ಬುಧವಾರ, ಜನವರಿ 15, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಆತ್ಮಹತ್ಯೆಗೆ ಶರಣಾದ ಸೀರಿಯಲ್ ನಟಿ ಶೋಭಿತಾ ಶಿವಣ್ಣ

Twitter
Facebook
LinkedIn
WhatsApp
shobhitha ಆತ್ಮಹತ್ಯೆಗೆ ಶರಣಾದ ಸೀರಿಯಲ್ ನಟಿ ಶೋಭಿತಾ ಶಿವಣ್ಣ

ಬ್ರಹ್ಮಗಂಟು (Brahmagantu) ಸೀರಿಯಲ್‌ ನಟಿ ಶೋಭಿತಾ ಶಿವಣ್ಣ (Shobhitha Shivanna) ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿನ್ನೆ (ನ.30) ತಡರಾತ್ರಿ ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಆತ್ಮಹತ್ಯೆಗೆ (Suicide) ಕಾರಣವೇನು ಎಂಬುದು ತಿಳಿದು ಬಂದಿಲ್ಲ.

2 ವರ್ಷಗಳ ಹಿಂದೆ ಹಾಸನ ಮೂಲದ ಶೋಭಿತಾ ಮದುವೆಯಾಗಿ ಹೈದರಾಬಾದ್‌ನಲ್ಲಿ ಸೆಟಲ್‌ ಆಗಿದ್ದರು. ಬಣ್ಣದ ಲೋಕದಿಂದ ಅವರು ಅಂತರ ಕಾಯ್ದುಕೊಂಡಿದ್ದರು. ಇದೀಗ ಶೋಭಿತಾ ಆತ್ಮಹತ್ಯೆಯ ಸುದ್ದಿ ಕೇಳಿ, ಕುಟುಂಬಸ್ಥರಿಗೆ ಶಾಕ್‌ ಕೊಟ್ಟಿದೆ. ಇನ್ನೂ ಮರಣೋತ್ತರ ಪರೀಕ್ಷೆಯ ನಂತರ ನಟಿಯ ಮೃತದೇಹ ಬೆಂಗಳೂರಿಗೆ ತರುವ ಸಾಧ್ಯತೆಯಿದೆ.

ಎರಡೊಂದ್ಲಾ ಮೂರು’, ‘ಒಂದ್‌ ಕಥೆ ಹೇಳಾ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ಶೋಭಿತಾ ಶಿವಣ್ಣ ನಿಧನರಾಗಿದ್ದಾರೆ. ‘ಬ್ರಹ್ಮಗಂಟು’ ಸೀರಿಯಲ್ ಮೂಲಕ ಅವರು ಖ್ಯಾತಿ ಪಡೆದಿದ್ದರು. ಆತ್ಮಹತ್ಯೆ ಮಾಡಿಕೊಂಡು ಅವರು ಸಾವಿಗೀಡಾಗಿದ್ದಾರೆ. ಹಾಸನ‌‌ ಮೂಲದ ಸಕಲೇಶಪುರದನಟಿ ಶೋಭಿತಾ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಇದೆ. ಸದ್ಯ ‘ಫಸ್ಟ್ ಡೇ ಫಸ್ಟ್ ಶೋ’ ಸಿನಿಮಾದಲ್ಲಿ ನಟಿಸಿದ್ದ ಶೋಭಿತಾ ಅವರು ಮದುವೆ ಬಳಿಕ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಗಿತ್ತು.

ಶೋಭಿತಾ ಮದುವೆ ಆದಾಗಿಂದ ಇಂಡಸ್ಟ್ರಿಯಿಂದ‌ ಅಂತರ ಕಾಯ್ದುಕೊಂಡಿದ್ದರು. ಮರಣೋತ್ತರ ಪರೀಕ್ಷೆ ನಂತರ ಬೆಂಗಳೂರಿಗೆ ಮೃತದೇಹ ತರುವ ಸಾಧ್ಯತೆ ಇದೆ. ಅವರ ನಿಧನಕ್ಕೆ ಸಿನಿಮಾ ಮತ್ತು ಸೀರಿಯಲ್ ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ. ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಸಕ್ರಿಯವಾಗಿದ್ದ ಶೋಭಿತಾ ಅವರು ಏಕಾಏಕಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಎಲ್ಲರಿಗೂ ಆಘಾತ ಆಗಿದೆ.

