
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ಕೊಡಗು ಪಶ್ಚಿಮ ಘಟ್ಟದಲ್ಲಿ ಬರುವ ಅಪೂರ್ವ ಜಿಲ್ಲೆ. ಈ ಕೊಡಗಿನ ಅಂಚಿನಲ್ಲಿ ಬರುವ ಕರಿಕೆ ಎಂಬ ಪ್ರದೇಶದಲ್ಲಿ ಬ್ರಹ್ಮಗಿರಿ ಪರ್ವತಗಳು ಹಾದುಹೋಗುತ್ತವೆ.
ಈ ಬ್ರಹ್ಮಗಿರಿ ಪರ್ವತಗಳು ಒಳಗೊಳ್ಳುವ ಕರಿಕೆ ಅರಣ್ಯ ವಿಶೇಷವಾದ ಮರ, ಸಸ್ಯಗಳಿಂದ ಕೂಡಿರುವ ಪ್ರದೇಶ. ಎಲ್ಲಿಯೂ ಕಾಣಸಿಗದ ಅಪೂರ್ವ ಅರಣ್ಯಗಳನ್ನು ಇಲ್ಲಿ ನಾವು ಕಾಣಬಹುದು. ಕೇರಳದ ಪಾಣತ್ತೂರು ಗಡಿಪ್ರದೇಶದಲ್ಲಿ ಹಾಗೂ ಕೊಡಗಿನ ಭಾಗಮಂಡಲದ ಪ್ರದೇಶದವರೆಗೆ ಈ ಕಾಡುಗಳು ವ್ಯಾಪಿಸಿವೆ.
ಈ ಕಾಡುಗಳಲ್ಲಿ ವಿಶಿಷ್ಟವಾದ ಮರಗಳು ಕಂಡುಬರುತ್ತವೆ. ಈ ರೀತಿ ಕಂಡುಬರುವ ಕಾಡುಗಳು ಬೇರೆ ಎಲ್ಲಿಯೂ ಕಂಡುಬರುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಈ ಕಾಡುಗಳಲ್ಲಿ ಹೇರಳವಾಗಿ ಔಷಧಿ ಸಸ್ಯಗಳು ಕಂಡುಬರುತ್ತಿರುವುದು ಇನ್ನೊಂದು ವಿಶೇಷ. ಇಂತಹ ಅರಣ್ಯಗಳನ್ನು ಸಂರಕ್ಷಿಸ ಬೇಕಾಗಿದ್ದು ನಮ್ಮೆಲ್ಲರ ಕರ್ತವ್ಯವೂ ಹೌದು.
ನೇರವಾಗಿ ಬೆಳೆಯುವಂತಹ ವಿವಿಧ ಜಾತಿಯ ಮರಗಳು ಈ ಕಾಡುಗಳಲ್ಲಿ ಕಂಡು ಬರುತ್ತಿದೆ. ಅದೇ ರೀತಿ ಔಷಧದ ವಿವಿಧ ಜಾತಿಯ ಸಸ್ಯಗಳು ಕಂಡುಬರುತ್ತಿರುವುದು ಬೇರೆ ಯಾವ ಪ್ರದೇಶದಲ್ಲಿ ಕಾಣಲು ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು.
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್