ಭಾನುವಾರ, ಮೇ 26, 2024
ಹೈದರಾಬಾದನ್ನು 8 ವಿಕೆಟ್ ಗಳಿಂದ ಸೋಲಿಸಿ ಚಾಂಪಿಯನ್ಶಿಪ್ ಪಟ್ಟಕ್ಕೆ ಮುತ್ತಿಕ್ಕಿದ ಕೆಕೆಆರ್..!-ಜೂನ್ 1 ರಿಂದ ಐದು ದಿನ ಮದ್ಯ ಮಾರಾಟ ಬಂದ್..!-ನಾನು ಕೈಹಿಡಿದು ಬೆಳೆಸಿದವರೇ ನನ್ನನ್ನು ವಜಾ ಮಾಡಲು ಶಿಫಾರಸ್ಸು ಮಾಡಿದ್ದಾರೆ; ರಘುಪತಿ ಭಟ್-ಚುನಾವಣೆ ಗೆದ್ದು ಬಿಜೆಪಿಯ ಶಾಸಕನಾಗುತ್ತೇನೆ; ಜಗದೀಶ್ ಶೆಟ್ಟರ್ ನನಗೆ ಮಾದರಿ - ರಘುಪತಿ ಭಟ್-ಎಸ್ಆರ್ ಹೆಚ್ ತಂಡದ ಮಾಲಕಿ ನ್ಯಾಷನಲ್ ಕ್ರಶ್ ಕಾವ್ಯ ಮಾರನ್ ಹಿನ್ನೆಲೆ ಏನು..!-ಉಡುಪಿ: ನಡು ರಸ್ತೆಯಲ್ಲೇ ಎರಡು ತಂಡದ ಯುವಕರ ನಡುವೆ ಗ್ಯಾಂಗ್ ವಾರ್; ಇಲ್ಲಿದೆ ವಿಡಿಯೋ-ಬಸ್ಸನ್ನು ಚಲಾಯಿಸುವಾಗಲೇ ಛತ್ರಿ ಹಿಡಿದು ವಿಡಿಯೋ ಮಾಡಿದ ಡ್ರೈವರ್; ನಿರ್ವಾಹಕಿ ಮತ್ತು ಚಾಲಕ ಸಸ್ಸೆಂಡ್..!-ಬಸ್ಸನ್ನು ಚಲಾಯಿಸುವಾಗಲೇ ಛತ್ರಿ ಹಿಡಿದು ವಿಡಿಯೋ ಮಾಡಿದ ಡ್ರೈವರ್; ನಿರ್ವಾಹಕಿ ಮತ್ತು ಚಾಲಕ ಸಸ್ಸೆಂಡ್..!-ಪೋರ್ಷೆ ಕಾರು ಅಪಘಾತ ಪ್ರಕರಣ: ಅಪ್ರಾಪ್ತನ ತಂದೆಗೆ ನ್ಯಾಯಾಂಗ ಬಂಧನ ; ಇಬ್ಬರು ಪೊಲೀಸರು ಅಮಾನತು..!-miyazaki mango: ಜಗತ್ತಿನಲ್ಲಿ ದುಬಾರಿ ಮಾವಿನ ಹಣ್ಣಿನ ಪಟ್ಟಿಯಲ್ಲಿ ಮಿಯಾಜಕಿ ಹಣ್ಣಿನ ವಿಶೇಷತೆ ಏನು..?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಅತ್ಯಾಚಾರ ಪ್ರಕರಣ: ಪತ್ರಕರ್ತ ತರುಣ್‌ ತೇಜ್‌ಪಾಲ್‌ ಆರೋಪಮುಕ್ತ

Twitter
Facebook
LinkedIn
WhatsApp
ಅತ್ಯಾಚಾರ ಪ್ರಕರಣ: ಪತ್ರಕರ್ತ ತರುಣ್‌ ತೇಜ್‌ಪಾಲ್‌ ಆರೋಪಮುಕ್ತ
ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಗೋವಾದ ಪತ್ರಕರ್ತ ತರುಣ್‌ ತೇಜ್‌ಪಾಲ್‌ ಅವರನ್ನು ಆರೋಪಮುಕ್ತ ಎಂದು ಘೋಷಿಸಿ, ಪ್ರಕರಣದಿಂದ ಖುಲಾಸೆಗೊಳಿಸಿ ಗೋವಾ ನ್ಯಾಯಾಲಯ ತೀರ್ಪು ನೀಡಿದೆ. ತೆಹಲ್ಕಾ ಮ್ಯಾಗಜಿನ್​ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ ತರುಣ್​ ತೇಜ್​ಪಾಲ್​ ಅವರು ತಮ್ಮ ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಿಲಾಗಿತ್ತು. ಜಾಮೀನು ಪಡೆದು ಬಂಧನದಿಂದ ಹೊರ ಬಂದಿದ್ದ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.

2013ರಲ್ಲಿ ನಡೆದ ಸಮ್ಮೇಳನದ ಸಮಯದಲ್ಲಿ ತಮ್ಮ ಮ್ಯಾಗಜಿನ್​ನ ಕಿರಿಯ ಸಹೋದ್ಯೋಗಿ ಮೇಲೆ ಗೋವಾದ ಪಂಚತಾರಾ ರೆಸಾರ್ಟ್‌ನ ಲಿಫ್ಟ್​ನಲ್ಲಿ ತೇಜ್​ಪಾಲ್ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಲಾಗಿತ್ತು. ಆರೋಪಕ್ಕೆ ಸಂಬಂಧಿಸಿದಂತೆ ತೇಜ್​ಪಾಲ್​ ವಿರುದ್ಧ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಲಾಗಿತ್ತು. ತಮ್ಮ ಮೇಲಿನ ಆರೋಪದ ವಿರುದ್ದ ತೇಜ್ ಪಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು