ಆಂಬ್ಯುಲೆನ್ಸ್ನಲ್ಲಿಯೇ ಹೆರಿಗೆ; ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
Twitter
Facebook
LinkedIn
WhatsApp
ಉಡುಪಿ: ಹೆರಿಗೆ ನೋವು ಹೆಚ್ಚಾಗಿದ್ದರಿಂದ 108 ಆಂಬ್ಯುಲೆನ್ಸ್ನಲ್ಲಿಯೇ ಮಹಿಳೆಯೊರ್ವರಿಗೆ ಹೆರಿಗೆ ಆದ ಘಟನೆ ಆದಿ ಉಡುಪಿ ಬಳಿ ನಡೆದಿದೆ.
ಆದಿ ಉಡುಪಿಯಿಂದ ಹೆರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಧ್ಯ ದಾರಿಯಲ್ಲಿ ಸರೋಜಾ (28) ಎಂಬ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಸಹಾಯಕರಾದ ಆಂಬುಲೆನ್ಸ್ ಚಾಲಕರು ತಾಯಿ ಮತ್ತು ಮಗುವನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸೇರಿಸಿದ್ದು, ತಾಯಿ ಮಗು ಆರೋಗ್ಯವಾಗಿ ಇದ್ದಾರೆ .