿಲ್ಲ ಎಂಬ ಮಾತನ್ನು ಹೇಳಿದ್ದರು. ಈ ಬೆನ್ನಲ್ಲೇ ರಾಖಿ ಹೊಸ ಬಾಂಬ್ ಹಾಕಿದ್ದಾರೆ. ಮದುವೆ ಆಗಿರುವ ಫೋಟೋ ಹಾಗೂ ತಮ್ಮ ಮದುವೆ ಪ್ರಮಾಣ ಪತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ, ‘ನಾನು ಆದಿಲ್​ನ ಮದುವೆ ಆಗಿದ್ದೇನೆ. ನನಗೆ ಖುಷಿ ಹಾಗೂ ಎಗ್ಸೈಟ್​ಮೆಂಟ್ ಎರಡೂ ಆಗುತ್ತಿದೆ’ ಎಂದು ಅವರು ಹೇಳಿದ್ದಾರೆ.

‘ನಾನು ಹಾಗೂ ಆದಿಲ್ ಕಳೆದ ಜುಲೈ ತಿಂಗಳಲ್ಲಿ ವಿವಾಹ ಆಗಿದ್ದೇವೆ. ಆದಿಲ್ ಪರಿಚಯಗೊಂಡು ಮೂರು ತಿಂಗಳಿಗೆ ಈ ಮದುವೆ ನಡೆದಿದೆ. ವಿವಾಹ ಕಾರ್ಯಕ್ರಮ ಹಾಗೂ ಕೋರ್ಟ್​​ನಲ್ಲಿ ನೋಂದಣಿ ಮಾಡಿಕೊಳ್ಳುವ ಕಾರ್ಯ ನಡೆದಿದೆ. ಈ ವಿಚಾರವನ್ನು ರಿವೀಲ್ ಮಾಡದಂತೆ ಆದಿಲ್ ಸೂಚಿಸಿದ್ದರು. ಹೀಗಾಗಿ, ನಾನು ಸುಮ್ಮನೆ ಇದ್ದೆ. ನಮ್ಮ ಮದುವೆ ನಡೆದ ವಿಚಾರ ಗೊತ್ತಾದರೆ ತನ್ನ ಸಹೋದರಿಗೆ ಹುಡುಗನನ್ನು ಹುಡುಕಲು ಕಷ್ಟವಾಗುತ್ತದೆ ಎಂಬುದು ಆತನ ಭಾವನೆ ಆಗಿತ್ತು. ರಾಖಿ ಸಾಂವತ್ ಜತೆ ಕಾಣಿಸಿಕೊಂಡರೆ ಅವಮಾನವನ್ನು ಆಹ್ವಾನಿಸಿದಂತೆ ಎಂಬುದು ಆದಿಲ್ ಅಭಿಪ್ರಾಯ’ ಎಂದಿದ್ದಾರೆ ರಾಖಿ.

‘ನನ್ನ ಮದುವೆಯನ್ನು ನಾನು ಉಳಿಸಿಕೊಳ್ಳಬೇಕಿದೆ. ಜಗತ್ತಿಗೆ ನಾನು ಮದುವೆ ಆಗಿದ್ದೀನೋ ಅಥವಾ ಇಲ್ಲವೋ ಎಂಬುದನ್ನು ಹೇಳಬೇಕಿತ್ತು’ ಎಂದಿದ್ದಾರೆ ರಾಖಿ ಸಾವಂತ್.

ರಾಖಿ ಸಾಂವತ್ ಅವರು ಈ ಮೊದಲು ರಿತೇಷ್ ರಾಜ್ ಅವರನ್ನು ಮದುವೆ ಆಗಿದ್ದರು. ಇಬ್ಬರೂ ‘ಬಿಗ್ ಬಾಸ್ ಹಿಂದಿ ಸೀಸನ್ 15’ಕ್ಕೆ ಒಟ್ಟಿಗೆ ಬಂದಿದ್ದರು. ಇವರ ಸಂಬಂಧ ಮುರಿದುಬಿದ್ದಿತ್ತು. ರಿತೇಷ್ ಅವರಿಂದ ಹಿಂಸೆಗೆ ಒಳಗಾಗಿದ್ದೆ ಎಂದು ರಾಖಿ ಹೇಳಿಕೊಂಡಿದ್ದರು. ಈಗ ತಾವು ಆದಿಲ್ ಜತೆ ಮದುವೆ ಆಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಇದಕ್ಕೆ ಆದಿಲ್ ಕುಟುಂಬದವರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