ಶೋಭಿತಾ ಅವರಿಗೆ 30 ವರ್ಷ ವಯಸ್ಸು ಆಗಿತ್ತು. 12ಕ್ಕೂ ಅಧಿಕ ಸೀರಿಯಲ್​ಗಳಲ್ಲಿ ಅವರು ನಟಿಸಿದ್ದರು. ಮಂಗಳಗೌರಿ ಮದುವೆ, ಗಾಳಿಪಟ, ಕೃಷ್ಣ ರುಕ್ಮಿಣಿ, ಮನೆ ದೇವ್ರು, ಅಮ್ಮಾವ್ರು, ದೀಪವು ನಿನ್ನದೇ ಗಾಳಿಯೂ ನಿನ್ನದೇ ಮುಂತಾದ ಧಾರಾವಾಹಿಗಳ ಮೂಲಕ ಅವರು ಪರಿಚಿತರಾಗಿದ್ದರು. ಶೋಭಿತಾ ನಿಧನಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಅವರ ಸಾವಿಗೆ ಕಾರಣ ಏನು ಎಂಬುದು ತಿಳಿಯಲಿದೆ.

ಶೋಭಿತಾ ಸೂಸೈಡ್ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ: ಗೀತಾ ಭಾರತಿ ಭಟ್ ಭಾವುಕ

ಶೋಭಿತಾ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿತ್ವದವರಲ್ಲ ಎಂದು ‘ಬ್ರಹ್ಮಗಂಟು’ ಸಹನಟಿ ಗೀತಾ (Geetha Bharathi Bhat) ಪ್ರತಿಕ್ರಿಯಿಸಿದ್ದಾರೆ. ‘ಬ್ರಹ್ಮಗಂಟು’ (Brahmagantu) ಸೀರಿಯಲ್‌ನಲ್ಲಿ ಶೋಭಿತಾ ಜೊತೆ ನಟಿಸಿದ ದಿನಗಳನ್ನು ಗೀತಾ ಸ್ಮರಿಸಿದ್ದಾರೆ.

ಶೋಭಿತಾ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿತ್ವದವರು ಅಲ್ಲ. ನಾವಿಬ್ಬರೂ ‘ಬ್ರಹ್ಮಗಂಟು’ ಸೀರಿಯಲ್ ಮಾಡಬೇಕಾದರೆ, ಬೇರೆ ಯಾರೋ ಸೀರಿಯಲ್ ಆರ್ಟಿಸ್ಟ್ ಸೂಸೈಡ್ ಸುದ್ದಿ ಕೇಳಿ ಈ ರೀತಿ ಮಾಡಿಕೊಳ್ಳುವುದು ತಪ್ಪು ಎಂದು ಶೋಭಿತಾ ಚರ್ಚಿಸಿದರು. ಆದರೆ ಇವರ ಸುದ್ದಿ ಈ ತರಹ ಬರುತ್ತೆ ಎಂದು ಅಂದುಕೊಂಡಿರಲಿಲ್ಲ. ಈಗಲೂ ಅವರ ಆತ್ಮಹತ್ಯೆಯ ಸುದ್ದಿ ನಂಬೋಕೆ ತುಂಬಾ ಕಷ್ಟ ಆಗುತ್ತಿದೆ ಎಂದು ನಟಿ ಗೀತಾ ಮಾತನಾಡಿದ್ದಾರೆ.

ಶೋಭಿತಾ ಮದುವೆಯಾದ್ಮೇಲೆ ನನ್ನ ಜೊತೆ ಸಂಪರ್ಕ ಇರಲಿಲ್ಲ. ನಾನು ಅವರನ್ನು ಕಡೆಯದಾಗಿ ಭೇಟಿ ಆಗಿದ್ದು, ಅವರ ಮದುವೆಗೂ ಮುಂಚೆ, ಆ ನಂತರ ಅವರು ಸಿಗಲಿಲ್ಲ. ಅವರಿಗೆ ಅದೇನು ಕಷ್ಟು ಇತ್ತು ಎಂಬುದು ಗೊತ್ತಿಲ್ಲ. ಅವರ ಕಷ್ಟ ಏನಿತ್ತು ಅವರು ಯಾರ ಹತ್ತಿರ ಆದ್ರೂ ಹೇಳಿಕೊಳ್ಳಬೇಕಿತ್ತು. ಅವರ ಕುಟುಂಬಕ್ಕೆ ಅವರ ಸಾವಿನ ನೋವನ್ನು ಸಹಿಸಿಕೊಳ್ಳುವ ಶಕ್ತಿ ಕೊಡಲಿ ಅಂತ ಕೇಳಿಕೊಳ್ಳುತ್ತೇನೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist