ಬುಧವಾರ, ಫೆಬ್ರವರಿ 21, 2024
ತನ್ನ ಬಗ್ಗೆ ಸುಳ್ಳು ಸುದ್ದಿಯ ಗ್ರಾಫಿಕ್ ಸೃಷ್ಟಿ ಮಾಡಿದವರ ವಿರುದ್ಧ ಕಾನೂನು ಕ್ರಮ - ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಸ್ಪಷ್ಟನೆ-ಲೋಕಸಭಾ ಚುನಾವಣೆಗೆ ಸ್ಪರ್ಧೆ ವಿಚಾರ: ಸ್ಪಷ್ಟನೆ ನೀಡಿದ ಡಾ. ಮಂಜುನಾಥ್-21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಿಗರೇಟ್ ಸೇದುವಂತಿಲ್ಲ : ದಂಡಗಳಲ್ಲಿ ಬದಲಾವಣೆ; ಇಲ್ಲಿದೆ ವಿವರ-Arecanut price :ಕುಸಿತ ಕಂಡ ಅಡಿಕೆ ಧಾರಣೆ; ಬೆಳೆಗಾರರಿಗೆ ಹೊಡೆತ ಬೀಳಲು ಕಾರಣವೇನು?-ಶೋಭಾ ಕರಂದ್ಲಾಜೆ ಲೋಕಸಭೆ ಚುನಾವಣೆ ಸ್ಪರ್ಧಿಸದಂತೆ ಬಿಜೆಪಿ ಕಾರ್ಯಕರ್ತರಿಂದ ಪತ್ರ ಚಳುವಳಿ..!-18 ವರ್ಷ ಬಳಿಕ ದುಬೈ ಜೈಲಿನಲ್ಲಿದ್ದು ಭಾರತಕ್ಕೆ ಮರಳಿ ಕುಟುಂಬದ ಜೊತೆ ಸೇರಿದ ಐವರು; ಇಲ್ಲಿದೆ ವಿಡಿಯೋ-Vidya Balan: ವಿದ್ಯಾ ಬಾಲನ್ ಹೆಸರಿನಲ್ಲಿ ಹಣ ವಸೂಲಿ ;ದೂರು ದಾಖಲು.!-Taruwar Kohli: ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ತರುವರ್ ಕೊಹ್ಲಿ..!-ಉಡುಪಿ : ಗಂಗೊಳ್ಳಿ ಬೋಟ್ ಅಗ್ನಿ ದುರಂತ; ರಾಜ್ಯ ಸರ್ಕಾರದಿಂದ 1.75 ಕೋ. ಪರಿಹಾರ ಮಂಜೂರು..!-ಮೆಫೆಡ್ರೋನ್‌ ಎಂಬ 2,500 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಅಪಘಾತಗೊಂಡಿದ್ದವರನ್ನು ಉಪಚರಿಸುತ್ತಿದ್ದ ವೇಳೆ ಟ್ಯಾಂಕರ್ ನಡಿಗೆ ಸಿಲುಕಿ ಸುಳ್ಯದ ಯುವಕ ಮೃತ್ಯು

Twitter
Facebook
LinkedIn
WhatsApp
ಅಪಘಾತಗೊಂಡಿದ್ದವರನ್ನು ಉಪಚರಿಸುತ್ತಿದ್ದ ವೇಳೆ ಟ್ಯಾಂಕರ್ ನಡಿಗೆ ಸಿಲುಕಿ ಸುಳ್ಯದ ಯುವಕ ಮೃತ್ಯು

ಮಂಗಳೂರು:ಮಂಗಳೂರಿನ ಬೈಕಂಪಾಡಿ ಬಳಿ ಅಪಘಾತಗೊಂಡಿದ್ದವರೊಬ್ಬರನ್ನು ಉಪಚರಿಸುತ್ತಿದ್ದ ವೇಳೆ ಬಂದ ಟ್ಯಾಂಕರೊಂದಕ್ಕೆ‌ ಸಿಲುಕಿ ಎಳೆಯಲ್ಪಟ್ಟು ದೊಡ್ಡತೋಟದ ಯುವಕ ತೇಜಸ್ ಮೇರ್ಕಜೆ ದಾರುಣವಾಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.

ದೊಡ್ಡತೋಟ ಬಳಿಯ ಮೇರ್ಕಜೆ ಪುರುಷೋತ್ತಮ ಎಂಬವರ ಪುತ್ರ ತೇಜಸ್ ಮಂಗಳೂರಿನಲ್ಲಿ ಇಲೆಕ್ಟ್ರೀಷಿಯನ್ ಆಗಿ ಉದ್ಯೋಗ ಮಾಡುತ್ತಿದ್ದು, ನಿನ್ನೆ(ಜು.10) ಸಂಜೆಯ ವೇಳೆ ಕರ್ತವ್ಯ ಮುಗಿಸಿ ಮರಳುತ್ತಿದ್ದಾಗ ಮಂಗಳೂರಿನ ಬೈಕಂಪಾಡಿ ಎಂಬಲ್ಲಿ ದ್ವಿಚಕ್ರ ವಾಹನವೊಂದು ಅಪಘಾತಕ್ಕೀಡಾಗಿರುವುದನ್ನು ಕಂಡರು.
ತೇಜಸ್ ರವರು ಅಪಘಾತಗೊಂಡಿದ್ದ ದ್ವಿಚಕ್ರ ವಾಹನ ಸವಾರರನ್ನು ಉಪಚರಿಸಿ, ಅಡ್ಡಬಿದ್ದಿದ್ದ ದ್ವಿಚಕ್ರವಾಹನವನ್ನು ಎತ್ತಿ ನಿಲ್ಲಿಸಿ, ಅದರಲ್ಲಿ ಕೂತು ದೂಡಿಕೊಂಡು ರಸ್ತೆಯ ಬದಿಗೆ ತರುತ್ತಿದ್ದರೆನ್ನಲಾಗಿದೆ. ಈ ವೇಳೆಗೆ ಅದೇ ರಸ್ತೆಯಲ್ಲಿ ಬಂದ ಟ್ಯಾಂಕರೊಂದು ತೇಜಸ್ ದೂಡಿಕೊಂಡು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆಯಿತು. ಲಾರಿಯ ಒಂದು ಬದಿಯ ಕಬ್ಬಣದ ಪೈಪ್ ತೇಜಸ್ ರವರ ಕಾಲಿನ ಮಧ್ಯೆ ಸಿಲುಕಿ ರಸ್ತೆಯಲ್ಲಿ ವಾಹನ ಸಮೇತ ಎಳೆಯಿತೆನ್ನಲಾಗಿದೆ. ಇದರಿಂದ ಸೊಂಟದ ಕೆಳಭಾಗ ಗಂಭೀರ ಗಾಯಗೊಂಡ ತೇಜಸ್ ರವರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ತಂದು ಅಲ್ಲಿಂದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. . ಆದರೆ ವಿಪರೀತ ರಕ್ತಸ್ರಾವದಿಂದ ಆರೋಗ್ಯದಲ್ಲಿ ಏರುಪೇರಾ‌ಗಿ ಜು.11 ರಂದು ಮುಂಜಾನೆ ಕೊನೆಯುಸಿರೆಳೆದರು. ಮೃತರ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಮೃತಶರೀರದ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು