- ಕ್ರೀಡೆ
- 7:57 ಫೂರ್ವಾಹ್ನ
- ಜನವರಿ 6, 2023
ಅಕ್ಸರ್, ಶಿವಂ ಹೋರಾಟಕ್ಕೆ ಲಂಕಾ ಗಾಬರಿ, ಶ್ರೀಲಂಕಾ ವಿರುದ್ದ ಟೀಮ್ ಇಂಡಿಯಾಗೆ ವೀರೋಚಿತ ಸೋಲು

ಪುಣೆ: ಪುಣೆಯಲ್ಲಿ ನಡೆದ ಭಾರತ- ಲಂಕಾ ನಡುವಿನ 2 ನೇ ಟಿ20 ಪಂದ್ಯದಲ್ಲಿ ಲಂಕಾ ಭಾರತದ ವಿರುದ್ಧ 16 ರನ್ ಗಳ ಜಯ ದಾಖಲಿಸಿದೆ.
ಲಂಕಾ ತಂಡ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತಕ್ಕೆ 207 ರನ್ ಗಳ ಬೃಹತ್ ಗುರಿ ನೀಡಿತ್ತು. ಭಾರತದ ಆರಂಭಿಕ ಆಟಗಾರರು ಬೇಗ ವಿಕೆಟ್ ಒಪ್ಪಿಸಿದ್ದು ಆರಂಭದಲ್ಲಿ ಭಾರತಕ್ಕೆ ಹಿನ್ನೆಡೆಯಾಗಿತ್ತು.
9 ನೇ ಓವರ್ ವೇಳೆಗೆ 57 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದರಿಂದ ಭಾರತದ ಗೆಲುವಿನ ಆಸೆ ಮರೀಚಿಕೆಯಾಗಿತ್ತು. ಆದರೆ ಅಕ್ಷರ್ ಪಟೇಲ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಜೊತೆಯಾಟದ ಪರಿಣಾಮ ಭಾರತದ ಗೆಲುವಿನ ಆಸೆ ಜೀವಂತವಾಗಿತ್ತು. 41 ಎಸೆತಗಳಲ್ಲಿ ಅಕ್ಷರ್ ಪಟೇಲ್ ಹಾಗೂ ಸೂರ್ಯ ಕುಮಾರ್ ಯಾದವ್ ಅವರ 91 ರನ್ ಜೊತೆಯಾಟದ ಪರಿಣಾಮ ಭಾರತ ಗೆಲುವಿನ ಸನಿಹಕ್ಕೆ ಬಂದಿತ್ತು. ಆದರೆ ಭಾರತ 8 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿ ಸೋಲು ಅನುಭವಿಸಿತು.
ಇಡೀ ಪಂದ್ಯದಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆಯಾಗಿದ್ದು ಒಟ್ಟು 26 ಸಿಕ್ಸರ್ ಹಾಗೂ 21 ಬೌಂಡರಿಗಳು ದಾಖಲಾಯಿತು.
ಕೊನೆಯ ಓವರ್ನಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 21 ರನ್ಗಳ ಅವಶ್ಯಕತೆಯಿತ್ತು. ಶಾನಕ ಎಸೆದ ಅಂತಿಮ ಓವರ್ನ ಮೊದಲ ಎಸೆತದಲ್ಲಿ ಮಾವಿ 1 ರನ್ ಕಲೆಹಾಕಿದರು. 2ನೇ ಎಸೆತದಲ್ಲಿ ಅಕ್ಷರ್ ಪಟೇಲ್ 2 ರನ್ ಓಡಿದರು. ಮೂರನೇ ಎಸೆತದಲ್ಲಿ ಅಕ್ಷರ್ ಬಾರಿಸಿದ ಚೆಂಡು ಬೌಂಡರಿ ಲೈನ್ನಲ್ಲಿ ಕ್ಯಾಚ್ ಆಯಿತು. ಇದರೊಂದಿಗೆ 31 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ನೊಂದಿಗೆ 65 ರನ್ ಬಾರಿಸಿದ್ದ ಅಕ್ಷರ್ ಪಟೇಲ್ ಇನಿಂಗ್ಸ್ ಅಂತ್ಯವಾಯಿತು. ಅಂತಿಮವಾಗಿ ಕೇವಲ 4 ರನ್ ನೀಡಿದ ದುಸನ್ ಶನಕಾ ಶ್ರೀಲಂಕಾ ತಂಡಕ್ಕೆ 16 ರನ್ಗಳ ಜಯ ತಂದುಕೊಟ್ಟರು.