ಶನಿವಾರ, ಜುಲೈ 20, 2024
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜು.20 ರಂದು ಶಾಲೆ ಪಿಯು ಕಾಲೇಜುಗಳಿಗೆ ರಜೆ ಘೋಷಣೆ-ಬಂಟ್ವಾಳ: ಪುಂಜಾಲಕಟ್ಟೆ ಬಳಿ ಲಾರಿ ಪಲ್ಟಿ; ಓರ್ವ ಸಾವು, ಮೂವರು ಗಂಭೀರ.!-ಶಿರಾಡಿ ಘಾಟ್ ನಲ್ಲಿ ಓಮ್ನಿ ಕಾರಿನ ಮೇಲೆ ಮಣ್ಣು ಕುಸಿತ; ಅಪಾಯದಿಂದ ಪಾರಾದ ಪ್ರಯಾಣಿಕರು-Hardik Pandya - Natasa: ವಿಚ್ಛೇದನ ಪ್ರಕಟಿಸಿದ ಹಾರ್ದಿಕ್ ಪಾಂಡ್ಯ, ನತಾಶಾ-ದಕ್ಷಿಣ ಕನ್ನಡ, ಉಡುಪಿ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜು.19 ರಂದು ಶಾಲೆ ಪಿಯು ಕಾಲೇಜುಗಳಿಗೆ ರಜೆ ಘೋಷಣೆ-World Record: ಟೆಸ್ಟ್ ಕ್ರಿಕೆಟಿನಲ್ಲಿ ಅತಿ ವೇಗದ 50 ರನ್; ವಿಶ್ವ ದಾಖಲೆ ನಿರ್ಮಿಸಿದ ಇಂಗ್ಲೆಂಡ್-ದಿಬ್ರುಗಢ ಎಕ್ಸ್‌ಪ್ರೆಸ್ ಅಪಘಾತದ ಬಗ್ಗೆ ಪ್ರಧಾನ ಮಂತ್ರಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ-Aanvi Kamdar: ವಿಡಿಯೋ ಮಾಡುವ ವೇಳೆ 300 ಅಡಿ ಎತ್ತರದ ಫಾಲ್ಸ್​​ನಿಂದ ಬಿದ್ದು ಇನ್​ಸ್ಟಾ ತಾರೆ ಸಾವು-ದಕ್ಷಿಣ ಕನ್ನಡ ಜಿಲ್ಲೆಯ ಈ 5 ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ಜು.18 ರಂದು ರಜೆ ಘೋಷಣೆ-ನಕಲಿ ರಜೆ ಆದೇಶ: ಎಫ್.ಐ.ಆರ್ ದಾಖಲಿಸಲು ಡಿಸಿ‌ ಸೂಚನೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಆಗಸ್ಟ್​ ತಿಂಗಳಲ್ಲಿ ಮತ್ತೆ ಪಿಯು ಪರೀಕ್ಷೆ?

Twitter
Facebook
LinkedIn
WhatsApp
ಸಿಎಂ ಬೊಮ್ಮಾಯಿ ಸರ್ಕಾರಕ್ಕೆ ಕಷ್ಟಕಾಲ ಬಂದಲ್ಲಿ ನಾನು ಬೆಂಬಲ ನೀಡುತ್ತೇನೆ : ಹೆಚ್‌ಡಿಡಿ

ಬೆಂಗಳೂರು: ಕೊರೋನಾ ಮಹಾಮಾರಿ ಹಿನ್ನೆಲೆ, ಶಿಕ್ಷಣ ಇಲಾಖೆ ಈ ವರ್ಷ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ಪಾಸ್ ಮಾಡಿತ್ತು. ಫಲಿತಾಂಶಕ್ಕೆ ಎಸ್​ಎಸ್​ಎಲ್​ಸಿ ಮತ್ತು ಪ್ರಥಮ ಪಿಯುಸಿ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತು.
ಅದರಂತೆ ಜು.20ರಂದು ದ್ವಿತೀಯ ಪಿಯು ಫಲಿತಾಂಶವನ್ನು ಪ್ರಕಟ ಮಾಡಲಾಗಿತ್ತು. ರಿಸಲ್ಟ್​ ನೀಡುವ ಮುನ್ನವೇ ಪಿಯು ಬೋರ್ಡ್​ ವಿದ್ಯಾರ್ಥಿಗಳಿಗೆ ಸೂಚನೆಯೊಂದನ್ನು ನೀಡಿತ್ತು. ಈ ಫಲಿತಾಂಶವನ್ನು ತಿರಸ್ಕರಿಸುವ ವಿದ್ಯಾರ್ಥಿಗಳಿಗೆ ಆಗಸ್ಟ್​ ತಿಂಗಳಲ್ಲಿ ಮತ್ತೆ ಪರೀಕ್ಷೆ ನಡೆಸಲಾಗುತ್ತದೆ. ಒಂದು ವೇಳೆ ಅಲ್ಲಿ ಅಂಕಗಳು ಕಡಿಮೆ ಬಂದರೆ, ಮತ್ತೆ ಅವರಿಗೆ ಹಳೆ ಫಲಿತಾಂಶ ನೀಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು.

ಈಗ ಬರೋಬ್ಬರಿ 878 ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ನೀಡಿದ ಫಲಿತಾಂಶವನ್ನು ತಿರಸ್ಕರಿಸಿದ್ದಾರೆ. ಹೀಗಾಗಿ ಇವರಿಗೆ ಇದೇ ಆಗಸ್ಟ್ 19ರಂದು ಪಿಯುಸಿ ಪರೀಕ್ಷೆಯನ್ನು ನಡೆಸಲು ಪಿಯು ಬೋರ್ಡ್​ ನಿರ್ಧಾರ ಮಾಡಿದೆ. ಈ ವಿದ್ಯಾರ್ಥಿಗಳು ಪರೀಕ್ಷೆ ಬರೆದ ಬಳಿಕ ಆ ಫಲಿತಾಂಶವೂ ಸಮಾಧಾನ ತಂದಿಲ್ಲ ಎಂದರೆ, ಮತ್ತೆ ಹಳೇ ಫಲಿತಾಂಶ ಸಿಗುವುದಿಲ್ಲ.
ಶಿಕ್ಷಣ ಇಲಾಖೆ ಸುಮಾರು 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪಾಸ್ ಮಾಡಿತ್ತು. ಇದೀಗ 878 ವಿದ್ಯಾರ್ಥಿಗಳು ಫಲಿತಾಂಶ ಸಮಾಧಾನ ತಂದಿಲ್ಲ ಎಂದು ತಿರಸ್ಕರಿಸಿದ್ದಾರೆ. ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆಯೊಂದರಲ್ಲೇ 221 ವಿದ್ಯಾರ್ಥಿಗಳು ಪಿಯು ಫಲಿತಾಂಶವವನ್ನು ತಿರಸ್ಕಾರ ಮಾಡಿದ್ದಾರೆ.

ಜಿಲ್ಲೆಯ 221 ಫ್ರೆಶರ್​ ಹಾಗೂ 16 ರಿಪೀಟರ್ಸ್ ವಿದ್ಯಾರ್ಥಿಗಳು ಪಿಯು ಫಲಿತಾಂಶವನ್ನು ತಿರಸ್ಕರಿಸಿದ್ದಾರೆ. ಇದರಲ್ಲಿ ಕೊಟ್ಟೂರು ಇಂದು ಪಿಯು ಕಾಲೇಜಿನ 104 ವಿದ್ಯಾರ್ಥಿಗಳು ಫಲಿತಾಂಶ ಸಮಾಧಾನ ತಂದಿಲ್ಲ ಎಂದು ತಿರಸ್ಕಾರ ಮಾಡಿದ್ದಾರೆ. 

ಪಿಯು ಬೋರ್ಡ್ ನೀಡಿದ ಅಂಕಗಳಿಗೆ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮಗೆ SSLC, 1st PUC ಅಂಕ ಕಡಿಮೆ ಇದೆ. ಹೀಗಾಗಿ ಪರೀಕ್ಷೆ ಬರೆದೇ ಇನ್ನೂ ಹೆಚ್ಚಿನ ಅಂಕ ಪಡೆಯುವ ಕಾರಣದಿಂದ ಫಲಿತಾಂಶ ತಿರಸ್ಕರಿಸಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಕೊರೋನಾ ಹಿನ್ನೆಲೆ ಈ ವರ್ಷ ಪರೀಕ್ಷೆ ನಡೆದಿಲ್ಲ. ಮೂರು ವರುಷದ ಅಂಕ ಪರಿಗಣಿಸಿ ಫಲಿತಾಂಶ ನೀಡಲಾಗಿತ್ತು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ದಕ್ಷಿಣ ಕನ್ನಡ, ಉಡುಪಿ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜು.19 ರಂದು ಶಾಲೆ ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜು.20 ರಂದು ಶಾಲೆ ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜು.20 ರಂದು ಶಾಲೆ ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ದಕ್ಷಿಣ ಕನ್ನಡ ಜಿಲ್ಲೆ: ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಹಿನ್ನಲೆ ಜುಲೈ 20 ರಂದು

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು