ಭಾನುವಾರ, ಏಪ್ರಿಲ್ 21, 2024
ಬಂಟ್ವಾಳದಲ್ಲಿ ಮತ್ತೊಬ್ಬ ಬಿಲ್ಲವ ನಾಯಕನನ್ನು ಸೆಳೆದ ಬಿಜೆಪಿ. ಪುರಸಭಾ ಸದಸ್ಯ ಗಂಗಾಧರ ಪೂಜಾರಿ ಬಿಜೆಪಿ ಸೇರ್ಪಡೆ!-ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ ಪರ ಇಂದು ದರ್ಶನ್ ಬೃಹತ್ ರೋಡ್ ಶೋ..!-ನದಿಯಲ್ಲಿ ದೋಣಿ ಮುಳುಗಿ ಇಬ್ಬರ ಸಾವು; 7 ಮಂದಿ ನಾಪತ್ತೆ..!-ಇಂದು ಬೆಂಗಳೂರು ಮತ್ತು ಚಿಕ್ಕಬಳ್ಳಾಪುರಕ್ಕೆ ಮೋದಿ ಆಗಮನ..!-Rain Alert: ಕರಾವಳಿ ಮತ್ತು ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆ ಮುನ್ಸೂಚನೆ..!-ಅರವಿಂದ್ ಕೇಜ್ರಿವಾಲ್ ರನ್ನು ಜೈಲಿನಲ್ಲೇ ಹತ್ಯೆಗೆ ಸಂಚು ಮಾಡಲಾಗುತ್ತಿದೆ; ಎಎಪಿ ನಾಯಕಿ ಅತಿಶಿ ಆರೋಪ.!-ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ-ಇಂದು ಮೊದಲ ಹಂತದ ಲೋಕಸಭಾ ಚುನಾವಣೆ ಆರಂಭ ; ಯಾವೆಲ್ಲಾ ರಾಜ್ಯಗಳಲ್ಲಿ.!-ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!-ಹಾಡಹಗಲೇ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಅಕ್ರಮ ಸಂಬಂಧಕ್ಕೆ ವಿಶಾಲಾ ಗಾಣಿಗ ಹತ್ಯೆ?

Twitter
Facebook
LinkedIn
WhatsApp
ಉಡುಪಿಯ ವಿಶಾಲ ಗಾಣಿಗ ಕೊಲೆ ಪ್ರಕರಣ- ತನಿಖೆ ಚುರುಕು, ಪೊಲೀಸರ 4 ತಂಡ ರಚನೆ.

ಉಡುಪಿ : ಕರಾವಳಿಯನ್ನೇ ಬೆಚ್ಚಿಬೀಳಿಸಿದ್ದ ವಿಶಾಲಾ ಗಾಣಿಗ ಕೊಲೆ ಪ್ರಕರಣದಲ್ಲಿ ಒಂದೊಂದೇ ಸೀಕ್ರೆಟ್‌ ಬಯಲಾಗುತ್ತಿದೆ. ಇದೀಗ ಪತಿ ರಾಮಕೃಷ್ಣ ತನ್ನ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯನ್ನು ಹತ್ಯೆಗೈದಿದ್ದ ಅನ್ನೋದು ಪೊಲೀಸ್‌ ತನಿಖೆಯಿಂದ ಬಯಲಾಗಿದ್ದು, ಹಲವು ಸೀಕ್ರೆಟ್‌ಗಳನ್ನು ಪಾಪಿ ಬಾಯ್ಬಿಟ್ಟಿದ್ದಾನೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದಲ್ಲಿರುವ ಉಪ್ಪಿನಕೋಟೆಯ ಅಪಾರ್ಟ್‌ಮೆಂಟ್‌ನಲ್ಲಿ ಜುಲೈ 12 ರಂದು ನಡೆದಿದ್ದ ವಿಶಾಲಾ ಗಾಣಿಗ ಕೊಲೆ ಪ್ರಕರಣ ಕರಾವಳಿಗರನ್ನೇ ಬೆಚ್ಚಿ ಬೀಳಿಸಿತ್ತು. ಆದ್ರೆ ಪೊಲೀಸರು ಪ್ರಕರಣವನ್ನು ಒಂದೇ ವಾರದಲ್ಲಿ ಭೇಧಿಸುವ ಮೂಲಕ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಅಲ್ಲದೇ ವಿಶಾಲಾ ಗಾಣಿಗ ಪತಿಯೇ ಪತ್ನಿಯನ್ನು ಸುಫಾರಿ ಕೊಟ್ಟು ಹತ್ಯೆ ಮಾಡಿರೋದನ್ನೂ ಬಯಲು ಮಾಡಿದ್ದಾರೆ. ಆದ್ರೀಗ ಪೊಲೀಸರ ತನಿಖೆಯಿಂದ ಕೊಲೆಯ ಹಿಂದಿನ ಇನ್ನಷ್ಟು ರಹಸ್ಯ ಬಯಲಾಗಿದೆ.

ರಾಮಕೃಷ್ಣ ಗಾಣಿಗ ಹಾಗೂ ವಿಶಾಲಾ ಗಾಣಿಗ ದುಬೈನಲ್ಲಿ ನೆಲೆಸಿದ್ದರು. ಆದರೆ ರಾಮಕೃಷ್ಣ ಗಾಣಿಗ ಬೈಂದೂರು ಸಮೀಪದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇದೇ ವಿಚಾರವಾಗಿ ಪತ್ನಿ ವಿಶಾಲಾ ಗಾಣಿಗ ಬಳಿಯಲ್ಲಿ ವಿಚ್ಚೇಧನ ನೀಡೋದಕ್ಕೂ ಒತ್ತಾಯ ಮಾಡುತ್ತಿದ್ದ. ಆದರೆ ವಿಶಾಲಾ ಗಾಣಿಗ ತನ್ನ ಪತಿಯಿಂದ ದೂರವಾಗೋದಕ್ಕೆ ಸಿದ್ದರಿರಲಿಲ್ಲ. ಇದೇ ಕಾರಣಕ್ಕೇ ರಾಮಕೃಷ್ಣ ಗಾಣಿಗ ಪತ್ನಿಯ ಹತ್ಯೆ ಮಾಡೋದಕ್ಕೆ ಮುಂದಾಗಿದ್ದಾನೆ.

ರಾಮಕೃಷ್ಣ ಗಾಣಿಗ ವಿಚಾರಣೆ ಪೂರ್ಣಗೊಳಿಸಿದ ಬೆನ್ನಲ್ಲೇ ನ್ಯಾಯಾಲಯ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆದರೆ ಪೊಲೀಸರ ವಿಚಾರಣೆಯಲ್ಲಿ ಕೊಲೆಗೆ ಯಾವ ರೀತಿಯಲ್ಲಿ ಪ್ಲ್ಯಾನ್‌ ಮಾಡಿದ್ದೇ ಅನ್ನೋದನ್ನು ಬಾಯ್ಬಿಟ್ಟಿದ್ದಾನೆ. ವಿಶಾಲಾ ಗಾಣಿಗ ಹತ್ಯೆಗೆ ರಾಮಕೃಷ್ಣ ಗಾಣಿಗ ಸುಮಾರು ಆರು ತಿಂಗಳ ಹಿಂದೆಯೇ ಪ್ಲ್ಯಾನ್‌ ಮಾಡಿದ್ದ. ಅಂದಿನಿಂದಲೇ ಪತ್ನಿಯ ಮೇಲೆ ಅಪಾರವಾದ ಪ್ರೀತಿಯನ್ನು ತೋರಿಸುತ್ತಿದ್ದ. ಪದೇ ಪದೇ ಡಾರ್ಲಿಂಗ್‌ …. ಡಾರ್ಲಿಂಗ್‌ ಅಂತಾನೇ ಕರೆಯುತ್ತಿದ್ದ. ಅಲ್ಲದೇ ಕೊಲೆ ಮಾಡಿದ ನಂತರ ದಲ್ಲಿಯೂ ಪತ್ನಿಗೆ ಡಾರ್ಲಿಂಗ್‌ ಅಂತಾನೇ ಮಸೇಜ್‌ ಮಾಡಿದ್ದಾನೆ.

ಪತ್ನಿಯ ಕಡೆಯವರಿಗೆ ತನ್ನ ಮೇಲೆ ಯಾವುದೇ ರೀತಿಯಲ್ಲಿಯೂ ಅನುಮಾನ ಬರಬಾರದು ಅನ್ನೋ ಕಾರಣಕ್ಕೆ ಪತ್ನಿ ವಿಶಾಲಾ ಗಾಣಿಗ ಹೆಸರಲ್ಲಿ ಒಂದಿಷ್ಟು ಆಸ್ತಿ ಮಾಡಿಟ್ಟಿದ್ದ. ಕಳೆದ ಆರು ತಿಂಗಳಿನಿಂದಲೂ ಹೆಚ್ಚು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದು, ಊರಿಗೆ ಬಂದಾಗಲಂತೂ ಇಬ್ಬರೂ ಅನ್ಯೋನ್ಯವಾಗಿದ್ದಾರೆಂಬಂತೆ ನಾಟಕವಾಡುತ್ತಿದ್ದ ಅಂತಾ ವಿಶಾಲಾ ಸಂಬಂಧಿಕರು ಹೇಳುತ್ತಿದ್ದಾರೆ.

ತನ್ನ ಸ್ನೇಹಿತನ ಸಹಕಾರದಿಂದ ಪತ್ನಿಯನ್ನು ಸುಫಾರಿ ಕೊಟ್ಟು ಹತ್ಯೆ ಮಾಡಿದ್ದಾನೆ. ತಾನು ಅರಬ್‌ ರಾಷ್ಟ್ರದಲ್ಲಿ ಕುಳಿತು ಕೃತ್ಯವೆಸಗಿದ್ರೆ ತಾನು ಬಚಾವ್‌ ಆಗ್ತೇನೆ ಅನ್ನೋ ಪ್ಲ್ಯಾನ್ ಮಾಡಿದ್ದ ರಾಮಕೃಷ್ಣ ಕಂಬಿ ಹಿಂದೆ ಸೇರಿದ್ದಾನೆ. ಸುಫಾರಿ ಪಡೆದು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳ ಪೈಕಿ ಓರ್ವ ಆರೋಪಿಯನ್ನು ಉಡುಪಿ ಪೊಲೀಸರು ನೇಪಾಳ ಗಡಿ ಯಿಂದ ಬಂಧಿಸಿ ಕರೆ ತಂದಿದ್ದಾರೆ. ಇನ್ನೋರ್ವ ಆರೋಪಿಗಾಗಿ ಉಡುಪಿ ಪೊಲೀಸರ ತಂಡ ಉತ್ತರ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದೆ. ಅಲ್ಲದೇ ರಾಮಕೃಷ್ಣನಿಗೆ ಸುಫಾರಿ ಕಿಲ್ಲರ್ಸ್‌ ಪರಿಚಯ ಮಾಡಿಕೊಟ್ಟಿದ್ದ ಡೀಲ್‌ ಮಾಸ್ಟರ್‌ಗಾಗಿ ಮುಂಬೈನಲ್ಲಿ ಹುಡುಕಾಟ ನಡೆಸಲಾಗುತ್ತಿದ್ದು, ಪೊಲೀಸರ ಮತ್ತೊಂದು ತಂಡ ಮುಂಬೈಗೆ ತೆರಳಲಿದೆ ಎಂದು ಉಡುಪಿ ಎಸ್ಪಿ ವಿಷ್ಣುವರ್ಧನ್
ತಿಳಿಸಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು